LatestCricketMain PostSports

ಭಾರತಕ್ಕೆ ಹೀನಾಯ ಸೋಲು – ಪಾಕಿಸ್ತಾನಕ್ಕೆ 10 ವಿಕೆಟ್ ಜಯ

ದುಬೈ: ಇಲ್ಲಿಯವರೆಗೆ ನಡೆದ 5 ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಸೋತಿದ್ದ ಪಾಕಿಸ್ತಾನ ಮೊದಲ ಬಾರಿಗೆ ಭರ್ಜರಿ ಜಯ ಸಾಧಿಸಿದೆ. ಇಂದು ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ 10 ವಿಕೆಟ್‍ಗಳಿಂದ ಅಮೋಘ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

PAKISTAN 1 1

ಗೆಲ್ಲಲು 152 ರನ್‍ಗಳ ಗುರಿಯನ್ನು ಪಡೆದ ಪಾಕಿಸ್ತಾನ 17. 5 ಓವರ್‍ ಗಳಲ್ಲಿ ಜಯ ಸಾಧಿಸಿತು. ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಟವಾಡಿದ ಪಾಕಿಸ್ತಾನ  ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಮ್ ನೆರವಿನಿಂದ ಗೆದ್ದುಕೊಂಡಿತು.

PAKISTAN 2

ಪಾಕ್ ಪರ ಅಬ್ಬರದ ಬ್ಯಾಟಿಂಗ್ ಮಾಡಿದ ಆರಂಭಿಕ ಜೋಡಿ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಮ್ ಭಾರತ ಬೌಲರ್‍ ಗಳ ಬೆಂಡೆತ್ತಿದರು. ಈ ಜೋಡಿ 152 ರನ್ (107) ಜೊತೆಯಾಟವಾಡಿತು. ಬಾಬರ್ 68 ರನ್ (52 ಎಸೆತ, 6 ಬೌಂಡರಿ, 2 ಸಿಕ್ಸ್) ಮತ್ತು ರಿಜ್ವಾನ್ 78 ರನ್ (55 ಎಸೆತ, 6 ಬೌಂಡರಿ, 3 ಸಿಕ್ಸ್) ಸಿಡಿಸಿ ಅಜೇಯರಾಗಿ ಆರಂಭಿಕರಾಗಿ ಬಂದು ಕಡೆಯವರೆಗೆ ಪಾಕ್ ಗೆಲುವಿಗಾಗಿ ಹೋರಾಡಿದರು. ಇದನ್ನೂ ಓದಿ: ಟಿ20 ವಿಶ್ವಕಪ್‌ – ಟ್ರೆಂಡಿಂಗ್‌ ಆದ ಜಯ್‌ ಶಾ

BABAR AND RIZWAN

ಟಾಸ್ ಗೆದ್ದ ಪಾಕಿಸ್ತಾನ ಭಾರತವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಭಾರತ ತಂಡದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಶೂನ್ಯಕ್ಕೆ ಔಟ್ ಆಗುವುದರೊಂದಿಗೆ ನಿರಾಸೆ ಮೂಡಿಸಿದರೆ, ಇವರ ಬೆನ್ನ ಹಿಂದೆ ಕೆ.ಎಲ್ ರಾಹುಲ್ 3 ರನ್ (8 ಎಸೆತ) ಕೂಡ ಪೆವಿಲಿಯನ್ ಸೇರಿಕೊಂಡರು ಭಾರತಕ್ಕೆ ಪಾಕಿಸ್ತಾನ ತಂಡದ ಶಾಹೀನ್ ಶಾ ಆಫ್ರಿದಿ ಆರಂಭದಲ್ಲಿ ಆಘಾತ ನೀಡಿದರು. ಇದನ್ನೂ ಓದಿ: ಸೋಮವಾರದಿಂದ ಪ್ರಾಥಮಿಕ ಶಾಲೆಗಳು ಆರಂಭ – ಮಾರ್ಗಸೂಚಿ ಏನು?

VIRAT KOHLI 3

ಭಾರತಕ್ಕೆ ಕೊಹ್ಲಿ ಆಸರೆ
ಒಂದೆಡೆ ವಿಕೆಟ್ ಉರುಳುತ್ತಿದ್ದರೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಭಾರತಕ್ಕೆ ಅಸರೆಯಾದರು. ಮೂರನೇ ಕ್ರಮಾಂಕದಲ್ಲಿ ಬಂದು ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ಕೊಹ್ಲಿ 57 ರನ್ (49 ಎಸೆತ, 5 ಬೌಂಡರಿ, 1 ಸಿಕ್ಸ್) ಬಾರಿಸಿ 18ನೇ ಓವರ್‍ನಲ್ಲಿ ಔಟ್ ಆದರು. ಇವರಿಗೆ ಉತ್ತಮ ಸಾತ್ ನೀಡಿದ ಪಂತ್ 39 ರನ್ (30 ಎಸೆತ, 2 ಬೌಂಡರಿ, 2 ಸಿಕ್ಸ್) ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಜೋಡಿ 4ನೇ ವಿಕೆಟ್‍ಗೆ 53 ರನ್ (40 ಎಸೆತ) ಜೊತೆಯಾಟವಾಡಿತು. ಇವರನ್ನು ಹೊರತು ಪಡಿಸಿ ಆಲ್‍ರೌಂಡರ್ ಆಟಗಾರರಾದ ರವೀಂದ್ರ ಜಡೇಜಾ 13 ರನ್ (13 ಎಸೆತ, 1 ಬೌಂಡರಿ) ಮತ್ತು ಹಾರ್ದಿಕ್ ಪಾಂಡ್ಯ 11 ರನ್ (8 ಎಸೆತ 2 ಬೌಂಡರಿ)ಗೆ ಸುಸ್ತಾದರು. ಅಂತಿಮವಾಗಿ ಭಾರತ ತಂಡ ನಿಗದಿತ ಓವರ್‍ ಗಳ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 151 ರನ್ ಪೇರಿಸಿತು.

SHAHIN AFRIDI

ಪಾಕಿಸ್ತಾನ ಪರ ಶಾಹೀನ್ ಶಾ ಆಫ್ರಿದಿ 3 ವಿಕೆಟ್ ಕಿತ್ತು ಮಿಂಚಿದರೆ, ಹಸನ್ ಅಲಿ 2 ವಿಕೆಟ್. ಶಾದಬ್ ಖಾನ್ ಮತ್ತು ಹೌರಿಸ್ ರೌಫ್ ತಲಾ 1 ವಿಕೆಟ್ ಪಡೆದರು.

Related Articles

Leave a Reply

Your email address will not be published. Required fields are marked *