– MCC Law 41.14.1 ನಿಂದ ಆಂಗ್ಲರ ಪಡೆಗೆ ಒಲಿದ ರನ್
ರಾಜ್‌ಕೋಟ್: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ (IND vs ENG) ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಪ್ರಾಬಲ್ಯ ಸಾಧಿಸುತ್ತಿದೆ. ಆದರೂ ಈ ಪಂದ್ಯದಲ್ಲಿ ಭಾರತಕ್ಕೆ ಐದು (India handed five-run penalty) ರನ್‌ಗಳ ದಂಡ ವಿಧಿಸಲಾಯಿತು.
Advertisement
ಆರ್.ಅಶ್ವಿನ್ (Ravichandran Ashwin) ಪಿಚ್ನಲ್ಲಿ ಅಡ್ಡಾದಿಡ್ಡಿ ಓಡಾಡಿದ್ದೇ ಇದಕ್ಕೆ ಕಾರಣ. ಭಾರತದ ಮೊದಲ ಇನಿಂಗ್ಸ್‌ನ 102 ನೇ ಓವರ್‌ನಲ್ಲಿ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ ಬೌಲಿಂಗ್ ಮಾಡುವಾಗ ಈ ಘಟನೆ ನಡೆದಿದೆ. ಇದನ್ನೂ ಓದಿ: ಭಾರತಕ್ಕೆ ಬಿಕ್ಕಟ್ಟಾದ ಡಕೆಟ್ ಬಿರುಸಿನ ಶತಕ – 2ನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 207/2
Advertisement
Advertisement
ಆನ್-ಫೀಲ್ಡ್ ಅಂಪೈರ್ ಜೋಯಲ್ ವಿಲ್ಸನ್ 5 ಪೆನಾಲ್ಟಿ ರನ್‌ಗಳನ್ನು ಸಿಗ್ನಲ್ ಮಾಡಿದರು. ಇಂಗ್ಲೆಂಡ್ ತನ್ನ ಇನ್ನಿಂಗ್ಸ್ ಅನ್ನು 5/0 ನೊಂದಿಗೆ ಪ್ರಾರಂಭಿಸಿತು. ಅಶ್ವಿನ್ ಅವರು ಅಂಪೈರ್ ಜೊತೆ ತೀವ್ರ ಮಾತುಕತೆ ನಡೆಸಿದರೂ ಪ್ರಯೋಜನವಾಗಲಿಲ್ಲ. ರಾಜ್‌ಕೋಟ್ ಟೆಸ್ಟ್‌ನ ಆರಂಭಿಕ ದಿನದಂದು ಪಿಚ್‌ನ ಮಧ್ಯದಲ್ಲಿ ಓಡಿದ್ದಕ್ಕಾಗಿ ಅಂಪೈರ್‌ಗಳು ಈಗಾಗಲೇ ರವೀಂದ್ರ ಜಡೇಜಾಗೆ ಎಚ್ಚರಿಕೆ ನೀಡಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅಶ್ವಿನ್ ಅವರ ಕೃತ್ಯವು ಎರಡನೇ ನಿದರ್ಶನವಾಗಿರುವುದರಿಂದ, ಅಂಪೈರ್‌ಗಳು ಆತಿಥೇಯರಿಗೆ ತಕ್ಷಣ ದಂಡ ವಿಧಿಸಿದಿದ್ದಾರೆ.
Advertisement
ಇಂಗ್ಲೆಂಡ್ ತಂಡಕ್ಕೆ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸುವ ಮುನ್ನವೇ 5 ರನ್ಗಳು ಲಭಿಸಿತು. ಎಂಸಿಸಿಯ ಕಾನೂನು 41.14.1 (MCC’s Law 41.14.1) ಪ್ರಕಾರ ಉದ್ದೇಶಪೂರ್ವಕ ಪ್ರಕರಣ ಇದಾಗಿದೆ. 2016 ರ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಇಂದೋರ್ ಟೆಸ್ಟ್‌ನಲ್ಲಿ, ರವೀಂದ್ರ ಜಡೇಜಾ ಮಾಡಿದ ತಪ್ಪಿಗೆ ಕಿವೀಸ್ಗೆ 5 ರನ್ ನೀಡಲಾಗಿತ್ತು. ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ – ಇತಿಹಾಸ ಬರೆದ ಸ್ಪಿನ್ ಮಾಂತ್ರಿಕ ಅಶ್ವಿನ್
ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ 2ನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ಓವರ್‌ಗಳಲ್ಲಿ 35 ಓವರ್‌ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿದೆ. 238 ರನ್ ಹಿನ್ನಡೆಯೊಂದಿಗೆ 3ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. 5 ವಿಕೆಟ್ಗೆ 326 ರನ್ ಗಳಿಸಿದ್ದಲ್ಲಿಂದ 2ನೇ ದಿನದಾಟ ಆರಂಭಿಸಿದ ಭಾರತ 130.5 ಓವರ್‌ಗೆ 445 ರನ್ ಗಳಿಸಿ ಆಲೌಟ್ ಆಯಿತು.