– ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದ ಟೀಂ ಇಂಡಿಯಾದ 7ನೇ ಕ್ಯಾಪ್ಟನ್
ರಾಜ್‌ಕೋಟ್: ಇಂಗ್ಲೆಂಡ್ (England) ವಿರುದ್ಧ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ ಮೊದಲ ದಿನದ ಮೊದಲ ಇನ್ನಿಂಗ್ಸ್‌ನಲ್ಲೇ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಶತಕ ಸಿಡಿಸಿದ್ದಾರೆ. ಈ ಮೂಲಕ ವಿಶೇಷ ದಾಖಲೆಗಳನ್ನೂ ಬರೆದಿದ್ದಾರೆ.
ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನ 11ನೇ ಶತಕ ಪೂರೈಸಿದರು. 157 ಎಸೆತಗಳಲ್ಲಿ 100 ರನ್ ಸಿಡಿಸಿದ ರೋಹಿತ್ ಶರ್ಮಾ ಒಟ್ಟು 196 ಎಸೆತಗಳಲ್ಲಿ 131 ರನ್ ಬಾರಿಸಿದ್ರು. ಇದನ್ನೂ ಓದಿ: ರೋಹಿತ್, ಗಿಲ್ ಅಲ್ಲ; ಟೀಂ ಇಂಡಿಯಾದ ಈ ಆಟಗಾರ ಇಂಗ್ಲೆಂಡ್‌ಗೆ ಸಮಸ್ಯೆ – ಮೈಕೆಲ್ ವಾನ್
Advertisement
Advertisement
ಈ ಮೂಲಕ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಶತಕ ಸಿಡಿಸಿದ ಟೀಂ ಇಂಡಿಯಾದ 7ನೇ ನಾಯಕ ಎನಿಸಿಕೊಂಡರು. ಅಲ್ಲದೇ 2018ರ ನಂತರ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದ ಮೊದಲ ಕ್ಯಾಪ್ಟನ್ ಸಹ ಎನಿಸಿಕೊಂಡರು. ಇದನ್ನೂ ಓದಿ: ಪಾಥುಮ್ ನಿಸ್ಸಾಂಕಾ ದ್ವಿಶತಕದ ಅಬ್ಬರ – 24 ವರ್ಷಗಳಿಂದ ಜಯಸೂರ್ಯ ಹೆಸರಲ್ಲಿದ್ದ ದಾಖಲೆ ನುಚ್ಚುನೂರು!
Advertisement
Advertisement
ಧೋನಿ ಹೆಸರಲ್ಲಿದ್ದ ಸಿಕ್ಸರ್ ದಾಖಲೆ ಉಡೀಸ್:
ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 196 ಎಸೆತಗಳಲ್ಲಿ 131 ರನ್ ಬಾರಿಸಿದ ರೋಹಿತ್, 3 ಸಿಕ್ಸರ್ ಸಿಡಿಸಿ ಎಂ.ಎಸ್ ಧೋನಿ ಅವರ ಸಿಕ್ಸರ್ ದಾಖಲೆಯನ್ನೂ ಮುರಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಭಾರತದ ಮೊದಲ ಹಾಗೂ ವಿಶ್ವದ 2ನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಆಟಗಾರ ಇಯಾನ್ ಮಾರ್ಗನ್ 233 ಸಿಕ್ಸರ್ ಸಿಡಿಸಿ ನಂ.1 ಸ್ಥಾನದಲ್ಲಿದ್ದರೆ, 212 ಸಿಕ್ಸರ್ ಸಿಡಿಸಿರುವ ರೋಹಿತ್ ಶರ್ಮಾ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಎಂ.ಎಸ್ ಧೋನಿ (211 ಸಿಕ್ಸರ್), ರಿಕಿ ಪಾಂಟಿಂಗ್ (171 ಸಿಕ್ಸರ್), ಬ್ರಿಂಡನ್ ಮೆಕಲಮ್ (170 ಸಿಕ್ಸರ್) ಸಿಡಿಸುವ ಕ್ರಮವಾಗಿ ಮೂರು, ನಾಲ್ಕು ಮತ್ತು 5ನೇ ಸ್ಥಾನದಲ್ಲಿದ್ದಾರೆ.
ಟಾಸ್‌ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 33 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ಇದರಿಂದ ಭಾರತದ ಮೊದಲ ದಿನವೇ ಆಲ್ ಔಟ್ ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದ್ರೆ 4ನೇ ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಜೋಡಿ 329 ಎಸೆತಗಳಲ್ಲಿ 204 ರನ್‌ಗಳ ಜೊತೆಯಾಟ ನೀಡಿತು. ಈ ನಡುವೆ ಸರ್ಫರಾಜ್ ಖಾನ್ ಅವರ ಅರ್ಧಶತಕವೂ ಟೀಂ ಇಂಡಿಯಾ 300 ರನ್‌ಗಳ ಗಡಿದಾಟಲು ನೆರವಾಯಿತು. ಇದನ್ನೂ ಓದಿ: ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆಟಗಾರರ ಪಟ್ಟಿ ಔಟ್ – ಟೂರ್ನಿಯಿಂದಲೇ ಹೊರಗುಳಿದ ಕೊಹ್ಲಿ