ಪುಣೆ: ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಭಾರತ ಆರು ವಿಕೆಟ್ ಗಳಿಂದ ಜಯಗಳಿಸಿದೆ.
ಗೆಲ್ಲಲು 231 ರನ್ ಗಳ ಸುಲಭ ಸವಾಲನ್ನು ಪಡೆದ ಭಾರತ 46 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 232 ರನ್ ಹೊಡೆಯುವ ಮೂಲಕ ಗುರಿ ಮುಟ್ಟಿತು.
Advertisement
ಭಾರತದ ಪರ ಶಿಖರ್ ಧವನ್ 68 ರನ್(84 ಎಸೆತ, 5 ಬೌಂಡರಿ, 2 ಸಿಕ್ಸರ್), ದಿನೇಶ್ ಕಾರ್ತಿಕ್ ಔಟಾಗದೇ 64 ರನ್( 92 ಎಸೆತ, 4 ಬೌಂಡರಿ) ವಿರಾಟ್ ಕೊಹ್ಲಿ 29 ರನ್(29 ಎಸೆತ, 3 ಬೌಂಡರಿ, 1 ಸಿಕ್ಸರ್, ಹಾರ್ದಿಕ್ ಪಾಂಡ್ಯ 30 ರನ್ (31 ಎಸೆತ, 2 ಬೌಂಡರಿ, 1 ಸಿಕ್ಸರ್), ಧೋನಿ ಔಟಾಗದೇ 18 ರನ್( 21 ಎಸೆತ, 3 ಬೌಂಡರಿ) ಹೊಡೆದರು.
Advertisement
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಆರಂಭದಲ್ಲಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಅಂತಿಮವಾಗಿ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತ್ತು.
Advertisement
ನ್ಯೂಜಿಲೆಂಡ್ ಪರ ಟಾಮ್ ಲಥಾಮ್ 38, ಹೆನ್ರಿ ನಿಕೊಲ್ಸ್ 42, ಕೊಲಿನ್ ಡೆ ಗ್ರಾಡ್‍ಹೋಮ್ 41, ಸ್ಯಾಟ್ನಾರ್ 29 ರನ್ ಹೊಡೆದರು. ಭಾರತದ ಪರ ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದರೆ, ಬೂಮ್ರಾ ಮತ್ತು ಚಹಲ್ ತಲಾ 2 ವಿಕೆಟ್ ಪಡೆದರು. ಪಾಂಡ್ಯ ಮತ್ತು ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.
Advertisement
ಮುಂಬೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ 6 ವಿಕೆಟ್ ಗಳ ಗೆಲುವು ಸಾಧಿಸಿತ್ತು. ಈಗ ಈ ಪಂದ್ಯವನ್ನು ಭಾರತ ಜಯಗಳಿಸಿದ್ದು, ಸರಣಿಯ ಕೊನೆಯ ಪಂದ್ಯ ಅಕ್ಟೋಬರ್ 29ರ ಭಾನುವಾರ ಕಾನ್ಪುರದಲ್ಲಿ ನಡೆಯಲಿದೆ.
FIFTY! @DineshKarthik brings up his 9th ODI 50 #INDvNZ pic.twitter.com/bXQyj02LrM
— BCCI (@BCCI) October 25, 2017