ಅಹಮದಾಬಾದ್: ವೆಸ್ಟ್ ಇಂಡೀಸ್ (West Indies) ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೊದಲ ದಿನ ಭಾರತ (Team India) ಮೆಲುಗೈ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ವಿಂಡೀಸ್ 44.1 ಓವರ್‌ಗಳಲ್ಲಿ 162 ರನ್‌ಗಳಿಗೆ ಆಲೌಟ್ ಆಯ್ತು. ನಂತರ ಬ್ಯಾಟ್ ಬೀಸಿದ ಭಾರತ 38 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 121 ರನ್ ಹೊಡೆದಿದೆ.
𝐊AMAA𝐋 RAHUL 👊
Another fine fifty for @klrahul, his 12th 50+ score at home in Tests 👏
Catch the LIVE action ➡ https://t.co/Ju76dqhTdq#INDvWI 1st Test, Day 1 👉 LIVE NOW on Star Sports & JioHotstar pic.twitter.com/21rTL5uRSv
— Star Sports (@StarSportsIndia) October 2, 2025
ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 36 ರನ್ ಹೊಡೆದರೆ ಸಾಯಿ ಸುದರ್ಶನ್ 7 ರನ್ ಗಳಿಸಿ ಔಟಾಗಿದ್ದಾರೆ. ಕೆಎಲ್ ರಾಹುಲ್ (KL Rahul) ಔಟಾಗದೇ 53 ರನ್(114 ಎಸೆತ, 6 ಬೌಂಡರಿ), ಶುಭಮನ್ ಗಿಲ್ (Shubman Gill) ಔಟಾಗದೇ 18 ರನ್ ಗಳಿಸಿ ನಾಳೆ ಬ್ಯಾಟಿಂಗ್ ಮುಂದುವರಿಸಲಿದ್ದಾರೆ. ವೆಸ್ಟ್ ಇಂಡೀಸ್ ಪರ ಜೇಡನ್ ಸೀಲ್ಸ್ ಹಾಗೂ ರೋಸ್ಟನ್ ಚೇಸ್ ತಲಾ ಒಂದೊಂದು ವಿಕೆಟ್ ಕಿತ್ತಿದ್ದಾರೆ. ಇದನ್ನೂ ಓದಿ: 1 ಪಂದ್ಯದ ಆಟದಿಂದ ಕೊಹ್ಲಿ, ಸಾಲ್ಟ್ ಹಿಂದಿಕ್ಕಿ ಟಿ20ಯಲ್ಲಿ ಅಭಿಷೇಕ್ ಶರ್ಮಾ ವಿಶ್ವದಾಖಲೆ
The Bumrah ™ yorker & Justin Greaves had no answer to it! 🎯
He cleaned up Johann Layne in his next over & completed his 50th Test wicket at home 👏
Catch the LIVE action ➡ https://t.co/Ju76dqhTdq #INDvWI 1st Test, Day 1 👉 LIVE NOW on Star Sports & JioHotstar pic.twitter.com/dsQgSWsBR5
— Star Sports (@StarSportsIndia) October 2, 2025
ಬ್ಯಾಟಿಂಗ್ ಆರಂಭಿಸಿದ ವೆಸ್ಟ್‌ಇಂಡೀಸ್ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳಲು ಆರಭಿಸಿತು. 42 ರನ್‌ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿತ್ತು. ರೋಸ್ಟನ್ ಚೇಸ್ 24 ಹಾಗೂ ಜಸ್ಟಿನ್ ಗ್ರೀವ್ಸ್ 32 ರನ್ ಗಳಿಸಿ ಸ್ವಲ್ಪ ಹೋರಾಟ ಪ್ರದರ್ಶಿಸಿದರು. ಭಾರತ ಇತರ ರೂಪದಲ್ಲಿ 21 ರನ್( ಬೈ 9, ಲೆಗ್ ಬೈ 6 ನೋಬಾಲ್ 1, ವೈಡ್ 5) ನೀಡಿತ್ತು.
ಸಿರಾಜ್ 4 ವಿಕೆಟ್ ಪಡೆದರೆ ಬುಮ್ರಾ 3 ವಿಕೆಟ್ ಪಡೆದರು. ಕುಲದೀಪ್ ಯಾದವ್ 2 , ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದರು.
Trust Bumrah to strike! 🎯🔥
India review ✅ Edge confirmed ✅ Campbell gone! 👋
Catch the LIVE action ➡ https://t.co/Ju76dqhTdq #INDvWI 1st Test, Day 1 👉 LIVE NOW on Star Sports & JioHotstar pic.twitter.com/xVHIN5tPVr
— Star Sports (@StarSportsIndia) October 2, 2025