ಧರ್ಮಶಾಲಾ: ಬೌಲರ್‌ಗಳ ಅಮೋಘ ಆಟ ಮತ್ತು ಶ್ರೇಯಸ್ ಅಯ್ಯರ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ವಿರುದ್ಧ ಮೂರನೇ ಟಿ20 ಪಂದ್ಯವನ್ನು ಭಾರತ 6 ವಿಕೆಟ್‍ಗಳಿಂದ ಗೆದ್ದಿದೆ.
Advertisement
ಗೆಲ್ಲಲು 147 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ 16.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 148 ರನ್ ಸಿಡಿಸಿ 6 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಸಾಧಿಸಿ ಮೆರೆದಾಡಿದೆ. ಇದನ್ನೂ ಓದಿ: PAK Vs AUS: 24 ವರ್ಷಗಳ ಬಳಿಕ ಪಾಕ್ ಪ್ರವಾಸ ಕೈಗೊಂಡ ಆಸ್ಟ್ರೇಲಿಯಾ ಕ್ರಿಕೆಟ್ ತಂಡ
Advertisement
That's that from the final T20I.#TeamIndia win by 6 wickets to complete a clean sweep 3-0 against Sri Lanka.
Scorecard – https://t.co/gD2UmwjsDF #INDvSL @Paytm pic.twitter.com/er1AQY6FmL
— BCCI (@BCCI) February 27, 2022
Advertisement
ಆರಂಭಿಕ ಆಟಗಾರರ ವಿಫಲತೆ ನಡುವೆ ಕಳೆದ ಪಂದ್ಯದಂತೆ ಈ ಪಂದ್ಯದಲ್ಲೂ ಶ್ರೇಯಸ್ ಅಯ್ಯರ್ ಭರ್ಜರಿ ಬ್ಯಾಟಿಂಗ್ ಮಾಡಿದರು. ಲಂಕಾ ಬೌಲರ್‌ಗಳ ಚೆಂಡಾಡಿದ ಅಯ್ಯರ್ ಅಜೇಯ 73 ರನ್ (45 ಎಸೆತ, 9 ಬೌಂಡರಿ, 1 ಸಿಕ್ಸ್) ಸಿಡಿಸಿ ಮಿಂಚಿದರೆ, ಇವರಿಗೆ ಉತ್ತಮ ಸಾಥ್ ನೀಡಿದ ದೀಪಕ್ ಹೂಡಾ 21 ರನ್ (16 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ನಂತರ ಬಂದ ಜಡೇಜಾ ಅಜೇಯ 22 ರನ್ (15 ಎಸೆತ, 3 ಬೌಂಡರಿ) ಬಾರಿಸಿ ತಂಡವನ್ನು ಗೆಲ್ಲಿಸಿದರು. ಇದನ್ನೂ ಓದಿ: ಮಹಿಳಾ ಏಕದಿನ ವಿಶ್ವಕಪ್: ಸ್ಮೃತಿ ಮಂಧಾನಗೆ ಗಾಯ
Advertisement
ದಸುನ್ ಶನಕ ಏಕಾಂಗಿ ಹೋರಾಟ
ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ತಂಡ ಆರಂಭದಿಂದಲೇ ಪೆವಿಲಿಯನ್ ಪರೇಡ್ ಆರಂಭಿಸಿತು. ಕೇವಲ 29 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಪರದಾಡುತ್ತಿದ್ದ ಲಂಕಾ ತಂಡಕ್ಕೆ ದಿನೇಶ್ ಚಂಡಿಮಾಲ್ ಮತ್ತು ನಾಯಕ ದಸುನ್ ಶನಕ ನೆರವಾದರು. ಚಂಡಿಮಾಲ್ 22 ರನ್ (27 ಎಸೆತ, 2 ಬೌಂಡರಿ) ಸಿಡಿಸಿ ಔಟ್ ಆದರು. ಇತ್ತ ವಿಕೆಟ್ ಉರುಳುತ್ತಿದ್ದರು ದಸುನ್ ಶನಕ ಮಾತ್ರ ತನ್ನ ಹೋರಾಟ ನಿಲ್ಲಿಸಲಿಲ್ಲ. ಇನ್ನಿಂಗ್ಸ್‌ನ ಕೊನೆಯ ಬಾಲ್ ವರೆಗೂ ಬ್ಯಾಟಿಂಗ್ ಮಾಡಿದ ಶನಕ ಅಜೇಯ 74 ರನ್ (38 ಎಸೆತ, 9 ಬೌಂಡರಿ, 2 ಸಿಕ್ಸ್) ಸಿಡಿಸಿ ಏಕಾಂಗಿ ಹೋರಾಟ ನಡೆಸಿದರು. ಅಂತಿಮವಾಗಿ ಶ್ರೀಲಂಕಾ 20 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 146 ರನ್ ಗಳಿಸಿತು.
ಭಾರತದ ಪರ ಆವೇಶ್ ಖಾನ್ 2 ವಿಕೆಟ್ ಪಡೆದರೆ, ಸಿರಾಜ್, ಹರ್ಷಲ್ ಪಟೇಲ್ ಮತ್ತು ರವಿ ಬಿಷ್ಣೋಯ್ ತಲಾ 1 ವಿಕೆಟ್ ಕಿತ್ತರು.