ಮುಂಬೈ: ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ವಿರುದ್ಧ 6 ವಿಕೆಟ್ ಗಳಿಂದ ಜಯಗಳಿಸುವ ಮೂಲಕ ನ್ಯೂಜಿಲೆಂಡ್ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಗೆಲ್ಲಲು 281 ರನ್ ಗಳ ಸುಲಭ ಸವಾಲನ್ನು ಪಡೆದ ನ್ಯೂಜಿಲೆಂಡ್ ಟಾಮ್ ಲಥಾಮ್ ಶತಕ ಮತ್ತು ರಾಸ್ ಟೇಲರ್ ಅವರ ಅರ್ಧಶತಕದಿಂದಾಗಿ 49 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 284 ರನ್ ಹೊಡೆಯುವ ಮೂಲಕ ಗುರಿ ಮುಟ್ಟಿತು.
Advertisement
ನಾಲ್ಕನೇ ವಿಕೆಟ್ ಗೆ ಟಾಮ್ ಲಥಾಮ್ ಮತ್ತು ರಾಸ್ ಟೇಲರ್ 200 ರನ್‍ಗಳ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ತಂಡದ ಮೊತ್ತ 280 ಆಗಿದ್ದಾಗ 95 ರನ್(100 ಎಸೆತ, 8 ಬೌಂಡರಿ) ಗಳಿಸಿದ್ದ ರಾಸ್ ಟೇಲರ್ ಕ್ಯಾಚ್ ನೀಡಿ ಔಟಾದರು. ಟಾಮ್ ಲಥಾಮ್ ಔಟಾಗದೇ 103 ರನ್( 102 ಎಸೆತ, 8 ಬೌಂಡರಿ, 2 ಸಿಕ್ಸರ್) ಸಿಡಿಸಿದರು.
Advertisement
ಆರಂಭಿಕ ಆಟಗಾರರಾದ ಮಾರ್ಟಿನ್ ಗುಪ್ಟಿಲ್ 32 ರನ್, ಕಾಲಿನ್ ಮುನ್ರೋ 28 ರನ್ ಗಳಿಸಿ ಔಟಾದರು. ಭುವನೇಶ್ವರ್ ಕುಮಾರ್, ಬುಮ್ರಾ, ಕಲದೀಪ್ ಯಾದವ್ ಹಾರ್ದಿಕ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದರು.
Advertisement
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ನಾಯಕ ವಿರಾಟ್ ಕೊಹ್ಲಿ 121 ರನ್(125 ಎಸೆತ, 9 ಬೌಂಡರಿ, 2 ಸಿಕ್ಸರ್) ಹೊಡೆದರೆ, ಕಾರ್ತಿಕ್ 37, ಧೋನಿ 25, ಭುವನೇಶ್ವರ್ ಕುಮಾರ್ 26 ರನ್ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 280 ರನ್ ಗಳಿಸಿತ್ತು.
Advertisement
ಈ ಪಂದ್ಯವನ್ನು ಗೆಲ್ಲುವ ಮೂಲಕ ವಾಂಖೆಡೆಯಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿ ಪಂದ್ಯ ಗೆದ್ದುಕೊಂಡ ಸಾಧನೆಯನ್ನು ನ್ಯೂಜಿಲೆಂಡ್ ನಿರ್ಮಿಸಿತು. ಈ ಹಿಂದೆ 2011ರ ವಿಶ್ವಕಪ್ ಫೈನಲ್ ನಲ್ಲಿ ಭಾರತ ಶ್ರೀಲಂಕಾ ವಿರುದ್ಧ 4 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತ್ತು. ಎರಡನೇ ಏಕದಿನ ಪಂದ್ಯ ಪುಣೆಯಲ್ಲಿ ಅಕ್ಟೋಬರ್ 25 ರಂದು ನಡೆಯಲಿದೆ.
ಇದನ್ನೂ ಓದಿ: 200ನೇ ಪಂದ್ಯದಲ್ಲಿ ಶತಕ ಸಿಡಿಸಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟ ರನ್ ಮೆಷಿನ್!
Highest winning total batting 2nd at Wankhede Stadium: 277/4 by India v SL in WC 2011 final!
Target tonight: 281#INDvNZ
— Mohandas Menon (@mohanstatsman) October 22, 2017