ಲಕ್ನೋ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾರತದ ಮೂವರು ಬ್ಯಾಟ್ಸ್‌ಮ್ಯಾನ್‌ಗಳ ಅರ್ಧಶತಕ ನೆರವಿನಿಂದ ಭಾರತ ತಂಡ ಮೊದಲ ದಿನದ ಗೌರವ ಪಡೆದಿದೆ.
Advertisement
ದಿನದಾಟದ ಅಂತ್ಯಕ್ಕೆ ಭಾರತ ತಂಡ 4 ವಿಕೆಟ್ ಕಳೆದುಕೊಂಡು 258 ರನ್ ಪೇರಿಸಿದೆ. ಭಾರತದ ಪರ ಶ್ರೇಯಸ್ ಅಯ್ಯರ್ 75 ರನ್ (136 ಎಸೆತ, 7 ಬೌಂಡರಿ, 2 ಸಿಕ್ಸ್) ಮತ್ತು ರವೀಂದ್ರ ಜಡೇಜಾ 50 ರನ್ (100 ಎಸೆತ, 6 ಬೌಂಡರಿ) ಸಿಡಿಸಿ ಅಜೇಯರಾಗಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದನ್ನೂ ಓದಿ: UAE T20 ಲೀಗ್‍ನ ಕ್ರಿಕೆಟ್ ತಂಡ ಖರೀದಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್
Advertisement
Advertisement
ಈ ಮೊದಲು ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಕೆ.ಎಲ್ ರಾಹುಲ್ ಅಲಭ್ಯತೆಯಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಮತ್ತು ಶುಭಮನ್ ಗಿಲ್ ಜೋಡಿ ಉತ್ತಮ ಆರಂಭ ನೀಡಲು ವಿಫಲವಾಯಿತು. ಅಗರ್ವಾಲ್ 13 ರನ್ (28 ಎಸೆತ, 2 ಬೌಂಡರಿ) ಸಿಡಿಸಿ ಜೇಮಿಸನ್‍ಗೆ ವಿಕೆಟ್ ಒಪ್ಪಿಸಿದರು. ನಂತರ ಗಿಲ್ ಜೊತೆಯಾದ ಚೇತೇಶ್ವರ ಪೂಜಾರ ಎಚ್ಚರಿಕೆಯ ಆಟವಾಡಿದರು ಈ ಜೋಡಿ 2ನೇ ವಿಕೆಟ್‍ಗೆ 61 ರನ್ (133 ಎಸೆತ)ಗಳ ಜೊತೆಯಾಟವಾಡಿತು. ಇತ್ತ ಶುಭಮನ್ ಗಿಲ್ ಅರ್ಧಶತಕ 52 ರನ್ (93 ಎಸೆತ, 5 ಬೌಂಡರಿ, 1 ಸಿಕ್ಸ್) ಸಿಡಿಸಿ ಆಡುತ್ತಿದ್ದ ವೇಳೆ ಮತ್ತೆ ದಾಳಿಗಿಳಿದ ಜೇಮಿಸನ್ ಗಿಲ್‍ಗೆ ಪೆವಿಲಿಯನ್ ದಾರಿ ತೋರಿಸಿದರು. ಇವರ ಬಳಿಕ ಪೂಜಾರ 26 ರನ್ (88 ಎಸೆತ, 2 ಬೌಂಡರಿ) ಬಾರಿಸಿ ಔಟ್ ಆದರು. ಇದನ್ನೂ ಓದಿ: ಟೀಂ ಇಂಡಿಯಾ ಆಟಗಾರರು ಹಲಾಲ್ ಪ್ರಮಾಣೀಕೃತ ಮಾಂಸ ಮಾತ್ರ ಸೇವಿಸಬೇಕೆಂದ ಬಿಸಿಸಿಐ
Advertisement
ನಂತರ ಬಂದ ನಾಯಕ ಅಜಿಂಕ್ಯ ರಹಾನೆ ದೊಡ್ಡ ಮೊತ್ತ ಕಲೆಹಾಕುವ ಸೂಚನೆ ನೀಡಿದರು ಕೂಡ ಜೇಮಿಸನ್ ಅವರ ಆ ಆಸೆಗೆ ತಣ್ಣಿರೇರಚಿದರು 35 ರನ್ (63 ಎಸೆತ, 6 ಬೌಂಡರಿ) ಸಿಡಿಸಿ ರಹಾನೆ ಔಟ್ ಆದರು. ನಂತರ ಒಂದಾದ ಡೆಬ್ಯೂ ಆಟಗಾರ ಶ್ರೇಯಸ್ ಐಯ್ಯರ್ ಮತ್ತು ಜಡೇಜಾ ಭರ್ಜರಿ ಬ್ಯಾಟಿಂಗ್ ಮಾಡಿದರು ಕಿವೀಸ್ ಬೌಲರ್‌ಗಳ ಬೆವರಿಳಿಸಿದ ಈ ಜೋಡಿ 5ನೇ ವಿಕೆಟ್‍ಗೆ ಮುರಿಯದ 113 ರನ್ (208 ಎಸೆತ) ಜೊತೆಯಾಟವಾಡಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡು ಟೀಂ ಇಂಡಿಯಾಗೆ ಬೃಹತ್ ಮೊತ್ತ ಪೇರಿಸುವ ಭರವಸೆ ಮೂಡಿಸಿದೆ. ಇದನ್ನೂ ಓದಿ: ಚಹರ್ ಸಿಕ್ಸ್‌ಗೆ ಸೆಲ್ಯೂಟ್ ಹೊಡೆದ ರೋಹಿತ್
ನ್ಯೂಜಿಲೆಂಡ್ ಪರ ಕೈಲ್ ಜೇಮಿಸನ್ 3 ವಿಕೆಟ್ ಪಡೆದು ಮಿಂಚಿದರೆ, ಟಿಮ್ ಸೌಥಿ 1 ವಿಕೆಟ್ ಪಡೆದರು.