ಅಹಮಾದಾಬಾದ್: ಪಾಕಿಸ್ತಾನ (Pakistan) ವಿರುದ್ಧ ವಿಶ್ವಕಪ್ ಕ್ರಿಕೆಟ್ (World Cup Cricket) ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಎಡವಟ್ ಮಾಡಿಕೊಂಡಿದ್ದಾರೆ.
ಪಂದ್ಯವಾಡಲು ಮೈದಾನಕ್ಕೆ ಬಂದಾಗ ಬಿಳಿ ಬಣ್ಣದ ಪಟ್ಟಿ ಇರುವ ಜೆರ್ಸಿ (Jersey) ಧರಿಸಿ ಇಳಿದಿದ್ದರು. ನಂತರ ಈ ವಿಚಾರ ತಿಳಿದು ಜೆರ್ಸಿ ಬದಲಾವಣೆ ಮಾಡಿ ಅಂಗಳಕ್ಕೆ ಇಳಿದಿದ್ದರು.
Virat Kohli by mistake comes on the field by wearing the white stripes jersey instead of the tricolour one. pic.twitter.com/sv09MalH3X
— Mufaddal Vohra (@mufaddal_vohra) October 14, 2023
ಟೀಂ ಇಂಡಿಯಾದ ಜೆರ್ಸಿ ಕಿಟ್ ಪ್ರಾಯೋಜಕತ್ವವನ್ನು ಅಡಿಡಾಸ್ ಕಂಪನಿ ವಹಿಸಿಕೊಂಡಿದೆ. ವಿಶ್ವಕಪ್‌ಗೆ ಸಿದ್ಧಪಡಿಸಲಾದ ಜೆರ್ಸಿಯಲ್ಲಿ ಭುಜದ ಮೇಲುಗಡೆ ಕೇಸರಿ, ಬಿಳಿ, ಹಸಿರು ಬಣ್ಣದ ಪಟ್ಟಿಯನ್ನು ಹಾಕಲಾಗಿದೆ. ಇದನ್ನೂ ಓದಿ: ಇಂಡಿಯಾ-ಪಾಕಿಸ್ತಾನ ಪಂದ್ಯ: ನಟ ಶಿವರಾಜ್ ಕುಮಾರ್ ಭಾಗಿ
ಈ ವರ್ಷದ ಫೆಬ್ರವರಿಯಲ್ಲಿ ಜರ್ಮನಿ ಮೂಲದ ಅಡಿಡಾಸ್ ಕಂಪನಿ ಬರೋಬ್ಬರಿ 350 ಕೋಟಿ ರೂ. ಬಿಡ್ ಮಾಡಿ ಕಿಟ್ ಪ್ರಾಯೋಜಕತ್ವವನ್ನು ಗೆದ್ದುಕೊಂಡಿತ್ತು. ಅಡಿಡಾಸ್ 2028ರವರೆಗೆ ಪ್ರಾಯೋಜಕತ್ವ ವಹಿಸಿಕೊಳ್ಳಲಿದೆ. ಪ್ರತಿ ಪಂದ್ಯಕ್ಕೆ ಅಡಿಡಾಸ್ (Adidas) ಕಂಪನಿ ಬಿಸಿಸಿಐಗೆ (BCCI) 65 ಲಕ್ಷ ರೂ. ಪಾವತಿಸಿದರೆ ವಾರ್ಷಿಕ 70 ಕೋಟಿ ರೂ. ನೀಡಲಿದೆ.
ಜೂನ್ ತಿಂಗಳಿನಲ್ಲಿ ಅಡಿಡಾಸ್ ಕಂಪನಿ ಟೆಸ್ಟ್, ಏಕದಿನ, ಟಿ20 ಕ್ರಿಕೆಟಿಗೆ ಧರಿಸುವ ಮೂರು ಜೆರ್ಸಿಯನ್ನು ಬಿಡುಗಡೆ ಮಾಡಿತ್ತು. ಟೆಸ್ಟ್ ಜೆರ್ಸಿಯಲ್ಲಿ ಮೂರು ಬಣ್ಣದ ಪಟ್ಟಿ ನೀಲಿ ಬಣ್ಣದಲ್ಲಿ ಇದೆ.
Web Stories