ಹೈದರಾಬಾದ್: ಗುರುವಾರ ಹೈದರಾಬಾದ್‌ನಲ್ಲಿ (Hyderabad) ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಪಿನ್ನರ್‌ಗಳಾದ ಆರ್. ಅಶ್ವಿನ್ (R.Ashwin) ಮತ್ತು ರವೀಂದ್ರ ಜಡೇಜಾ (Ravindra Jadeja) ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ಬೌಲಿಂಗ್ ಜೋಡಿ ಎನಿಸಿಕೊಂಡಿದ್ದಾರೆ.
Advertisement
ಈ ಜೋಡಿ 54 ಪಂದ್ಯಗಳಲ್ಲಿ 501 ವಿಕೆಟ್‌ಗಳನ್ನು ಗಳಿಸಿದ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಅವರ ದಾಖಲೆ ಮುರಿದು 504 ವಿಕೆಟ್‌ಗಳನ್ನು ಪಡೆದಿದೆ. ಇದನ್ನೂ ಓದಿ: ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ಬೆಚ್ಚಿದ ಆಂಗ್ಲ ಪಡೆ – ಮೊದಲ ದಿನದಾಟದಲ್ಲೇ 246 ರನ್‍ಗೆ ಆಲೌಟ್ !
Advertisement
138 ಟೆಸ್ಟ್ ಪಂದ್ಯಗಳಲ್ಲಿ 1,039 ವಿಕೆಟ್‌ಗಳನ್ನು ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಜೋಡಿ ಕಬಳಿಸಿದೆ. ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಈ ಜೋಡಿ ಬರೆದಿದೆ. ಮಿಚೆಲ್ ಸ್ಟಾರ್ಕ್ ಮತ್ತು ನಾಥನ್ ಲಿಯಾನ್ 81 ಟೆಸ್ಟ್‌ಗಳಲ್ಲಿ 643 ವಿಕೆಟ್‌ಗಳನ್ನು ಪಡೆದು ದಾಖಲೆಯಲ್ಲಿ ನಂತರದ ಸ್ಥಾನದಲ್ಲಿದ್ದಾರೆ.
Advertisement
Advertisement
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದಿನಿಂದ ಆರಂಭಗೊಂಡ ಟೀಂ ಇಂಡಿಯಾ (Team India) ಹಾಗೂ ಇಂಗ್ಲೆಂಡ್ (England) ವಿರುದ್ಧದ ಮೊದಲ ಟೆಸ್ಟ್ ಪಂದ್ಯದ (IND vs ENG 1st Test) ಮೊದಲ ಇನ್ನಿಂಗ್ಸ್‌ನ 64.3 ಓವರ್‌ಗಳಲ್ಲಿ 246 ರನ್‍ಗಳಿಗೆ ಪ್ರವಾಸಿ ತಂಡ ಸರ್ವಪತನ ಕಂಡಿದೆ. ಇದನ್ನೂ ಓದಿ: ಬಾಕ್ಸಿಂಗ್‌ಗೆ ಮೇರಿಕೋಮ್ ನಿವೃತ್ತಿ ಘೋಷಣೆ
ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲಿಂಗ್ ಜೋಡಿ
ಅಶ್ವಿನ್/ಜಡೇಜಾ – 504 ವಿಕೆಟ್
ಕುಂಬ್ಳೆ/ಹರ್ಭಜನ್ – 501
ಜಹೀರ್/ ಹರ್ಭಜನ್ – 474
ಅಶ್ವಿನ್/ ಉಮೇಶ್ – 431
ಕುಂಬ್ಳೆ/ ಶ್ರೀನಾಥ್ – 412