ಢಾಕಾ: ಟೀಂ ಇಂಡಿಯಾದ (Team India) ಸ್ಪಿನ್ನರ್ ಕುಲ್‍ದೀಪ್ ಯಾದವ್ (Kuldeep Yadav) ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಕಮಾಲ್ ಮಾಡಿದ ಪರಿಣಾಮ ಮೊದಲ ಟೆಸ್ಟ್‌ನ (Test) 2ನೇ ದಿನದಾಟದಲ್ಲಿ ಭಾರತ ಬಿಗಿ ಹಿಡಿತ ಸಾಧಿಸಿದೆ.
Advertisement
ಭಾರತ 404 ರನ್‍ಗಳಿಗೆ ಸರ್ವಪತನ ಕಾಣುತ್ತಿದ್ದಂತೆ ಬ್ಯಾಟಿಂಗ್‍ಗೆ ಆಗಮಿಸಿದ ಬಾಂಗ್ಲಾಕ್ಕೆ ಆರಂಭದಿಂದಲೇ ಭಾರತ ಬೌಲರ್‌ಗಳು ಕಾಡ ತೊಡಗಿದರು. ಆರಂಭದಲ್ಲಿ ವೇಗಿಗಳಾದ ಮೊಹಮ್ಮದ್ ಸಿರಾಜ್ (Siraj) ಮತ್ತು ಉಮೇಶ್ ಯಾದವ್ (Umesh Yadav) ಕಾಟ ಕೊಟ್ಟರೆ, ಬಳಿಕ ಕುಲ್‍ದೀಪ್ ಯಾದವ್ (Kuldeep Yadav) ಸ್ಪಿನ್ ಜಾದೂ ಮಾಡಿದರು. ಈ ಮೂವರ ಜುಗಲ್ ಬಂದಿಗೆ ಬಾಂಗ್ಲಾ ಬ್ಯಾಟ್ಸ್‌ಮ್ಯಾನ್‌ಗಳು ತಡಬಡಿಸಿದರು. ಬಾಂಗ್ಲಾ ಸರದಿಯಲ್ಲಿ ಜಾಕಿರ್ ಹಸನ್ 20 ರನ್ (45 ಎಸೆತ, 3 ಬೌಂಡರಿ), ಲಿಟ್ಟನ್ ದಾಸ್ 24 ರನ್ (30 ಎಸೆತ, 5 ಬೌಂಡರಿ) ಮತ್ತು ಮುಶ್ಫಿಕರ್ ರಹೀಮ್ ಸಿಡಿಸಿದ 28 ರನ್ (58 ಎಸೆತ, 3 ಬೌಂಡರಿ) ಹೆಚ್ಚಿನ ಗಳಿಕೆಯಾಗಿ ಕಂಡಿತು. ಇದನ್ನೂ ಓದಿ: ಕಿವೀಸ್ ಟೆಸ್ಟ್ ನಾಯಕತ್ವಕ್ಕೆ ಕೇನ್ ವಿಲಿಯಮ್ಸನ್ ಗುಡ್‌ಬೈ
Advertisement
Advertisement
2ನೇ ದಿನದಾಟದ ಅಂತ್ಯಕ್ಕೆ 44 ಓವರ್‌ಗಳಲ್ಲಿ ಬಾಂಗ್ಲಾ 8 ವಿಕೆಟ್ ನಷ್ಟಕ್ಕೆ 133 ರನ್ ಬಾರಿಸಿ 271 ರನ್‍ಗಳ ಹಿನ್ನಡೆಯಲ್ಲಿದೆ. ಮೆಹಿದಿ ಹಸನ್ ಮಿರಾಜ್ ಅಜೇಯ 16 ರನ್ (35 ಎಸೆತ, 1 ಬೌಂಡರಿ, 1 ಸಿಕ್ಸ್) ಮತ್ತು ಎಬಾಡೋಟ್ ಹೊಸೈನ್ 13 ರನ್ (27 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
Advertisement
ಈ ಮೊದಲು ಮೊದಲ ದಿನದಾಟದಲ್ಲಿ 278 ರನ್‍ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಭಾರತ 2ನೇ ದಿನದಾಟ ಆರಂಭಿಸಿ. ಮೊದಲ ದಿನದ ಹೀರೋ ಶ್ರೇಯಸ್ ಅಯ್ಯರ್ ಹಿಂದಿನ ದಿನದ ಮೊತ್ತಕ್ಕೆ 4 ರನ್ ಸೇರಿಸಿ ಒಟ್ಟು 86 ರನ್ (192 ಎಸೆತ, 10 ಬೌಂಡರಿ) ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಒಂದಾದ ಅಶ್ವಿನ್ ಮತ್ತು ಕುಲ್‍ದೀಪ್ ಭರ್ಜರಿ ಬ್ಯಾಟ್ ಬೀಸಿದರು. ಇದನ್ನೂ ಓದಿ: ಶತಕ ಸಿಡಿಸಿ ಅಪ್ಪನಂತೆ ಸಂಭ್ರಮಿಸಿದ ಅರ್ಜುನ್ ತೆಂಡೂಲ್ಕರ್
ಅಶ್ವಿನ್-ಕುಲ್‍ದೀಪ್ ಕಮಾಲ್:
ಬಾಂಗ್ಲಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ 8ನೇ ವಿಕೆಟ್‍ಗೆ 87 ರನ್ (200 ಎಸೆತ) ಜೊತೆಯಾಟವಾಡಿ ಬೃಹತ್ ಮೊತ್ತಕ್ಕೆ ಕಾರಣರಾದರು. ಅಶ್ವಿನ್ ಅರ್ಧಶತಕ 58 ರನ್ (113 ಎಸೆತ, 2 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆದರೆ, ಕುಲ್‍ದೀಪ್ ಆಟ 40 ರನ್‌ಗೆ (114 ಎಸೆತ, 5 ಬೌಂಡರಿ) ಅಂತ್ಯ ಕಂಡಿತು. ಅಂತಿಮವಾಗಿ ಉಮೇಶ್ ಯಾದವ್ ಅವರ ಬಿರುಸಿನ 15 ರನ್ (10 ಎಸೆತ, 2 ಸಿಕ್ಸ್) ನೆರವಿನಿಂದ 113.5 ಓವರ್‌ಗಳ ಅಂತ್ಯಕ್ಕೆ 404 ರನ್‍ಗಳಿಗೆ ಆಲೌಟ್ ಆಯಿತು.