ಆರ್ಶ್‌ದೀಪ್‌ ಲಾಸ್ಟ್‌ ಓವರ್‌ನಲ್ಲಿ 27 ರನ್‌ – ನ್ಯೂಜಿಲೆಂಡ್‌ಗೆ 21 ರನ್‌ಗಳ ಜಯ

Public TV
2 Min Read
Team New Zealand

ರಾಂಚಿ: ಮೊದಲ ಟಿ20 (T20) ಪಂದ್ಯದಲ್ಲಿ ಭಾರತದ (Team india) ವಿರುದ್ಧ 21 ರನ್‌ಗಳ ಜಯ ಸಾಧಿಸಿದ ನ್ಯೂಜಿಲೆಂಡ್‌ (New Zealand ) ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಗೆಲ್ಲಲು 177 ರನ್‌ಗಳ ಕಠಿಣ ಗುರಿಯನ್ನು ಪಡೆದ ಭಾರತ ಆರಂಭದಲ್ಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ಕೊನೆಯಲ್ಲಿ ವಾಷಿಂಗ್ಟನ್‌ ಸುಂದರ್‌ (Washington Sundar) ಹೋರಾಟ ಮಾಡಿದರೂ ಫಲ ಸಿಗಲಿಲ್ಲ. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 155 ರನ್‌ ಹೊಡೆದು ಸೋಲೊಪ್ಪಿಕೊಂಡಿತು.

Washington Sundar

ಭಾರತ 4.1 ಓವರ್‌ಗಳಲ್ಲಿ 15 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿತ್ತು. 4ನೇ ವಿಕೆಟ್‌ಗೆ ಸೂರ್ಯಕುಮಾರ್‌ ಯಾದವ್‌ (Suryakumar Yadav) ಮತ್ತು ಹಾರ್ದಿಕ್‌ ಪಾಂಡ್ಯ (Hardik Pandya) 51 ಎಸೆತಗಳಲ್ಲಿ 68 ರನ್‌ ಚಚ್ಚಿ ಸ್ವಲ್ಪ ಪ್ರತಿರೋಧ ತೋರಿಸಿದರು.

ಸೂರ್ಯಕುಮಾರ್‌ ಯಾದವ್‌ 47 ರನ್‌(34 ಎಸೆತ, 6 ಬೌಂಡರಿ, 2 ಸಿಕ್ಸರ್‌) ಹಾರ್ದಿಕ್‌ ಪಾಂಡ್ಯ 21 ರನ್‌( 20 ಎಸೆತ, 1 ಬೌಂಡರಿ, 1 ಸಿಕ್ಸರ್‌) ಹೊಡೆದು ಔಟಾದರು. ಕೊನೆಯಲ್ಲಿ ವಾಷಿಂಗ್ಟನ್‌ ಸುಂದರ್‌ 50 ರನ್‌ (28 ಎಸೆತ, 5 ಬೌಂಡರಿ, 3 ಸಿಕ್ಸರ್)‌ ಹೊಡೆದು ಪೆವಿಲಿಯನ್‌ ಸೇರಿದರು.

suryakumar yadav

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನ್ಯೂಜಿಲೆಂಡ್‌ ಪರವಾಗಿ ಫಿನ್ ಅಲೆನ್ 35 ರನ್‌(23 ಎಸೆತ, 4 ಬೌಂಡರಿ, 2 ಸಿಕ್ಸರ್), ಡೆವೂನ್‌ ಕಾನ್ವೇ 52 ರನ್(‌35 ಎಸೆತ, 7 ಬೌಂಡರಿ, 1 ಸಿಕ್ಸರ್)‌ ಹೊಡೆದು ಔಟಾದರೆ ಕೊನೆಯಲ್ಲಿ ಡೇರಿಲ್‌ ಮಿಚೆಲ್‌ ಔಟಾಗದೇ 59 ರನ್‌(30 ಎಸೆತ, 3 ಬೌಂಡರಿ, 5 ಸಿಕ್ಸರ್)‌ ಹೊಡೆದ ಪರಿಣಾಮ ತಂಡದ ಮೊತ್ತ 170 ರನ್‌ಗಳ ಗಡಿ ದಾಟಿತು.

ಅದರಲ್ಲೂ ಅರ್ಶ್‌ದೀಪ್‌ ಸಿಂಗ್‌ ಎಸೆದ ಕೊನೆಯ ಓವರ್‌ನಲ್ಲಿ 27 ರನ್‌ ಬಂದಿತ್ತು. ಮಿಚೆಲ್‌ ಕ್ರಮವಾಗಿ ನೋಬಾಲ್‌+6,6,6,4,0,2,2 ರನ್‌ ಚಚ್ಚಿದ್ದರಿಂದ ನ್ಯೂಜಿಲೆಂಡ್‌ 6 ವಿಕೆಟ್‌ ನಷ್ಟಕ್ಕೆ 176 ರನ್‌ ಹೊಡೆಯಿತು.

Daryl Mitchell

ಮೊದಲ 10 ಓವರ್‌ಗಳಲ್ಲಿ 79 ರನ್‌ ಗಳಿಸಿದ್ದ ನ್ಯೂಜಿಲೆಂಡ್‌ ನಂತರದ 10 ಓವರ್‌ಗಳಲ್ಲಿ 97 ರನ್‌ ಹೊಡೆದಿತ್ತು. ಆರ್ಶ್‌ದೀಪ್‌ 4 ಓವರ್‌ ಎಸೆದು 51 ರನ್‌ ನೀಡಿ ದುಬಾರಿಯಾದರೆ ವಾಷಿಂಗ್ಟನ್‌ ಸುಂದರ್‌ 4 ಓವರ್‌ ಎಸೆದು 22 ರನ್‌ ನೀಡಿ 2 ವಿಕೆಟ್‌ ಪಡೆದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *