ನ್ಯೂಯಾರ್ಕ್: ಅಮೆರಿಕದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ (T20 World Cup) ಟೂರ್ನಿಯ ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನಕ್ಕೆ (Pakistan) ಭಾರತ (Team India) 120 ರನ್‌ಗಳ ಗುರಿ ನೀಡಿದೆ.
ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಟೀಂ ಇಂಡಿಯಾ 19 ಓವರ್‌ಗಳಲ್ಲಿ ಕೇವಲ 119 ರನ್ ಗಳಿಸಿ ಆಲೌಟ್ ಆಯಿತು. ಈ ಮೂಲಕ ಪಾಕಿಸ್ತಾನ ಗೆಲುವಿಗೆ 120 ರನ್‌ಗಳ ಸಾಧಾರಣ ಗುರಿ ತಲುಪುವ ಅಗತ್ಯವಿದೆ.
Advertisement
Advertisement
ಭಾರತದ ಪರ ರಿಷಬ್ ಪಂತ್ ಹೊರತುಪಡಿಸಿ, ಯಾರಿಂದಲೂ ತಂಡಕ್ಕೆ ಉತ್ತಮ ಕೊಡುಗೆ ಸಿಗಲಿಲ್ಲ. ಕೆಲವೊಂದು ಅನಗತ್ಯ ಹೊಡೆತಗಳ ಹೊರತಾಗಿಯೂ ಅದೃಷ್ಟದಿಂದ ಮೈದಾನದಲ್ಲಿ ಉಳಿದ ಪಂತ್ 40 ರನ್ ಗಡಿ ದಾಟಿದ ಏಕೈಕ ಆಟಗಾರರಾದರು. ಪಿಚ್ ಸಂಪೂರ್ಣ ಬೌಲರ್ ಸ್ನೇಹಿಯಾಗಿದ್ದು, ಟೀಂ ಇಂಡಿಯಾ ಬೌಲರ್‌ಗಳು ಉತ್ತಮ ದಾಳಿ ನಡೆಸಿದರೆ ಪಾಕ್ ತಂಡವನ್ನು ಕಟ್ಟಿಹಾಕುವ ಅವಕಾಶ ಭಾರತಕ್ಕಿದೆ.
Advertisement
ಭಾರತ ಪರ ರಿಷಬ್ ಪಂತ್ 31 ಎಸೆತಗಳಲ್ಲಿ 6 ಬೌಂಡರಿ ಸಿಡಿಸಿ 42 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅಕ್ಷರ್ ಪಟೇಲ್ 18 ಎಸೆತಗಳಲ್ಲಿ 20 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ರೋಹಿತ್ ಶರ್ಮಾ 12 ಎಸೆತಗಳಲ್ಲಿ 13 ರನ್‌ಗಳನ್ನು ಕಲೆಹಾಕಿ ಔಟಾದರು. ಉಳಿದಂತೆ ಹಾರ್ದಿಕ್ ಪಾಂಡ್ಯ 7, ಸೂರ್ಯಕುಮಾರ್ ಯಾದವ್ 7, ಅರ್ಷದೀಪ್ ಸಿಂಗ್ 9, ಮೊಹಮ್ಮದ್ ಸಿರಾಜ್ 7 ರನ್ ಕಲೆ ಹಾಕಿ ನೀರಸ ಪ್ರದರ್ಶನ ತೋರಿದರು. ಉಳಿದಂತೆ ಜಸ್‌ಪ್ರೀತ್ ಬೂಮ್ರಾ ಹಾಗೂ ರವೀಂದ್ರ ಜಡೇಜಾ ಶೂನ್ಯ ಸುತ್ತಿದರು.
Advertisement
ಪಾಕ್ ಪರ, ನಸೀಮ್ ಶಾ, ಹಾರಿಸ್ ರೌಫ್ ತಲಾ 3, ಮೊಹಮ್ಮದ್ ಅಮೀರ್ 2, ಶಾಹೀನ್ ಶಾ ಆಫ್ರಿದಿ 1 ವಿಕೆಟ್ ಪಡೆದರು.