ಕಟಕ್‌ನಲ್ಲಿ (Cuttack) ನಡೆಯುತ್ತಿರುವ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ (IND vs ENG) ನಡುವಿನ ಪಂದ್ಯದ ವೇಳೆ ಫ್ಲಡ್ ಲೈಟ್ಗಳ ಮಂದ ಬೆಳಕಿನಿಂದಾಗಿ ಅಂಪೈರ್‌ಗಳು ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.
ಸಮಸ್ಯೆ ಬಗೆಹರಿಯಬಹುದೆಂಬ ನಿರೀಕ್ಷೆಯಲ್ಲಿ ಉಭಯ ತಂಡಗಳ ಆಟಗಾರರು 10 ನಿಮಿಷ ಮೈದಾನದಲ್ಲೇ ಕಳೆದರು. ಆದರೆ ಫ್ಲಡ್ ಲೈಟ್ಗಳು ಆನ್ ಆಗದ ಕಾರಣ ಉಭಯ ತಂಡಗಳ ಆಟಗಾರರು ಮೈದಾನದಿಂದ ಹೊರನಡೆದಿದ್ದಾರೆ.
ಭಾರತದ ಇನ್ನಿಂಗ್ಸ್ನ 7ನೇ ಓವರ್ ನಡೆಯುವ ವೇಳೆ ಇದಕ್ಕಿದ್ದಂತೆ ಒಂದು ಟವರ್ನ ಎಲ್ಲಾ ಫ್ಲಡ್ ಲೈಟ್ಗಳು ಆಫ್ ಆದವು. ಹೀಗಾಗಿ ಸ್ವಲ್ಪ ಸಮಯ ಕಾಯ್ದ ಬಳಿಕ ಕ್ರೀಸ್ನಲ್ಲಿದ್ದ ರೋಹಿತ್ ಶರ್ಮಾ ಅಸಮಾಧಾನಗೊಂಡು ಅಂಪೈರ್‌ಗಳೊಂದಿಗೆ ಚರ್ಚಿಸಿದ್ದಾರೆ.
ಚರ್ಚೆಯ ಬಳಿಕ ಅಂಪೈರ್‌ಗಳು ಎಲ್ಲಾ ಆಟಗಾರರನ್ನು ಪೆವಿಲಿಯನ್‌ಗೆ ಹಿಂತಿರುಗುವಂತೆ ಸೂಚಿಸಿದರು. ಅಂತಿಮವಾಗಿ, ಸುಮಾರು 35 ನಿಮಿಷಗಳ ನಂತರ ಪಂದ್ಯವನ್ನು ಪುನರಾರಂಭಿಸಲಾಯಿತು.