ಸಿಡ್ನಿ: ಸರಣಿಯಲ್ಲಿ 521 ರನ್ ಸಿಡಿಸಿ ಮಿಂಚಿದ್ದ ಚೇತೇಶ್ವರ ಪೂಜಾರ ಟೀಂ ಇಂಡಿಯಾದ ಸಂಭ್ರಮಾಚರಣೆಯ ವೇಳೆ ಮಾಡಿರುವ ಡ್ಯಾನ್ಸ್ ವಿಡಿಯೋ ಈಗ ವೈರಲ್ ಆಗಿದೆ.
ಅಂತಿಮ ಟೆಸ್ಟ್ ಡ್ರಾದಲ್ಲಿ ಮುಕ್ತಾಯವಾದ ಹಿನ್ನೆಲೆಯಲ್ಲಿ 2-1 ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾದ ಆಟಗಾರರು ವಿಭಿನ್ನವಾಗಿ ವಾಕಿಂಗ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು. ಈ ವೇಳೆ ಪೂಜಾರ ಸ್ಟೆಪ್ ಹಾಕಿರಲಿಲ್ಲ. ಇದನ್ನು ಗಮನಿಸಿದ ಉಳಿದ ಆಟಗಾರರು ಪೂಜಾರ ಅವರನ್ನು ಮುಂದಕ್ಕೆ ದೂಡಿದರು. ಅಷ್ಟೇ ಅಲ್ಲದೇ ರಿಷಬ್ ಪಂತ್ ಪೂಜಾರ ಅವರ ಕೈಯನ್ನು ಹಿಡಿದು ಡ್ಯಾನ್ಸ್ ಮಾಡಿಸಿದರು.
Advertisement
Advertisement
ಸರಣಿ ಗೆದ್ದ ಬಳಿಕ ಸುದ್ದಿಗೋಷ್ಠಿಯ ವೇಳೆ ಈ ಪ್ರಶ್ನೆ ಕೇಳಿದ್ದಕ್ಕೆ ಕೊಹ್ಲಿ, ಈ ಪ್ರಶ್ನೆಯನ್ನು ರಿಷಬ್ ಪಂತ್ ಗೆ ಕೇಳಬೇಕು. ರಿಷಬ್ ಮುಂದೆ ಬಂದು ಡ್ಯಾನ್ಸ್ ಮಾಡಿದಾಗ ನಾವೆಲ್ಲರೂ ಅದೇ ಸ್ಟೆಪ್ ಫಾಲೋ ಮಾಡಿದೇವು. ಆದರೆ ಈ ಸರಳ ಸ್ಟೆಪ್ ಅನ್ನು ಪೂಜಾರ ಮಾಡಲಿಲ್ಲ. ಇದರಲ್ಲಿ ನಿಮಗೆ ಪೂಜಾರ ಎಷ್ಟು ಸರಳ ವ್ಯಕ್ತಿ ಎನ್ನುವುದು ಗೊತ್ತಾಗುತ್ತದೆ ಎಂದು ತಿಳಿಸಿದರು.
Advertisement
ಭಾರತೀಯ ಕಾಲಮಾನ ಬೆಳಗ್ಗೆ 11.22ಕ್ಕೆ ಈ ವಿಡಿಯೋ ಅಪ್ಲೋಡ್ ಆಗಿದ್ದು, 1 ಸಾವಿರಕ್ಕೂ ಅಧಿಕ ಮಂದಿ ರೀಟ್ವೀಟ್ ಮಾಡಿದ್ದರೆ, 4 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಇದನ್ನೂ ಓದಿ: ಟೆಸ್ಟ್ ಸರಣಿ ಗೆದ್ದು ಆಸೀಸ್ ನೆಲದಲ್ಲಿ ವಿಶೇಷ ಸಾಧನೆಗೈದ ಟೀಂ ಇಂಡಿಯಾ
Advertisement
ಈ ಪಂದ್ಯದಲ್ಲಿ 193 ರನ್ ಮತ್ತು ಸರಣಿಯಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ಚೇತೇಶ್ವರ ಪೂಜಾರ ಅರ್ಹವಾಗಿ ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.
Cheteshwar Pujara: can bat, can't dance? ????????
Celebrations have well and truly begun for Team India! #AUSvIND pic.twitter.com/XUWwWPSNun
— cricket.com.au (@cricketcomau) January 7, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv