IND vs BAN 1st Test | ತವರಿನಲ್ಲಿ ಶತಕ ಸಿಡಿಸಿ ಪಾರು ಮಾಡಿದ ಅಶ್ವಿನ್

Public TV
1 Min Read
ind vs ban 1st test r ashwin has scored his sixth century in test cricket 1

– ಮೊದಲ ದಿನ ಭಾರತ 339/6

ಚೆನ್ನೈ: ಟೀಮ್ ಇಂಡಿಯಾ (Team India) ಹಾಗೂ ಬಾಂಗ್ಲಾದೇಶ (Bangladesh) ತಂಡಗಳ ನಡುವೆ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆರ್.ಅಶ್ವಿನ್ (R Ashwin) ಶತಕ ಸಿಡಿಸಿ ತಂಡವನ್ನು ಪಾರು ಮಾಡಿದ್ದಾರೆ.

ಕೇವಲ 108 ಎಸೆತಗಳಲ್ಲಿ 100 ರನ್ ಸಿಡಿಸುವ ಮೂಲಕ ಟೆಸ್ಟ್ ಕ್ರಿಕೆಟ್‍ನಲ್ಲಿ 6ನೇ ಶತಕ ಸಿಡಿಸಿದರು. 144 ರನ್‍ಗಳಿಗೆ 6 ವಿಕೆಟ್ ಕಳೆದು ಕೊಂಡಿದ್ದಾಗ ಕಣಕ್ಕಿಳಿದ ಅಶ್ವಿನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 10 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸುವ ಮೂಲಕ ತಂಡವನ್ನು ಮೇಲಕ್ಕೆ ಎತ್ತಿದ್ದರು. ಈ ಮೂಲಕ ತವರು ನೆಲದಲ್ಲಿ ಎರಡನೇ ಶತಕ ಸಿಡಿಸಿದರು.

ind vs ban 1st test r ashwin has scored his sixth century in test cricket

ಅಶ್ವಿನ್ ಮತ್ತು ಜಡೇಜಾ ಮುರಿಯದ 7ನೇ ವಿಕೆಟಿಗೆ 227 ಎಸೆತಗಳಲ್ಲಿ 195 ರನ್ ಜೊತೆಯಾಟವಾಡಿದರು. ಅಂತಿಮವಾಗಿ ಭಾರತ ಮೊದಲ ದಿನದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿದೆ. ಅಶ್ವಿನ್ 102 ರನ್(112 ಎಸೆತ, 10 ಬೌಂಡರಿ, 2 ಸಿಕ್ಸ್), ರವೀಂದ್ರ ಜಡೇಜಾ ಔಟಾಗದೇ 86 ರನ್ (117 ಎಸೆತ, 10 ಬೌಂಡರಿ, 2 ಸಿಕ್ಸ್) ಸಿಡಿಸಿದರು.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭ್‍ಮನ್ ಗಿಲ್ ಅವರಂತಹ ಬ್ಯಾಟ್ಸ್‌ಮನ್‌ಗಳು 10 ಓವರ್‌ಗಳೊಳಗೆ ಪೆವಿಲಿಯನ್ ಸೇರಿಕೊಂಡರು. ಮತ್ತೊಂದೆಡೆ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಬಂದ ಆರ್.ಅಶ್ವಿನ್, ಬಾಂಗ್ಲಾ ಬೌಲರ್‌ಗಳ ಬೆವರಿಳಿಸಿ ಶತಕ ಸಿಡಿಸಿ ಮಿಂಚಿದ್ದಾರೆ.

Share This Article