ಕೋಲ್ಕತ್ತಾ: ಬೌಲರ್‌ಗಳು ಮತ್ತು ಬ್ಯಾಟರ್‌ಗಳ ಉತ್ತಮ ಪ್ರದರ್ಶನದಿಂದ ಲಂಕಾ(Sri Lanka) ವಿರುದ್ಧ ಭಾರತ (India) 4 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರಿಂದ ಗೆದ್ದುಕೊಂಡಿದೆ.
ಗೆಲ್ಲಲು 216 ರನ್‌ಗಳ ಗುರಿಯನ್ನು ಪಡೆದ ಭಾರತ 43.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಹೊಡೆಯಿತು. 86 ರನ್‌ಗಳಿಸುವಷ್ಟರಲ್ಲಿ ಭಾರತ ಪ್ರಮುಖ 4 ವಿಕೆಟ್ ಕಳೆದುಕೊಂಡಿತ್ತು. ಆದರೆ ರಾಹುಲ್ ಮತ್ತು ಪಾಂಡ್ಯ 5ನೇ ವಿಕೆಟಿಗೆ ತಾಳ್ಮೆಯ ಆಟವಾಡಿ 119 ಎಸೆತಗಳಲ್ಲಿ75 ರನ್ ಜೊತೆಯಾಟವಾಡಿ ಚೇತರಿಕೆ ನೀಡಿದರು.
Advertisement
Advertisement
ಭಾರತದ ಪರ ರೋಹಿತ್ ಶರ್ಮಾ 17 ರನ್, ಶುಭಮನ್ ಗಿಲ್ 21 ರನ್, ಶ್ರೇಯಸ್ ಅಯ್ಯರ್ 28 ರನ್, ಹಾರ್ದಿಕ್ ಪಾಂಡ್ಯ 36 ರನ್, ಅಕ್ಷರ್ ಪಟೇಲ್ 21 ರನ್ ಹೊಡೆದರು. ಕೆಎಲ್ ರಾಹುಲ್ ಔಟಾಗದೇ 64 ರನ್(103 ಎಸೆತ, 6 ಬೌಂಡರಿ) ಹೊಡೆದರು.
Advertisement
ಶ್ರೀಲಂಕಾ 2 ವಿಕೆಟ್ ನಷ್ಟಕ್ಕೆ 102 ರನ್‌ಗಳಿಸಿ ಉತ್ತಮ ಸ್ಥಿತಿಯಲ್ಲಿ ಇತ್ತು. ಆದರೆ 177 ರನ್‌ಗಳಿಸುವಷ್ಟರಲ್ಲಿ ಪ್ರಮುಖ 8 ವಿಕೆಟ್ ಕಳೆದುಕೊಂಡಿತ್ತು. ಆದರೆ 9ನೇ ವಿಕೆಟಿಗೆ ದುನಿತ್ ವೆಲ್ಲಲಾಗೆ ಮತ್ತು ಕಸುನ್ ರಜಿತಾ 38 ರನ್ ಜೊತೆಯಾಟವಾಡಿದ್ದರಿಂದ ತಂಡದ ಮೊತ್ತ 200 ರನ್‌ಗಳ ಗಡಿಯನ್ನು ದಾಟಿತ್ತು.
Advertisement
ಭಾರತದ ಪರ ಸಿರಾಜ್ ಮತ್ತು ಕುಲದೀಪ್ ಯಾದವ್ ತಲಾ ಮೂರು ವಿಕೆಟ್ ಪಡೆದರೆ ಉಮ್ರಾನ್ ಮಲಿಕ್ 2, ಅಕ್ಷರ್ ಪಟೇಲ್ 1 ವಿಕಟ್ ಪಡೆದರು. ಜ.15 ರಂದು ತಿರುವನಂತಪುರದಲ್ಲಿ ಮೂರನೇ ಹಗಲು ರಾತ್ರಿ ಏಕದಿನ ಪಂದ್ಯ ನಡೆಯಲಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k