ಬೆಂಗಳೂರು: ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ 238 ರನ್‍ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಸ್ವದೇಶದಲ್ಲಿ ಸತತ 15 ಟೆಸ್ಟ್ ಸರಣಿಯನ್ನು ಗೆದ್ದ ಸಾಧನೆ ಮಾಡಿತು.
ಗೆಲ್ಲಲು 447 ರನ್ ಗಳ ಕಠಿಣ ಗುರಿಯನ್ನು ಪಡೆದ ಶ್ರೀಲಂಕಾ ಎರಡನೇ ಇನ್ನಿಂಗ್ಸ್‍ನಲ್ಲಿ 208 ರನ್‍ಗಳಿಗೆ ಆಲೌಟ್ ಆಯ್ತು. ಈ ಮೂಲಕ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.
Advertisement
CHAMPIONS #TeamIndia @Paytm #INDvSL pic.twitter.com/GhLlAl1H0W
— BCCI (@BCCI) March 14, 2022
Advertisement
2012ರಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋತಿತ್ತು. ಈ ಸರಣಿಯ ಬಳಿಕ ನಡೆದ ಭಾರತದಲ್ಲಿ ನಡೆದ ಎಲ್ಲ ಟೆಸ್ಟ್ ಸರಣಿಯನ್ನು ಭಾರತ ಜಯಿಸಿದೆ. ಇಲ್ಲಿಯವರೆಗೆ ಯಾವುದೇ ತಂಡ ಈ ಸಾಧನೆ ಮಾಡಿಲ್ಲ.
Advertisement
ಒಂದು ವಿಕೆಟ್ ನಷ್ಟಕ್ಕೆ 28 ರನ್‍ಗಳಿಂದ ಮೂರನೇ ದಿನವನ್ನು ಪುನರಾರಂಭಿಸಿದ ಶ್ರೀಲಂಕಾ ಪರ ನಾಯಕ ದಿಮುತ್ ಕರುಣಾರತ್ನೆ 107 ರನ್ ಗಳಿಸಿ ಸ್ವಲ್ಪ ಪ್ರತಿರೋಧ ತೋರಿದರು.
Advertisement
???????????????????????? ???????????????????? ????????????????????????????????????! ???? ????@Paytm #INDvSL pic.twitter.com/Cm6KZg7y0s
— BCCI (@BCCI) March 14, 2022
ಭಾರತದ ಪರ ಸ್ಪಿನ್ನರ್ ಅಶ್ವಿನ್ 4 ವಿಕೆಟ್ ಕಿತ್ತರೆ ಬುಮ್ರಾ 3 ವಿಕೆಟ್ ಕಿತ್ತರು. ಅಕ್ಷರ್ ಪಟೇಲ್ 2, ರವೀಂದ್ರ ಜಡೇಜಾ 1 ವಿಕೆಟ್ ಪಡೆದರು.
ಸಂಕ್ಷೀಪ್ತ ಸ್ಕೋರ್
ಭಾರತ ಮೊದಲ ಇನ್ನಿಂಗ್ಸ್ 252/10
ಶ್ರೀಲಂಕಾ ಮೊದಲ ಇನ್ನಿಂಗ್ಸ್ 109/10
ಭಾರತ ಎರಡನೇ ಇನ್ನಿಂಗ್ಸ್ 303/9
ಶ್ರೀಲಂಕಾ ಎರಡನೇ ಇನ್ನಿಂಗ್ಸ್ 208/ 10