ಓವಲ್: ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಭಾರತದ ವಿರುದ್ಧ ಶ್ರೀಲಂಕಾ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದ್ದು, ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿದೆ.
ಗೆಲ್ಲಲು 322 ರನ್‍ಗಳ ಕಠಿಣ ಸವಾಲನ್ನು ಪಡೆದ ಲಂಕಾ 48.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 322 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿದೆ.
Advertisement
11 ರನ್ ಗಳಿಸಿದ್ದಾಗ ಮೊದಲ ವಿಕೆಟ್ ಕಳೆದುಕೊಂಡರೂ ಎರಡನೇ ವಿಕೆಟಿಗೆ 139 ಎಸೆತಗಳಲ್ಲಿ 159 ರನ್ ಜೊತೆಯಾಟವಾಡುವ ಮೂಲಕ ಗುಣತಿಲಕ ಮತ್ತು ಕುಸಲ್ ಮೆಂಡಿಸ್ ಭದ್ರ ಅಡಿಪಾಯ ಹಾಕಿದರು.
Advertisement
ಗುಣತಿಲಕ 76 ರನ್(72 ಎಸೆತ, 7 ಬೌಂಡರಿ, 2ಸಿಕ್ಸರ್) ಸಿಡಿಸಿ ರನ್ ಔಟ್ ಔಟಾದರೆ, ಮೆಂಡಿಸ್ 89 ರನ್(93 ಎಸೆತ, 11 ಬೌಂಡರಿ, 1 ಸಿಕ್ಸರ್) ಸಿಡಿಸಿ ರನ್ ಔಟ್ ಆದರು.
Advertisement
ಕುಸಲ್ ಪಿರೇರಾ 47 ರನ್‍ಗಳಿಸಿ ನಿವೃತ್ತರಾದರೆ, ಆಂಜಲೋ ಮಾಥ್ಯುಸ್ ಔಟಾಗದೇ 52 ರನ್(44 ಎಸೆತ, 6 ಬೌಂಡರಿ) ಗುಣರತ್ನೆ ಔಟಾಗದೇ 34 ರನ್(21 ಎಸೆತ, 2 ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡಕ್ಕೆ ಜಯವನ್ನು ತಂದುಕೊಟ್ಟರು.
Advertisement
ಭುನವೇಶ್ವರ್ ಕುಮಾರ್ ಒಂದು ವಿಕೆಟ್ ಪಡೆದರೆ, ಭಾರತ 11 ಲೆಗ್ ಬೈ, 5 ವೈಡ್, 1 ನೋಬಾಲ್ ಎಸೆಯುವ ಮೂಲಕ ಇತರೆ ರೂಪದಲ್ಲಿ 17 ರನ್ ಬಿಟ್ಟುಕೊಟ್ಟಿತ್ತು.
ರನ್ ಏರಿದ್ದು ಹೇಗೆ?
50 ರನ್ – 10.3 ಓವರ್
100 ರನ್ – 19.2 ಓವರ್
150 ರನ್ – 25.4 ಓವರ್
200 ರನ್ – 33.4 ಓವರ್
250 ರನ್ – 40.3 ಓವರ್
300 ರನ್ – 45.5 ಓವರ್
322 ರನ್ – 48.4 ಓವರ್
ಉತ್ತಮ ಮೊತ್ತ: ಟಾಸ್ ಸೋತು ಬ್ಯಾಟಿಂಗ್‍ಗೆ ಇಳಿದ ಶಿಖರ್ ಧವನ್ ಶತಕ, ರೋಹಿತ್ ಶರ್ಮಾ ಮತ್ತು ಧೋನಿ ಅವರ ಅರ್ಧಶತಕದಿಂದಾಗಿ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿತ್ತು.
ಶತಕದ ಜೊತೆಯಾಟ: ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಮೊದಲ ವಿಕೆಟ್‍ಗೆ 149 ಎಸೆತಗಳಲ್ಲಿ 138 ರನ್‍ಗಳ ಜೊತೆಯಾಟ ಆಡಿದರು. ಮಲಿಂಗ ಎಸೆತದಲ್ಲಿ ಔಟಾಗುವ ವೇಳೆ ರೋಹಿತ್ ಶರ್ಮಾ 78 ರನ್(79 ಎಸೆತ, 6 ಬೌಂಡರಿ, 3ಸಿಕ್ಸರ್) ಸಿಡಿಸಿದ್ದರು.
ನಂತರ ಬಂದ ವಿರಾಟ್ ಕೊಹ್ಲಿ 5 ಎಸೆತದ ಎದುರಿಸಿ ಶೂನ್ಯಕ್ಕೆ ಔಟಾದರು. ಮೂರನೇ ವಿಕೆಟ್‍ಗೆ ಶಿಖರ್ ಧವನ್ ಮತ್ತು ಯುವರಾಜ್ 46 ಎಸೆತಗಳಲ್ಲಿ 40 ರನ್ ಜೊತೆಯಾಟ ಆಡಿದರು. ಇದರಲ್ಲಿ ಯುವರಾಜ್ ಪಾಲು 7 ರನ್.
ಯುವರಾಜ್ ಔಟಾದ ಬಳಿಕ ಕ್ರೀಸಿಗೆ ಬಂದ ಧೋನಿ ಇನ್ನಿಂಗ್ಸ್ ಕಟ್ಟಲು ಆರಂಭಿಸಿದರು. ಧೋನಿ ಮತ್ತು ಧವನ್ 4ನೇ ವಿಕೆಟಿಗೆ 64 ಎಸೆತಗಳಲ್ಲಿ 82 ರನ್ ಪೇರಿಸಿದರು.
ಶಿಖರ್ ಧವನ್ ಶತಕ: 69 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದ ಧವನ್ 112 ಎಸೆತಗಳಲ್ಲಿ ಏಕದಿನ ಕ್ರಿಕೆಟ್ ಬಾಳ್ವೆಯ 10 ನೇ ಶತಕ ಪೂರ್ಣಗೊಳಿಸಿದರು. ಅಂತಿಮವಾಗಿ 125 ರನ್(128 ಎಸೆತ, 6 ಬೌಂಡರಿ, 3ಸಿಕ್ಸರ್) ಗಳಿಸಿದ್ದಾಗ ಮೆಂಡಿಸ್‍ಗೆ ಕ್ಯಾಚ್ ನೀಡಿ ಔಟಾದರು.
ಧೋನಿ 63 ರನ್(52 ಎಸೆತ, 7 ಬೌಂಡರಿ, 2ಸಿಕ್ಸರ್), ಕೇಧಾರ್ ಜಾಧವ್ ಔಟಾಗದೇ 25 ರನ್(13 ಎಸೆತ, 3 ಬೌಂಡರಿ, 1 ಸಿಕ್ಸರ್) ಸಿಡಿಸಿ ಕೊನೆಯಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಕಾರಣ ತಂಡದ ಮೊತ್ತ 300 ರನ್‍ಗಳ ಗಡಿ ದಾಟಿತು. ಲಸಿತ್ ಮಾಲಿಂಗ, 2 ವಿಕೆಟ್ ಪಡೆದರೆ, ಲಕ್ಮಲ್, ಪ್ರದೀಪ್, ಪಿರೇರಾ ಗುಣರತ್ನೆ ತಲಾ ಒಂದೊಂದು ವಿಕೆಟ್ ಪಡೆದರು.
ರನ್ ಏರಿದ್ದು ಹೀಗೆ:
50 ರನ್ – 10.2 ಓವರ್
100 ರನ್ – 19.2 ಓವರ್
150 ರನ್- 27.1 ಓವರ್
200 ರನ್ – 37.6 ಓವರ್
250 ರನ್ – 42.4 ಓವರ್
300 ರನ್ – 48.2 ಓವರ್
321 ರನ್ – 50 ಓವರ್
ಬಿ ಗುಂಪಿನ ಎಲ್ಲ ತಂಡಗಳು ಒಂದೊಂದು ಪಂದ್ಯವನ್ನು ಗೆದ್ದಿದೆ. ಜೂನ್ 11 ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ಪಂದ್ಯ ನಡೆಯಲಿದ್ದು, ಈ ಪಂದ್ಯವನ್ನು ಭಾರತ ಗೆದ್ದಲ್ಲಿ ಸೆಮಿಫೈನಲ್ ಪ್ರವೇಶಿಸಲಿದೆ.
What a match! 89 from Player of the Match @KusalMendis1 helped to keep Group B wide open! #INDvSL #CT17 pic.twitter.com/BnNwPwTSNE
— ICC (@ICC) June 8, 2017
A memorable chase by Sri Lanka keeps their #CT17 hopes alive as they beat India by 7 wickets in a thriller!https://t.co/3VzGviqIok #INDvSL pic.twitter.com/0uQXq8XTio
— ICC (@ICC) June 8, 2017
Kusal Perera has reitred hurt on 47 off 44.
Will new man Asela Gunaratne guide Sri Lanka home?
LIVE: https://t.co/3VzGviqIok #INDvSL #CT17 pic.twitter.com/mvesqQ2hQ1
— ICC (@ICC) June 8, 2017