ರಾಂಚಿ: ಮೂರನೇ ಟೆಸ್ಟ್ ಪಂದ್ಯದಿಂದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಔಟ್ ಆಗಿದ್ದಾರೆ. ಬಲ ಭುಜಕ್ಕೆ ಗಾಯಗೊಂಡಿರುವ ಕೊಹ್ಲಿಗೆ ವೈದ್ಯರು ವಿಶ್ರಾಂತಿ ಸೂಚಿಸಿದ ಹಿನ್ನೆಲೆಯಲ್ಲಿ ಈ ಪಂದ್ಯದಿಂದ ಅಲಭ್ಯರಾಗಲಿದ್ದಾರೆ.
ಜಡೇಜಾ ಎಸೆದ 40ನೇ ಓವರ್‍ನ ಒಂದನೆ ಎಸೆತವನ್ನು ಹ್ಯಾಂಡ್ಸ್ ಕಾಂಬ್ ಬಲವಾಗಿ ಹೊಡೆದಿದ್ದರು. ವೇಗವಾಗಿ ಓಡಿ ಬಂದು ಬೌಂಡರಿ ಬಳಿ ವಿರಾಟ್ ಕೊಹ್ಲಿ ಬಾಲನ್ನು ತಡೆದು ನಿಲ್ಲಿದ್ದರು. ಆದರೆ ಹಿಡಿಯುವ ರಭಸಕ್ಕೆ ನೆಲಕ್ಕೆ ಬಿದ್ದ ಪರಿಣಾಮ ಬಲ ಭುಜಕ್ಕೆ ಪೆಟ್ಟಾಗಿತ್ತು. ಭುಜದ ನೋವು ಹೆಚ್ಚಿದ್ದ ಹಿನ್ನೆಲೆಯಲ್ಲಿ ಕೊಹ್ಲಿ ಮೈದಾನದಿಂದ ತೆರಳಿದ್ದರು.
Advertisement
ಇದನ್ನೂ ಓದಿ: ವೃದ್ಧಿಮಾನ್ ಸಹಾ, ಸ್ಮಿತ್ ಬಾಲ್ ಆಟ ನೋಡಿ ಅಂಪೈರ್, ಆಟಗಾರರು ನಕ್ಕಿದ್ದೆ ನಕ್ಕಿದ್ದು! ವಿಡಿಯೋ
Advertisement
ಕೊಹ್ಲಿ ಅನುಪಸ್ಥಿತಿಯಲ್ಲಿ ಉಪನಾಯಕ ಅಜಿಂಕ್ಯ ರಹಾನೆ ಈಗ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಶುಕ್ರವಾರ ಸ್ಕ್ಯಾನಿಂಗ್ ರಿಪೋರ್ಟ್ ಬರಲಿದ್ದು, ಹೆಚ್ಚಿನ ಗಾಯವಾಗಿದ್ದರೆ ಕೊಹ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ.
Advertisement
ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 333 ರನ್ ಗಳಿಂದ ಸೋತಿದ್ದರೆ, ಬೆಂಗಳೂರು ಟೆಸ್ಟ್ ನಲ್ಲಿ 75 ರನ್ ಗಳಿಂದ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸಮಬಲ ಸಾಧಿಸಿತ್ತು.
Advertisement
ಇದನ್ನೂ ಓದಿ:ಅಶ್ವಿನ್ ಬೌಲಿಂಗ್‍ನಲ್ಲಿ ಸಹಾ ಸೂಪರ್ ಡೈವಿಂಗ್ ಕ್ಯಾಚ್- ಸೊನ್ನೆ ಸುತ್ತಿದ ವೇಡ್