ರಾಂಚಿ: ಭಾರತ ಮತ್ತು ಇಂಗ್ಲೆಂಡ್ (Ind vs Eng) ನಡುವೆ ಇದೇ ಫೆಬ್ರವರಿ 23 ರಿಂದ 27ರ ವರೆಗೆ ನಡೆಯಲಿರುವ 4ನೇ ಟೆಸ್ಟ್ ಪಂದ್ಯಕ್ಕೆ ಬ್ಯಾಟಿಂಗ್ ಪಿಲ್ಲರ್ ಕೆ.ಎಲ್ ರಾಹುಲ್ (KL Rahul) ಟೀಂ ಇಂಡಿಯಾಕ್ಕೆ ಕಂಬ್ಯಾಕ್ ಮಾಡಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಫೆಬ್ರವರಿ 23 ರಂದು ರಾಂಚಿಯಲ್ಲಿರುವ JSCA ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಅಂದು ಬೆಳಗ್ಗೆ 9:30 ರಿಂದ ಅರಂಭವಾಗಲಿದೆ. ಗಾಯದ ಸಮಸ್ಯೆಯಿಂದಾಗಿ ಕಳೆದ ಮೂರು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದ ಕೆ.ಎಲ್ ರಾಹುಲ್, ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಹಿನ್ನೆಲೆಯಲ್ಲಿ 4ನೇ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಪರ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ.
Advertisement
Advertisement
ಈ ಬಗ್ಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಸಹ ಸುಳಿವು ಕೊಟ್ಟಿದ್ದಾರೆ. ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ ಪಂದ್ಯದ ಗೆಲುವಿನ ಬಳಿಕ ಪೋಸ್ಟ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ರೋಹಿತ್, ರಾಹುಲ್ ಸಂಪೂರ್ಣ ಗುಣಮುಖರಾದಂತೆ ತೋರುತ್ತದೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಆರ್ಭಟ – ಸಿಕ್ಸರ್‌ನಿಂದಲೇ ಪಾಕ್ ದಿಗ್ಗಜನ ದಾಖಲೆ ಸರಿಗಟ್ಟಿದ ಯಶಸ್ವಿ!
Advertisement
Advertisement
ರಾಹುಲ್‌ಗೆ ಏನಾಗಿತ್ತು?
ವಿರಾಟ್ ಕೊಹ್ಲಿ (Virat Kohli) ಅವರ ಅನುಪಸ್ಥಿಯಿಂದಾಗಿ ಟೀಂ ಇಂಡಿಯಾಕ್ಕೆ ಅಗ್ರ ಕ್ರಮಾಂಕದ ಬ್ಯಾಟಿಂಗ್ ಬಲದ ಅಗತ್ಯವಿತ್ತು. ಅದಕ್ಕಾಗಿ ಕೊಹ್ಲಿ ಅವರ ಬದಲಿಗೆ ರಾಹುಲ್ ಅವರನ್ನು ಕಣಕ್ಕಿಳಿಸಲಾಗಿತ್ತು. ಆದ್ರೆ ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಬಲತೋಡೆಯ ಸ್ನಾಯು ಸೆಳೆತದಿಂದ ರಾಹುಲ್ ಮೂರು ಪಂದ್ಯಗಳಿಂದ ಹೊರಗುಳಿಯುವಂತಾಗಿತ್ತು. ಕೆ.ಎಲ್ ರಾಹುಲ್ ಬದಲಿಗೆ ದೇವದತ್ ಪಡಿಕಲ್ ಅವರಿಗೆ ಅವಕಾಶ ನೀಡಲಾಗಿದ್ದರೂ, ಕ್ರೀಸ್‌ಗಿಳಿಯುವ ಅವಕಾಶ ಸಿಗಲಿಲ್ಲ.
ಮೂರನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲು ಕಳೆದ ವಾರ ಕೆ.ಎಲ್ ರಾಹುಲ್ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರನ್ನು ಫಿಟ್‌ನೆಸ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಜಡೇಜಾ ಪಾಲ್ಗೊಳ್ಳುವಿಕೆಗೆ ಬಿಸಿಸಿಐ ಗ್ರೀನ್ ಸಿಗ್ನಲ್ ನೀಡಿ, ಫಿಟ್‌ನೆಸ್ ಸಾಬೀತುಪಡಿಸುವಲ್ಲಿ ವಿಫಲರಾದ ಕೆ.ಎಲ್ ರಾಹುಲ್ ಅವರನ್ನು ಪಂದ್ಯದಿಂದ ಹೊರಗಿಡಲಾಗಿತ್ತು. ರಾಹುಲ್ 90% ಫಿಟ್ ಆಗಿದ್ದಾರೆ, ಇನ್ನೂ ಒಂದು ವಾರಗಳ ಕಾಲ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇರಲಿದ್ದಾರೆ ಎಂದು ಬಿಸಿಸಿಐ ತಿಳಿಸಿತ್ತು. ಸದ್ಯ ರಾಹುಲ್ ಸಂಪೂರ್ಣ ಫಿಟ್ ಆಗಿದ್ದು, ರಾಂಚಿಯಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಆಂಗ್ಲರನ್ನು ಹುರಿದು ಮುಕ್ಕಿದ ಭಾರತ; ಟಾಪ್-10 ಪಟ್ಟಿಯಲ್ಲಿ ಟೀಂ ಇಂಡಿಯಾಕ್ಕೆ ಎಷ್ಟನೇ ಸ್ಥಾನ?
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಎರಡರಲ್ಲಿ ಮತ್ತು ಇಂಗ್ಲೆಂಡ್ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಭಾರತದ ಸರಣಿ ಗೆಲುವಿಗೆ ಇನ್ನೊಂದು ಗೆಲುವು ಬೇಕಿದೆ. ಆದ್ರೆ ಇಂಗ್ಲೆಂಡ್ ಗೆಲುವಿಗೆ ಉಳಿದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಲೇಬೇಕಿದೆ. 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವು ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ಮಾರ್ಚ್ 7 ರಿಂದ ಮಾರ್ಚ್ 11ರ ವರೆಗೆ ನಡೆಯಲಿದೆ. ಇದನ್ನೂ ಓದಿ: ಟೀಂ ಇಂಡಿಯಾಗೆ 434 ರನ್‌ಗಳ ದಾಖಲೆ ಜಯ – ಭಾರತದ ಟಾಪ್-5 ಟೆಸ್ಟ್ ಲಿಸ್ಟ್!