ಲಂಡನ್: ಡೇವಿಡ್ ಮಲನ್ ಸ್ಫೋಟಕ ಅರ್ಧ ಶತಕದ ನೆರವಿನಿಂದ ನಾಟಿಂಗ್ ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 17ರನ್‌ಗಳ ಜಯ ಸಾಧಿಸಿತು.
ಟಾಸ್‌ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 215ರನ್ ಗಳಿಸಿ 216 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿತು. ಈ ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 198 ರನ್‌ಗಳನ್ನು ಗಳಿಸುವ ಮೂಲಕ ತನ್ನ ಸೋಲನ್ನು ಒಪ್ಪಿಕೊಂಡಿತು. ಇದನ್ನೂ ಓದಿ: ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಲು ರೋಹಿತ್ ಶರ್ಮಾಗೆ ಇನ್ನೊಂದೆ ಹೆಜ್ಜೆ
Advertisement
Advertisement
ಮೂರು ಪಂದ್ಯಗಳ ಸರಣಿಯನ್ನು ಭಾರತ ಈಗಾಗಲೇ 2–0 ಅಂತರದಲ್ಲಿ ಗೆದ್ದುಕೊಂಡಿದೆ. ಸರಣಿಯನ್ನು ಕೈವಶ ಮಾಡಿಕೊಂಡಿದ್ದ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಭಾರತ ದೊಡ್ಡ ಬದಲಾವಣೆಯೊಂದಿಗೆ ಕಣಕ್ಕಿಳಿದು ಯುವ ಆಟಗಾರರಿಗೆ ಅವಕಾಶ ಮಾಡಿಕೊಟ್ಟಿತು.
Advertisement
ಟೀಂ ಇಂಡಿಯಾಕ್ಕೆ ಆರಂಭಿಕ ಆಘಾತ:
ಟಾಸ್ ಸೋತು ನಂತರ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪವರ್ ಪ್ಲೇನಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡಿತು. ಆರಂಭಿಕರಾದ ನಾಯಕ ರೋಹಿತ್ ಶರ್ಮಾ ಮತ್ತು ರಿಷಭ್ ಪಂತ್ ಬೇಗನೆ ನಿರ್ಗಮಿಸಿದರು. ರೋಹಿತ್ 12 ಎಸೆತಗಳಲ್ಲಿ 11 ರನ್ ಹಾಗೂ ರಿಷಭ್ 5 ಎಸೆತಗಳಲ್ಲಿ 1 ರನ್‌ಗಳಿಸಿ ಹೊರನಡೆದರು. ಸತತ ಬ್ಯಾಟಿಂಗ್ ವೈಫಲ್ಯ ಕಂಡಿರುವ ವಿರಾಟ್ ಕೊಹ್ಲಿ 6 ಎಸೆತಗಳಲ್ಲಿ 11 ರನ್ ಗಳಿಸಿ ಔಟಾದರು.
Advertisement
ಸೂರ್ಯಕುಮಾರ್ ಸ್ಫೋಟಕ ಶತಕ:
3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಸೂರ್ಯಕುಮಾರ್ ಸ್ಪೋಟಕ ಶತಕ ಸಿಡಿಸಿದರು. ಗೆಲುವಿನ ವಿಶ್ವಾಸಕ ಕಳೆದುಕೊಂಡಿದ್ದ ಟೀ ಇಂಡಿಯಾಕ್ಕೆ ಮತ್ತೆ ಗೆಲುವಿನ ಆಸೆ ಚಿಗುರಿಸಿದ್ದರು. ಆಂಗ್ಲ ಬೌಲರ್‌ಗಳರ ಬೆಂಡೆತ್ತಿದ್ದ ಯಾದವ್ 48 ಎಸೆಗಳಲ್ಲೇ 5 ಸಿಕ್ಸರ್ ಮತ್ತು 12 ಬೌಂಡರಿಗಳನ್ನು ಚಚ್ಚಿ 101 ರನ್‌ಗಳಿಸಿದರು. ನಂತರವೂ ಆಂಗ್ಲರ ವಿರುದ್ಧ ದಾಳಿ ಮುಂದುವರಿಸಿದರು. ಸೂರ್ಯಕುಮಾರ್ ಯಾದವ್ 117 ರನ್(6 ಸಿಕ್ಸರ್, 14 ಬೌಂಡರಿ) ಗಳಿಸಿದರೆ, ಶ್ರೇಯಸ್ ಅಯ್ಯರ್ 28 ರನ್ (23 ಎಸೆತ, 2 ಸಿಕ್ಸರ್) ಗಳಿಸಿ ತಂಡಕ್ಕೆ ನೆರವಾದರು. ದಿನೇಶ್ ಕಾರ್ತಿಕ್ 6ರನ್, ರವಿಂದ್ರ ಜಡೇಜಾ 7 ರನ್ ಹಾಗೂ ಹರ್ಷಲ್ ಪಟೇಲ್ 5 ರನ್‌ಗಳಿಸಿದರು.
ಬೌಲಿಂಗ್‌ನಲ್ಲಿ ಭಾರತದ ಪರ ಹರ್ಷಲ್ ಪಟೇಲ್ ಮತ್ತು ರವಿ ಬಿಶ್ನೋರ್ ತಲಾ 2 ವಿಕೆಟ್, ಅವೇಶ್ ಖಾನ್ ಹಾಗೂ ಉಮ್ರಾನ್ ಮಲಿಕ್ ತಲಾ ಒಂದೊಂದು ವಿಕೆಟ್ ಪಡೆದರು. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ – ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‍ನಲ್ಲಿ ಕಾಣಿಸಿಕೊಂಡ ಧೋನಿ
ಟಾಸ್‌ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡದಿಂದ ಆರಂಭಿಕರಾಗಿ ಕಣಕ್ಕಿಳಿದ ಜೇಸನ್ ರಾಯ್ ಹಾಗೂ ಜೋಸ್ ಬಟ್ಲರ್ ನಿಧಾನಗತಿಯಲ್ಲೇ ಬ್ಯಾಟಿಂಗ್ ಆರಂಭಿಸಿದ್ದರು. ರಾಯ್ 26 ಎಸೆತಗಳಲ್ಲಿ 27 ರನ್‌ಗಳಿಸಿದರೆ, ಬಟ್ಲರ್ 2 ಬೌಂಡರಿ 1 ಸಿಕ್ಸರ್‌ಗಳೊಂದಿಗೆ 9 ಎಸೆತಗಳಲ್ಲಿ 18 ರನ್‌ಗಳಿಸಿ ಪೆವಿಲಿಯನ್ ಸೇರಿದರು. 2ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಡೇವಿಡ್ ಮಲನ್ ತಮ್ಮ ಸ್ಫೋಟಕ ಅರ್ಧ ಶತಕದ ನೆರವಿಂದ ತಂಡವನ್ನು 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಲಿಯಾಂ ಲಿವಿಂಗ್‌ಸ್ಟೋನ್ ಸಹ ಇದಕ್ಕೆ ಜೊತೆಯಾದರು.
ಇಂಗ್ಲೆಂಡ್ ಬ್ಯಾಟರ್ ಡೇವಿಡ್ ಮಲಾನ್ 39 ಎಸೆತಗಳಲ್ಲಿ 77 ರನ್ (6 ಬೌಂಡರಿ, 5ಸಿಕ್ಸರ್) ಗಳಿಸಿದರೆ, 4ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಲಿಯಾಂ ಲಿವಿಂಗ್‌ಸ್ಟೋನ್ 29 ಎಸೆತಗಳಲ್ಲಿ 42 ರನ್ (4 ಸಿಕ್ಸರ್) ಗಳಿಸಿ ಅಜೇಯರಾಗುಳಿದರು. ಇಬ್ಬರ ಸಾಂಘಿಕ ಬ್ಯಾಟಿಂಗ್ ಪ್ರದರ್ಶನದಿಂದ ಇಂಗ್ಲೆಂಡ್ ತಂಡವು 200ರ ಗಡಿ ದಾಟಿತು. ಫಿಲ್‌ಸಾಲ್ಟ್ 8 ರನ್, ಹ್ಯಾರಿಬುಕ್ 19, ಚೆರೀಸ್ ಜೊರ್ಡನ್ 11 ರನ್‌ಗಳಿಸಿದರೆ ಭರವಸೆ ಆಟಗಾರ ಮೊಯಿನ್ ಅಲಿ ಶೂನ್ಯಕ್ಕೆ ನಿರ್ಗಮಿಸಿದರು.
ಇಂಗ್ಲೆಂಡ್ ಪರ ಡೇವಿಡ್ ವಿಲ್ಲಿ 2 ಹಾಗೂ ರೀಸ್ ಟೋಪ್ಲಿ 3 ವಿಕೆಟ್ ಪಡೆದು ತಂಡಕ್ಕೆ ನೆರವಾದರು. ಇದನ್ನೂ ಓದಿ: ಆಂಗ್ಲರ ವಿರುದ್ಧ 49 ರನ್‌ಗಳ ಜಯ- ಸರಣಿ ಗೆದ್ದ ಭಾರತ
ರನ್ ಏರಿದ್ದು ಹೇಗೆ?
34 ಎಸೆತ 50 ರನ್
68 ಎಸೆತ 100 ರನ್
88 ಎಸೆತ 150 ರನ್
120 ಎಸೆತ 215 ರನ್
ಟೀಂ ಇಂಡಿಯಾದಲ್ಲಿ ಮೆಘಾ ಬದಲಾವಣೆ: ಭಾರತ ಈ ಬಾರಿ ನಾಲ್ಕು ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದು ವಿಶೇಷವಾಗಿತ್ತು. ಯಜುವೇಂದ್ರ ಚಹಾಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಅಂತಿಮ ಪಂದ್ಯದಲ್ಲಿ ಕೈಬಿಡಲಾಗಿತ್ತು. ಶೀಘ್ರವೇ ಭಾರತ ಮತ್ತು ಇಂಗ್ಲೆಂಡ್ ನಡುವೆ ಏಕದಿನ ಸರಣಿ ಆರಂಭವಾಗಲಿದ್ದು, ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿತ್ತು. ಇವರ ಬದಲಾಗಿ ರವಿ ಬಿಶ್ನೋಯ್, ಉಮ್ರಾನ್ ಮಲಿಕ್, ಅವೇಶ್ ಖಾನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ಐರ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ದೀಪಕ್ ಹೂಡಾ ಅವರನ್ನು ಪಂದ್ಯದಿಂದ ಕೈಬಿಟ್ಟದ್ದು ಹಲವು ಹಿರಿಯ ಕ್ರಿಕೆಟಿಗರಲ್ಲಿ ಬೇಸರ ತರಿಸಿತು.