ಸೆಂಚೂರಿಯನ್: ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಜಯಗಳಿಸಲು ದಕ್ಷಿಣ ಆಫ್ರಿಕಾ 287 ರನ್ ಗಳ ಗುರಿಯನ್ನು ನೀಡಿದೆ.
2 ವಿಕೆಟ್ ಕಳೆದುಕೊಂಡು 90 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾ ನಾಲ್ಕನೇಯ ದಿನ 8 ವಿಕೆಟ್ ಗಳ ಸಹಾಯದಿಂದ 168 ರನ್ ಗಳಿಸಿ ಅಂತಿಮವಾಗಿ 91.3 ಓವರ್ ಗಳಲ್ಲಿ 258 ರನ್ ಗಳಿಗೆ ಆಲೌಟ್ ಆಯ್ತು.
Advertisement
Advertisement
ಈ ಪಂದ್ಯವನ್ನು ಗೆದ್ದಲ್ಲಿ ಸೆಂಚೂರಿಯನ್ ಮೈದಾನದಲ್ಲಿ ಅತಿ ಹೆಚ್ಚು ರನ್ ಚೇಸಿಂಗ್ ಮಾಡಿ ಜಯಗಳಿಸಿದ ತಂಡ ಎನ್ನುವ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಇದೂವರೆಗೆ ಈ ಮೈದಾನದಲ್ಲಿ ಅತಿ ಹೆಚ್ಚು ರನ್ ಚೇಸಿಂಗ್ ಮಾಡಿ ಜಯಗಳಿಸಿದ ತಂಡ ಇಂಗ್ಲೆಂಡ್ ಆಗಿದ್ದು, 2000ನೇ ಇಸ್ವಿಯಲ್ಲಿ 249 ರನ್ ಬೆನ್ನಟ್ಟಿ 4 ವಿಕೆಟ್ ಗಳ ಜಯ ಸಾಧಿಸಿತ್ತು.
Advertisement
ಎಬಿಡಿ ವಿಲಿಯರ್ಸ್ 80 ರನ್(121 ಎಸೆತ, 10 ಬೌಂಡರಿ) ಹೊಡೆದರೆ, ಫಾ ಡು ಪ್ಲೆಸಿಸ್ 48 ರನ್(141 ಎಸೆತ, 4 ಬೌಂಡರಿ) ಫಿಲಾಂಡರ್ 26 ರನ್(85 ಎಸೆತ, 2 ಬೌಂಡರಿ) ಹೊಡೆಯುದರ ಮೂಲಕ ಆಫ್ರಿಕಾದ ರನ್ ಏರಿಸಿದರು. ಭಾರತದ ಪರ ಮೊಹಮ್ಮದ್ ಶಮಿ 4 ವಿಕೆಟ್ ಪಡೆದರೆ, ಬುಮ್ರಾ 3 ವಿಕೆಟ್ ಕಿತ್ತರು. ಇಶಾಂತ್ ಶರ್ಮಾ 2 ವಿಕೆಟ್, ಆರ್. ಅಶ್ವಿನ್ 1 ವಿಕೆಟ್ ಪಡೆದರು.
Advertisement
ಇತ್ತೀಚಿನ ವರದಿ ಬಂದಾಗ ಭಾರತ 7.5 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 11 ರನ್ ಗಳಿಸಿದೆ. ಮುರಳಿ ವಿಜಯ್ 9 ರನ್ ಗಳಿಸಿ ಔಟಾಗಿದ್ದು ರಾಹುಲ್ 2 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಇದನ್ನೂ ಓದಿ: ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಕೊಹ್ಲಿಗೆ ದಂಡ