– ಕ್ಯಾಪ್ಟನ್ ಸೂರ್ಯ ಸ್ಫೋಟಕ ಫಿಫ್ಟಿ
ತಿರುವನಂತಪುರಂ: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಭಾರತೀಯ ಬ್ಯಾಟರ್ಗಳು ಅಬ್ಬರಿಸಿ ಬೊಬ್ಬರಿದರು. ನಿರ್ಣಾಯಕ ಪಂದ್ಯದಲ್ಲಿ ಇಂದು ಎಲ್ಲರ ಚಿತ್ತ ಇದ್ದಿದ್ದು, ಲೋಕಲ್ ಬಾಯ್ ಸಂಜು ಸ್ಯಾಮ್ಸನ್ ಮೇಲೆ, ಆದ್ರೆ ಮಿಂಚಿದ್ದು, ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ (Ishan Kishan), ನಾಯಕ ಸೂರ್ಯಕುಮಾರ್ ಯಾದವ್.
MAIDEN T20I HUNDRED FOR ISHAN KISHAN. 💯
– The celebration between Kishan and Hardik Pandya was pure bliss. 🥺❤️
pic.twitter.com/lgS011uBoM
— Mufaddal Vohra (@mufaddal_vohra) January 31, 2026
ಹೌದು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇಶಾನ್ ಕಿಶನ್, ನಿಧಾನಗತಿಯ ಬ್ಯಾಟಿಂಗ್ ಆರಂಭಿಸಿದ್ರೂ ಕೇವಲ 42 ಎಸೆತದಲ್ಲಿ ಶತಕ ಗಳಿಸಿ ನ್ಯೂಜಿಲೆಂಡ್ (Newzealand) ಬೌಲಿಂಗ್ ಪಡೆಯನ್ನ ಧೂಳಿಪಟ ಮಾಡಿದ್ರು. ಹೀಗಾಗಿ ಭಾರತ ತಂಡ ಕಿವೀಸ್ ವಿರುದ್ಧ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 271 ರನ್ ಗಳ ಬೃಹತ್ ಮೊತ್ತ ಪೇರಿಸಿತು.
Some super shots from Suryakumar Yadav and Ishan Kishan. pic.twitter.com/nMZNcVo6T8
— Mufaddal Vohra (@mufaddal_vohra) January 31, 2026
ತಿರುವನಂತಪುರದಲ್ಲಿಂದು ನಡೆದ 5ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ ತಂಡ ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿತು. ಆದ್ರೆ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ವಿಕೆಟ್ ಪತನದ ಬಳಿಕ ರನ್ ವೇಗ ಕಡಿತಗೊಂಡಿತ್ತು. 9 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 82 ರನ್ಗಳಷ್ಟೇ ಭಾರತ ಗಳಿಸಿತ್ತು. ಆ ಬಳಿಕ ಇಶಾನ್ ಕಿಶನ್, ಮತ್ತೊಂದು ಕಡೆ ಕ್ಯಾಪ್ಟನ್ ಅಬ್ಬರಿಸಲು ಶುರು ಮಾಡಿದ್ರು.

ಇಶಾನ್ ಕಿಶನ್ ಚೊಚ್ಚಲ ಟಿ20 ಶತಕ
ಸಂಜು ಸ್ಯಾಮ್ಸನ್ ಔಟಾಗಿ 17 ರನ್ ಗಳಾಗುವಷ್ಟರಲ್ಲಿ ಉತ್ತಮವಾಗಿ ಆಡುತ್ತಿದ್ದ ಅಭಿಷೇಕ್ ಶರ್ಮಾ (16 ಎಸತೆದಲ್ಲಿ 30 ರನ್) ಲಾಕಿ ಫರ್ಗ್ಯುಸನ್ ಅವರ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು. ಇಲ್ಲಿಂದ ಬಳಿಕ ಇಶಾನ್ ಕಿಶನ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಅವರು ಆಡಿದ್ದೇ ಆಟ ಎಂಬಂತಾಯಿತು. 3ನೇ ವಿಕೆಟ್ಗೆ ಈ ಜೋಡಿ 58 ಎಸೆತಗಳಲ್ಲಿ ಬರೋಬ್ಬರಿ 137 ರನ್ ಸಿಡಿಸಿತ್ತು. ಭಾರತ ತಂಡ 9.5 ಓವರ್ ಗಳಲ್ಲಿ 100 ರನ್ ಗಳ ಗಡಿ ದಾಟಿದರೆ ಕೇವಲ 12.4 ಓವರ್ ಗಳಲ್ಲಿ 150 ರನ್ ಗಳ ಗಡಿ ದಾಟಿತು. ಇಶಾನ್ ಕಿಶನ್ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಸೂರ್ಯ ಕುಮಾರ್ ಯಾದವ್ 26 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ್ರು. ತಂಡದ ಮೊತ್ತ 185 ಆಗಿದ್ದಾಗ 63 ರನ್ ಗಳಿಸಿದ್ದ ಸೂರ್ಯಕುಮಾರ್ ಯಾದವ್ ಅವರು ಮಿಚೆಲ್ ಸ್ಯಾಂಟ್ನರ್ ಅವರ ಬೌಲಿಂಗ್ ನಲ್ಲಿ ದೊಡ್ಡ ಹೊಡೆತಕ್ಕೆ ವಿಫಲ ಯತ್ನ ನಡೆಸಿ ಸ್ಟಂಪ್ ಔಟ್ ಆದರು.

ಸೂರ್ಯಕುಮಾರ್ ಯಾದವ್ ವಿಕೆಟ್ ಪತನದ ಬಳಿಕವೂ ಇಶಾನ್ ಕಿಶನ್ ತಮ್ಮ ಆರ್ಭಟ ಮುಂದುವರಿಸಿದ್ರು. ಬರೋಬ್ಬರಿ 10 ಸಿಕ್ಸರ್, 6 ಬೌಂಡರಿ ಬಾರಿಸಿ 84 ರನ್ ಕಲೆಹಾಕಿದ ಇಶಾನ್ ಕಿಶನ್ ಕೇವಲ 42 ಎಸೆತಗಳಲ್ಲೇ ಚೊಚ್ಚಲ ಶತಕ ಬಾರಿಸಿದ್ರು. ಅಂತಿಮವಾಗಿ 43 ಎಸತೆಗಳಲ್ಲಿ 103 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಸ್ಫೋಟಕ 42 ರನ್ (17 ಎಸೆತ, 4 ಸಿಕ್ಸರ್, 1 ಬೌಂಡರಿ) ಚಚ್ಚಿದ್ರೆ, ರಿಂಕು ಸಿಂಗ್ 8 ರಬ್ಮ ಶಿವಂ ದುಬೆ 7 ರನ್ ಗಳಿಸಿದರು.
ತವರಿನಲ್ಲಿ ಫೇಲಾದ ಸ್ಯಾಮ್ಸನ್
ಟಿ20 ವಿಶ್ವಕಪ್ ಗೆ ಮುಂಚಿತವಾಗಿ ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್ ವೈಫಲ್ಯ ಇದೀಗ ತಂಡದ ಮ್ಯಾನೇಜ್ಮೆಂಟ್ಗೆ ತಲೆನೋವಾಗಿದೆ. ಟಿ20 ವಿಶ್ವಕಪ್ ನಲ್ಲಿ ಅವರು ಆರಂಭಿಕ ಬ್ಯಾಟರ್ ಆಗಿ ಕಾರ್ಯ ನಿರ್ವಹಿಸಬೇಕಾಗಿದೆ. ಆದ್ರೆ ಈಗ ಫಾರ್ಮ್ ಕೊರತೆ ಎದ್ದು ಕಾಣುತ್ತಿದೆ. ಸತತ 5 ಪಂದ್ಯಗಳಲ್ಲಿ ಸ್ಯಾಮ್ಸನ್ ಒಂದೇ ಒಂದು ಫಿಫ್ಟಿ ಬಾರಿಸದೇ ಬ್ಯಾಟಿಂಗ್ ವೈಫಲ್ಯ ಎದುರಿಸಿದ್ದಾರೆ. ಒಂದು ವೇಳೆ ತಿಲಕ್ ವರ್ಮಾ ಅವರು ಚೇತರಿಸಿಕೊಂಡು ತಂಡಕ್ಕೆ ಮರಳಿದಲ್ಲಿ ಸಂಜು ಸ್ಯಾಮ್ಸನ್ ಅವರು ಮತ್ತೆ ಬೆಂಚಿನಲ್ಲೇ ಕಾಯಬೇಕಾದ ಪರಿಸ್ಥಿತಿ ಎದುರಾಗಬಹುದು.

