ನಾಗ್ಪುರ: ಜಮ್ತಾ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ ಒಂದು ಇನ್ನಿಂಗ್ಸ್ 239 ರನ್‍ಗಳಿಂದ ಗೆದ್ದುಕೊಂಡಿದೆ.
ಟೀಂ ಇಂಡಿಯಾ ಬೌಲರ್ ಗಳು ಮುಂದೆ ಪಲ್ಟಿ ಹೊಡೆದ ಲಂಕಾ ಎರಡನೇ ಇನ್ನಿಂಗ್ಸ್ ನಲ್ಲಿ 49.3 ಓವರ್ ಗಳಲ್ಲಿ 166 ರನ್ ಗಳಿಗೆ ಆಲೌಟ್ ಆಯ್ತು.
Advertisement
ನಾಯಕ ಚಾಂಡಿಮಲ್ 61 ರನ್ ಗಳಿಸಿ ಔಟಾದರೆ ಬೌಲರ್ ಲಕ್ಮಲ್ ಔಟಾಗದೇ 31 ರನ್ ಗಳಿಸಿದರು. ಆರ್ ಅಶ್ವಿನ್ 63 ರನ್ ನೀಡಿ ನಾಲ್ಕು ವಿಕೆಟ್ ಕಿತ್ತರು. ಇಶಾಂತ್ ಶರ್ಮಾ ಜಡೇಜಾ ಮತ್ತು ಉಮೇಶ್ ಯಾದವ್ ತಲಾ ಎರಡು ವಿಕೆಟ್ ಪಡೆದರು.
Advertisement
ಕೋಲ್ಕತ್ತಾದಲ್ಲಿ ನಡೆದ ಮೊದಲ ಟೆಸ್ಟ್ ಡ್ರಾದಲ್ಲಿ ಅಂತ್ಯ ಕಂಡಿತ್ತು. ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಡಿಸೆಂಬರ್ 2 ರಿಂದ ಆರಂಭವಾಗಲಿದೆ.
Advertisement
ಮೊದಲ ಇನ್ನಿಂಗ್ಸ್ ನಲ್ಲಿ 213 ರನ್(267 ಎಸೆತ, 17 ಬೌಂಡರಿ, 2 ಸಿಕ್ಸರ್) ಸಿಡಿಸಿ ಭಾರತದ ಬೃಹತ್ ಮೊತ್ತ ಏರಿಸಲು ಕಾರಣವಾಗಿದ್ದಕ್ಕೆ ನಾಯಕ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದನ್ನೂ ಓದಿ:ದ್ವಿಶತಕ ಸಿಡಿಸಿ ಭಾರತದ ಪರ ಹೊಸ ದಾಖಲೆ ಬರೆದ ಕೊಹ್ಲಿ
Advertisement
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ ಮೊದಲ ಇನ್ನಿಂಗ್ಸ್ 205/10
ಭಾರತ ಮೊದಲ ಇನ್ನಿಂಗ್ಸ್ 610/6 ಡಿಕ್ಲೇರ್
ಶ್ರೀಲಂಕಾ ಎರಡನೇ ಇನ್ನಿಂಗ್ಸ್ 166/10