ಲಾಡರ್ಹಿಲ್: ವಿಂಡೀಸ್ ವಿರುದ್ಧ ನಡೆದ ನಿರ್ಣಾಯಕ ಪಂದ್ಯದಲ್ಲಿ ಶುಭಮನ್ ಗಿಲ್ (Shubman Gill) ಅವರ ಔಟ್ ಈಗ ವಿವಾದಕ್ಕೆ ಕಾರಣವಾಗಿದೆ. 4ನೇ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಗಿಲ್ ನಿರ್ಣಾಯಕ ಪಂದ್ಯದಲ್ಲಿ ಕೈಕೊಟ್ಟರು ಎಂಬ ಟೀಕೆಗಳ ಮಧ್ಯೆ ಗಿಲ್ ಔಟಾದ ಕುರಿತು ಚರ್ಚೆಯೊಂದು ಹುಟ್ಟಿಕೊಂಡಿದೆ.
— LePakad7???????????????? (@AreBabaRe2) August 13, 2023
ಮೊದಲ ಓವರ್‌ನ 5ನೇ ಎಸೆತದಲ್ಲೇ ಯಶಸ್ವಿ ಜೈಸ್ವಾಲ್ ಸುಲಭ ಕ್ಯಾಚ್‌ಗೆ ತುತ್ತಾದರು. ಆ ನಂತರ 2ನೇ ಓವರ್‌ನಲ್ಲಿ ಅಕೇಲ್ ಹೊಸೈನ್ (Akeal Hosein) ಬೌಲಿಂಗ್ ಮಾಡಿದ 5ನೇ ಎಸೆತದಲ್ಲಿ ಶುಭಮನ್ ಗಿಲ್ ಲೆಗ್ ಸೈಡ್ ಮಿಡ್ ಆಫ್‌ಗೆ ಬೌಂಡರಿ ಬಾರಿಸಲು ಪ್ರಯತ್ನಿಸಿದರು. ಆದ್ರೆ ಬಾಲ್ ಪ್ಯಾಡ್‌ಗೆ ಬಡಿಯಿತು. ಆನ್‌ಫೀಲ್ಡ್ ಅಂಪೈರ್ ನೇರವಾಗಿ ಔಟ್ ತೀರ್ಪು ನೀಡಿದರು. ಈ ವೇಳೆ ನಾನ್ ಸ್ಟ್ರೈಕ್‌ನಲ್ಲಿದ್ದ ಸೂರ್ಯಕುಮಾರ್ ಯಾದವ್ DRS ತೆಗೆದುಕೊಳ್ಳುವಂತೆ ಹೇಳಿದರೂ ಕೇಳದೇ ಗಿಲ್ ನೇರವಾಗಿ ಫೀಲ್ಡ್‌ನಿಂದ ಹೊರನಡೆದರು. ನಂತರ ಡಿಆರ್‌ಎಸ್ ರಿವಿವ್ಯೂನಲ್ಲಿ ನೋಡಿದಾಗ ಅದು ನಾಟೌಟ್ ಆಗಿತ್ತು. ಗಿಲ್ ಗ್ರೌಂಡ್‌ನಿಂದ ಹೊರೆನಡೆದಿದ್ದರಿಂದ ಔಟ್ ಎಂದೇ ನಿರ್ಧರಿಸಲಾಯಿತು. ಇದನ್ನೂ ಓದಿ: 7 ವರ್ಷಗಳ ಬಳಿಕ ಭಾರತದ ವಿರುದ್ಧ T20 ಸರಣಿ ಜಯ – ಹೊಸ ದಾಖಲೆ ಬರೆದ ವಿಂಡೀಸ್
ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ (Team India) ಸಾಧಾರಣ ಮೊತ್ತ ಕಲೆಹಾಕಲು ಹೆಣಗಾಡಿತ್ತು. ಆದ್ರೆ ಕಳಪೆ ಬೌಲಿಂಗ್‌ನಿಂದ ಹೀನಾಯ ಸೋಲು ಅನುಭವಿಸಬೇಕಾಯಿತು. ಗಿಲ್ ಡಿಆರ್‌ಎಸ್ ತೆಗೆದುಕೊಂಡಿದ್ದರೆ ಟೀಂ ಇಂಡಿಯಾಕ್ಕೆ ಮತ್ತಷ್ಟು ರನ್ ಸೇರ್ಪಡೆಯಾಗುತ್ತಿತ್ತು. ಇದರಿಂದ ಸರಣಿಯ ಜಯ ಸಾಧಿಸುವ ಹೆಚ್ಚಿನ ಸಾಧ್ಯತೆಗಳು ಇರುತ್ತಿತ್ತು ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಏಷ್ಯಾಕಪ್ (T20 AsiaCup) ಟೂರ್ನಿಯಲ್ಲೂ ಕೆ.ಎಲ್ ರಾಹುಲ್ (KL Rahul) ಸಹ ನಾಕೌಟ್ ಪಂದ್ಯದಲ್ಲಿ ನಾಟೌಟ್ ಆಗಿದ್ದರೂ ಡಿಆರ್‌ಎಸ್ ತೆಗೆದುಕೊಳ್ಳದೇ ಔಟ್ ಅಂತಾ ಬಿಟ್ಟುಕೊಟ್ಟಿದ್ದರು. ಇದನ್ನೂ ಓದಿ: ಸೌದಿ ಕ್ಲಬ್ ಸೇರಿದ ಬಳಿಕ ಚೊಚ್ಚಲ ಟ್ರೋಫಿ ಗೆದ್ದ ರೊನಾಲ್ಡೊ – ಅಲ್-ನಾಸ್ರ್‌ಗೆ ಐತಿಹಾಸಿಕ ಜಯ
5 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಲಷ್ಟೇ ಸಾಧ್ಯವಾಯಿತು. 166 ರನ್‌ಗಳ ಗುರಿ ಪಡೆದ ವಿಂಡೀಸ್ 18 ಓವರ್‌ಗಳಲ್ಲೇ ಕೇವಲ 2 ವಿಕೆಟ್ ನಷ್ಟಕ್ಕೆ 171 ರನ್ ಚಚ್ಚಿ ಜಯ ಸಾಧಿಸಿತು. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 3-2 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿ ಕೈವಶ ಮಾಡಿಕೊಂಡಿತು.
Web Stories