ಗುವಾಹಟಿ: ಸೆನುರನ್ ಮುತ್ತುಸ್ವಾಮಿ (Senuran Muthusamy ) ಶತಕ ಹಾಗೂ ಮಾರ್ಕೊ ಜಾನ್ಸೆನ್ (Marco Jansen) ಅಮೋಘ ಫಿಫ್ಟಿ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ (South Africa) ತಂಡ 2ನೇ ಟೆಸ್ಟ್ ಪಂದ್ಯದ 2ನೇ ದಿನ ಭರ್ಜರಿ ಕಂಬ್ಯಾಕ್ ಮಾಡಿದೆ. ತಮ್ಮ ಮೊದಲ ಇನ್ನಿಂಗ್ಸ್ ಅಂತ್ಯಕ್ಕೆ ಬರೋಬ್ಬರಿ 151.1 ಓವರ್‌ಗಳಲ್ಲಿ 489 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.

ಇನ್ನೂ ತನ್ನ ಸರದಿಯ ಮೊದಲ ಇನ್ನಿಂಗ್ಸ್ ಶುರು ಮಾಡಿರುವ, ಭಾರತ 2ನೇ ದಿನದ ಅಂತ್ಯಕ್ಕೆ 6.1 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 9 ರನ್ ಗಳಿಸಿದೆ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದೆ. ಯಶಸ್ವಿ ಜೈಸ್ವಾಲ್ (Yashasvi Jaiswal) 23 ಎಸೆತಗಳಲ್ಲಿ 7 ರನ್, ಕೆ.ಎಲ್ ರಾಹುಲ್ (KL Rahul) 14 ಎಸೆತಗಳಲ್ಲಿ 2 ರನ್ ಗಳಿಸಿದ್ದು, ಸೋಮವಾರ ಬ್ಯಾಟಿಂಗ್ ಆರಂಭಿಸಲಿದ್ದಾರೆ. ಇದನ್ನೂ ಓದಿ: ನ.25 ರಂದು ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ – ಒಂದೇ ಬಣದಲ್ಲಿ ಇಂಡೋ-ಪಾಕ್

ಆಫ್ರಿಕಾ ಭರ್ಜರಿ ಕಂಬ್ಯಾಕ್
ಮೊದಲ ದಿನವೇ 247 ರನ್‌ಗಳಿಗೆ ಪ್ರಮುಖ 6 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ಹೆಚ್ಚೆಂದರೆ 350 ರನ್ ಗಳಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಸೆನುರನ್ ಮುತ್ತುಸ್ವಾಮಿ, ಆಲ್‌ರೌಂಡರ್ ಮಾರ್ಕೊ ಜಾನ್ಸೆನ್ ಅವರ ಅಮೋಘ ಬ್ಯಾಟಿಂಗ್ ಮೂಲಕ ಉತ್ತಮ್ಮ ಇನ್ನಿಂಗ್ಸ್ ಕಟ್ಟಿದರು. ಇದರಿಂದ ಆಫ್ರಿಕಾ 450 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: ಗಿಲ್‌ಗೆ ಕುತ್ತಿಗೆ ನರದ ಸಮಸ್ಯೆ – ಕನ್ನಡಿಗ ಕೆ.ಎಲ್ ರಾಹುಲ್‌ಗೆ ಏಕದಿನ ನಾಯಕನ ಪಟ್ಟ?

ಮುತ್ತುಸ್ವಾಮಿ 206 ಎಸೆತಗಳಲ್ಲಿ 109 ರನ್ (10 ಬೌಂಡರಿ, 2 ಸಿಕ್ಸರ್) ಗಳಿಸಿದ್ರೆ, ಮಾರ್ಕೊ ಜಾನ್ಸೆನ್ 91 ಎಸೆತಗಳಲ್ಲಿ 93 ರನ್ (7 ಸಿಕ್ಸರ್, 6 ಬೌಂಡರಿ) ಬಳಿಸಿ ಔಟಾದರು. ಇನ್ನುಳಿದಂತೆ ಟ್ರಿಸ್ಟನ್ ಸ್ಟಬ್ಸ್ 49 ರನ್, ಬವುಮಾ 41 ರನ್, ಕೈಲ್ ವೆರ್ರೆನ್ 45 ರನ್, ಏಡನ್ ಮಾರ್ಕ್ರಂ 38 ರನ್, ರಿಯಾನ್ ಸಿಕಲ್ಟನ್ 35 ರನ್, ಟೋನಿ ಡಿ ಜೋರ್ಜಿ 228 ರನ್, ಮುಲ್ದರ್ 13 ರನ್, ಶಿಮೊನ್ ಹಾರ್ಮರ್ 5 ರನ್, ಕೇಶವ್ ಅಜೇಯ 12 ರನ್ ಗಳಿಸಿ ಅಜೇಯರಾಗುಳಿದರು.
ಟೀಂ ಇಂಡಿಯಾ ಪರ ಕುಲ್‌ದೀಪ್ ಯಾದವ್ 4 ವಿಕೆಟ್ ಕಿತ್ತರೆ, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ ತಲಾ 2 ವಿಕೆಟ್ ಕಿತ್ತರು.
