IND vs NZ Test | 134 ರನ್‌ಗಳ ಮುನ್ನಡೆ ಸಾಧಿಸಿದ ನ್ಯೂಜಿಲೆಂಡ್‌

Public TV
1 Min Read
New Zealand Team

ಬೆಂಗಳೂರು: ಭಾರತದ (Team India) ವಿರುದ್ದ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ (New Zealand) ಉತ್ತಮ ಸ್ಥಿತಿಯಲ್ಲಿದೆ. ಪಂದ್ಯದ ಎರಡನೇ ದಿನದಾಟದಲ್ಲಿ ಕಿವೀಸ್‌ ಪಡೆ 50 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 180 ರನ್‌ಗಳನ್ನು ಕಲೆಹಾಕಿ 134 ರನ್‌ಗಳ ಮುನ್ನಡೆ ಸಾಧಿಸಿದೆ.

ಭಾರತದ ಆಟಗಾರರನ್ನು ಉತ್ತಮ ಬೌಲಿಂಗ್‌ನಿಂದ ಕಟ್ಟಿಹಾಕಿದ್ದ ನ್ಯೂಜಿಲೆಂಡ್‌ ಟೀ ಇಂಡಿಯಾ 50 ರನ್‌ ದಾಟದಂತೆ ನೋಡಿಕೊಂಡಿತು. ನಂತರ ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ ಪರ ಡೆವೊನ್ ಕಾನ್ವೇ 3 ಸಿಕ್ಸರ್‌ಗಳ ನೆರವಿನಿಂದ 91‌ ರನ್, ವಿಲ್‌ ಯಂಗ್‌ 33‌ ರನ್, ಟಾಮ್ ಲ್ಯಾಥಮ್ 19 ರನ್‌ಗಳ ಕೊಡುಗೆ ನೀಡಿದರು. ರಚಿನ್ ರವೀಂದ್ರ 22‌ ರನ್, ಡೇರಿಲ್ ಮಿಚೆಲ್ 14 ರನ್‌ ಗಳಿಸಿ ಔಟಾಗದೆ ಉಳಿದರು.

ಭಾರತದ ಪರ ಅಶ್ವಿನ್‌, ಕುಲದೀಪ್‌ ಯಾದವ್‌, ಜಡೇಜಾ ತಲಾ ಒಂದೊಂದು ವಿಕೆಟ್‌ ಕಿತ್ತರು.

ಮೊದಲು ಟಾಸ್‌ ಗೆದ್ದು ಬ್ಯಾಟ್‌ ಬೀಸಿದ್ದ ಭಾರತ, ವಿಲಿಯಂ ಓ’ರೂರ್ಕ್ (William O’Rourke), ಮ್ಯಾಟ್‌ ಹೆನ್ರಿ ವೇಗಿಗಳ ಆರ್ಭಟಕ್ಕೆ ನಲುಗಿ 46 ರನ್‌ಗಳಿಗೆ ಆಲೌಟ್‌ ಆಗಿ ತವರಿನ ಅಭಿಮಾನಿಗಳಿಗೆ ತೀವ್ರ ನಿರಾಸೆ ಮಾಡಿತ್ತು.

Share This Article