ಫ್ಲೋರಿಡಾ: ಅಮೆರಿಕಾದ ಫ್ಲೋರಿಡಾದಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಮೊದಲ ಟಿ-20 ಪಂದ್ಯದಲ್ಲಿ ಭಾರತ 4 ವಿಕೆಟ್ ಗೆಲುವು ಪಡೆದಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಪರ ಮಿಂಚಿನ ಬೌಲಿಂಗ್ ದಾಳಿ ನಡೆಸಿದ ಬೌಲರ್ ಗಳು ವಿಂಡೀಸ್ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಪಡೆದು 95 ರನ್ ಗಳಿಗೆ ಕಟ್ಟಿಹಾಕಲು ಯಶಸ್ವಿಯಾದರು. ಸುಲಭ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ 6ವಿಕೆಟ್ ಕಳೆದುಕೊಂಡು 17.2 ಓವರ್ ಗಳಲ್ಲಿ 98 ರನ್ ಗಳಿಸಿ ಗುರಿ ತಲುಪಿತು.
Advertisement
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ವಿಂಡೀಸ್ ಆರಂಭಿಕರಿಬ್ಬರನ್ನು ಶೂನ್ಯಕ್ಕೆ ಔಟ್ ಮಾಡಿದ ಸಾಧನೆಯನ್ನು ಭಾರತದ ಬೌಲರ್ ಗಳು ಮಾಡಿದರು. ಮೊದಲ ಓವರಿನಲ್ಲಿ ಸುಂದರ್, ಜಾನ್ ಕ್ಯಾಂಪ್‍ಬೆಲ್ ವಿಕೆಟ್ ಪಡೆದರೆ, 2ನೇ ಓವರಿನಲ್ಲಿ ಎವಿನ್ ಲೂಯಿಸ್, ಭುವನೇಶ್ವರ್ ಕುಮಾರ್ ಗೆ ವಿಕೆಟ್ ಒಪ್ಪಿಸಿದರು.
Advertisement
Advertisement
ಪೊಲಾರ್ಡ್ ಆಸರೆ: ಆರಂಭಿಕ ಹಂತದಲ್ಲೇ ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ ನಾಯಕ ಕಾರ್ಲೊಸ್ ಬ್ರಾತ್‍ವೇಟ್ ಹಾಗೂ ಅನುಭವಿ ಆಟಗಾರ ಕೀರಾನ್ ಪೊಲಾರ್ಡ್ ಚೇತರಿಕೆ ನೀಡಿದರು. ಈ ಇಬ್ಬರ ಜೋಡಿ 3ನೇ ವಿಕೆಟ್‍ಗೆ 34 ರನ್ ಕಾಣಿಕೆ ನೀಡಿತು. ಈ ವೇಳೆ ದಾಳಿಗಿಳಿದ ಕೃಣಾಲ್ ಪಾಂಡ್ಯ 9 ರನ್ ಗಳಿಸಿದ ನಾಯಕ ಬ್ರಾತ್‍ವೇಟ್ ವಿಕೆಟ್ ಪಡೆದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದ ಪೊಲಾರ್ಡ್ 49 ರನ್ ಗಳಿಸಿ ಸೈನಿಗೆ ವಿಕೆಟ್ ಒಪ್ಪಿಸಿದರು.
Advertisement
ನವದೀಪ್ ಸೈನಿ ಮಿಂಚು: ಟೀಂ ಇಂಡಿಯಾ ಪರ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ ಯುವ ವೇಗಿ ನವದೀಪ್ ಸೈನಿ ಮಿಂಚಿನ ಬೌಲಿಂಗ್ ದಾಳಿ ನಡೆಸಿದರು. ಮೊದಲ ಪಂದ್ಯದ ಮೊದಲ ಓವರಿನಲ್ಲೇ ಪೂರನ್ 20 ರನ್, ಹೆಟ್ಮಾರ್ ವಿಕೆಟ್ ಪಡೆದ ಸೈನಿ ಕನಸಿನ ಆರಂಭವನ್ನೇ ಪಡೆದರು.
ಸೈನಿ ಟೀಂ ಇಂಡಿಯಾ ಪರ ಪ್ರಗ್ಯಾನ್ ಓಜಾ ಬಳಿಕ ಪಾದಾರ್ಪಣೆ ಟಿ20 ಪಂದ್ಯದ ಮೊದಲ ಓವರಿನಲ್ಲೇ 2 ವಿಕೆಟ್ ಪಡೆದ ಆಟಗಾರ ಎನಿಸಿಕೊಂಡರು. ಅಲ್ಲದೇ ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಇನ್ನಿಂಗ್ಸ್ ನ ಅಂತಿಮ ಓವರ್ ಎಸೆತ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆ ಪಡೆದರು. 26 ವರ್ಷದ ಸೈನಿ ಪಂದ್ಯದಲ್ಲಿ 4 ಓವರ್ ಎಸೆದು 17 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ತಂಡದ ಪರ ಭುವನೇಶ್ವರ್ ಕುಮಾರ್ 2, ಖಲೀಲ್, ಕೃಣಾಲ್, ಜಡೇಜಾ, ಸುಂದರ್ ತಲಾ 1 ವಿಕೆಟ್ ಪಡೆದರು.
Innings Break!
A three-wkt haul for Saini as #TeamIndia bowlers restrict West Indies to a total of 95/9 after 20 overs.#WIvIND pic.twitter.com/MMn9drOxh1
— BCCI (@BCCI) August 3, 2019
ವಿಂಡೀಸ್ ಫೈಟ್ ಬ್ಯಾಕ್: ವಿಂಡೀಸ್ ನೀಡಿದ್ದ 95 ರನ್ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಸುಲಭ ಗೆಲುವು ಪಡೆಯಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಬೌಲಿಂಗ್ ನಲ್ಲಿ ಫೈಟ್ ಬ್ಯಾಕ್ ಮಾಡಿದ ವಿಂಡೀಸ್ ಭಾರತ ಬ್ಯಾಟ್ಸ್ ಮನ್ ಗಳನ್ನ ಕಾಡಿದರು. ತಂಡದ ಪರ ಧವನ್ 1 ರನ್, ಪಂತ್ ಶೂನ್ಯಕ್ಕೆ ಔಟಾದರೆ. ಆರಂಭಿಕ ರೋಹಿತ್ ಶರ್ಮಾ 24 ರನ್, ನಾಯಕ ಕೊಹ್ಲಿ 19 ರನ್ ಗಳಿಸಿ ಪೆವಿಲಿಯನ್‍ಗೆ ತೆರಳಿದರು.
ಆರಂಭಿಕ ಹಂತದಲ್ಲಿ ರೋಹಿತ್, ಕೊಹ್ಲಿ ಜೋಡಿ 2ನೇ ವಿಕೆಟ್‍ಗೆ 28 ರನ್ ಹಾಗೂ ಮನೀಷ್ ಪಾಂಡೆ, ಕೊಹ್ಲಿ ಜೋಡಿ 4ನೇ ವಿಕೆಟ್‍ಗೆ 32 ರನ್ ಜೊತೆಯಾಟ ನೀಡಿತ್ತು. 15.6 ಓವರ್ ವೇಳೆಗೆ ಟೀಂ ಇಂಡಿಯಾ 88 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಮನೀಷ್ ಪಾಂಡೆ 19 ರನ್, ಕೃಣಾಲ್ ಪಾಂಡ್ಯ 12 ರನ್ ಗಳಿಸಿ ಪೌಲ್‍ಗೆ ವಿಕೆಟ್ ಒಪ್ಪಿಸಿದರು. ಅಂತಿಮ ಹಂತದಲ್ಲಿ ಅಜೇಯ 10 ರನ್ ಗಳಸಿದ ಜಡೇಜಾ ತಂಡವನ್ನು ಗೆಲುವಿನ ಗುರಿ ತಲುಪಿಸಿದರು. ಸುಂದರ್ 8 ರನ್ ಗಳಿಸಿ ಅಜೇಯರಾಗಿ ಉಳಿದರು. ವಿಂಡೀಸ್ ಪರ ಕಾಟ್ರೆಲ್, ನರೇನ್, ಪೌಲ್ ತಲಾ 2 ವಿಕೆಟ್ ಪಡೆದರು.
A six from Sundar to finish the proceedings. We win the 1st T20I by 4 wickets in 17.2 overs ????????#WIvIND pic.twitter.com/y3SKQ82Qmj
— BCCI (@BCCI) August 3, 2019