ಅಹಮದಾಬಾದ್: ಟೀಂ ಇಂಡಿಯಾ ಬೌಲರ್‌ಗಳ ಭರ್ಜರಿ ದಾಳಿಯ ನೆರವಿನಿಂದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 44 ರನ್‍ಗಳ ಜಯ ದಾಖಲಿಸಿದೆ. ಅಲ್ಲದೇ 2-0 ಅಂತರದಲ್ಲಿ ಸರಣಿ ಕೈವಶಪಡಿಸಿಕೊಂಡಿದೆ.
Advertisement
ಟೀಂ ಇಂಡಿಯಾ ನೀಡಿದ 238 ರನ್‍ಗಳ ಟಾರ್ಗೆಟ್ ಬೆನ್ನುಹತ್ತಿದ ವಿಂಡೀಸ್ 46 ಓವರ್‌ಗಳಲ್ಲಿ 193 ರನ್‍ಗಳಿಗೆ ಸರ್ವಪತನ ಕಂಡು ಪರಾಜಯಗೊಂಡಿತು. ಸರಣಿಯ ಇನ್ನೊಂದು ಪಂದ್ಯ ಬಾಕಿ ಉಳಿದಿದ್ದು ಫೆ.11 ರಂದು ನಡೆಯಲಿದೆ. ಇದನ್ನೂ ಓದಿ: ಭಾರತ vs ವೆಸ್ಟ್ ಇಂಡೀಸ್ 2ನೇ ಏಕದಿನ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಕಾಣಿಸಿಕೊಂಡ ವಿಶೇಷ ಅತಿಥಿಗಳು
Advertisement
Advertisement
ವೆಸ್ಟ್ ಇಂಡೀಸ್ ಪರ ಆರಂಭಿಕ ಆಟಗಾರ ಶಾಯ್ ಹೋಪ್ 27 ರನ್ (54 ಎಸೆತ, 3 ಬೌಂಡರಿ) ಬಾರಿಸಿ ಔಟ್ ಆದರು ನಂತರ ವಿಕೆಟ್ ಕಳೆದುಕೊಂಡು ಸಾಗಿದ ವಿಂಡೀಸ್ ತಂಡಕ್ಕೆ ಶಮರ್ ಬ್ರೂಕ್ಸ್ ಆಸರೆಯಾದರು. ಆದರೆ 44 ರನ್(64 ಎಸೆತ, 2 ಬೌಂಡರಿ, 2 ಸಿಕ್ಸ್) ಬಾರಿಸಿದ ವೇಳೆ ದೀಪಕ್ ಹೂಡಾ ದಾಳಿಯಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡರು. ನಂತರ ಕೆಳ ಕ್ರಮಾಂಕದಲ್ಲಿ ಅಕೇಲ್ ಹೋಸೇನ್ 34 ರನ್ (52 ಎಸೆತ, 3 ಬೌಂಡರಿ) ಮತ್ತು ಓಡನ್ ಸ್ಮಿತ್ 24 ರನ್ (20 ಎಸೆತ, 1 ಬೌಂಡರಿ, 2 ಸಿಕ್ಸ್) ಸಿಡಿಸಿದನ್ನು ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್ ಕೂಡ ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಬೀಸಲು ವಿಫಲರಾದರು. ಇದನ್ನೂ ಓದಿ: ತಂಡದ ಹೆಸರು ಸೂಚಿಸಿದ ಅಹಮದಾಬಾದ್ ಫ್ರಾಂಚೈಸ್ – ಗುಜರಾತ್ ಟೈಟಾನ್ಸ್ ನ್ಯೂ ನೇಮ್
Advertisement
ಅಂತಿಮವಾಗಿ 46 ಓವರ್‌ಗಳ ಅಂತ್ಯಕ್ಕೆ 193 ರನ್‍ಗೆ ವಿಂಡೀಸ್ ಆಲೌಟ್ ಆಯಿತು. ಟೀಂ ಇಂಡಿಯಾ ಪರ ಕನ್ನಡಿಗ ಪ್ರಸಿದ್ಧ್ ಕೃಷ್ಣ 4 ವಿಕೆಟ್ ಪಡೆದು ಮಿಂಚಿದರೆ, ಠಾಕೂರ್ 2, ಸಿರಾಜ್, ಚಹಲ್, ಸುಂದರ್, ದೀಪಕ್ ಹೂಡಾ ತಲಾ 1 ವಿಕೆಟ್ ಪಡೆದರು. ಇದನ್ನೂ ಓದಿ: ದಾದಾ ಮಾತನ್ನು ಡೋಂಟ್ ಕೇರ್ ಎಂದ್ರಾ ಹಾರ್ದಿಕ್ ಪಾಂಡ್ಯ?
ಈ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಕೆ.ಎಲ್ ರಾಹುಲ್ 49 ರನ್ (48 ಎಸೆತ, 4 ಬೌಂಡರಿ, 2 ಸಿಕ್ಸ್) ಮತ್ತು ಸೂರ್ಯಕುಮಾರ್ ಯಾದವ್ 64 ರನ್ (83 ಎಸೆತ, 5 ಬೌಂಡರಿ) ನೆರವಿನಿಂದ ಆರಂಭಿಕ ಆಘಾತದಿಂದ ಚೇತರಿಕೆ ಕಂಡಿತು. ಕೆಳ ಕ್ರಮಾಂಕದಲ್ಲಿ ದೀಪಕ್ ಹೂಡಾ 29 ರನ್ (25 ಎಸೆತ, 2 ಬೌಂಡರಿ) ಮತ್ತು ವಾಷಿಂಗ್ಟ್‌ನ್ ಸುಂದರ್ 24 ರನ್ (41 ಎಸೆತ, 1 ಬೌಂಡರಿ) ನೆರವಿನಿಂದ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 237 ರನ್ ಗಳಿಸಿತು.