ಮೆಲ್ಬರ್ನ್: ಅಭಿಷೇಕ್ ಶರ್ಮಾ ಏಕಾಂಗಿ ಹೋರಾಟದ ಹೊರತಾಗಿಯೂ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ ಆಸ್ಟ್ರೇಲಿಯಾ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ.
ಮೆಲ್ಬರ್ನ್ ಕ್ರಿಕೆಟ್ ಅಂಗಳದಲ್ಲಿಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡು ಬ್ಯಾಟಿಂಗ್ ಮಾಡುವ ಅವಕಾಶವನ್ನ ಭಾರತ ತಂಡಕ್ಕೆ ಬಿಟ್ಟುಕೊಟ್ಟಿತು. ಮೊದಲು ಬ್ಯಾಟ್ ಮಾಡಿದ ಭಾರತ 18.4 ಓವರ್‌ಗಳಲ್ಲೇ 125 ರನ್‌ಗಳಿಗೆ ಆಲೌಟ್ ಆಯಿತು. ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 13.2 ಓವರ್‌ಗಳಲ್ಲೇ 126 ರನ್ ಗಳಿಸಿ ಗೆಲುವು ಸಾಧಿಸಿತು. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯನ್ನ 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.ಇದನ್ನೂ ಓದಿ: Ind vs Aus T20I | ಮೊದಲ ಪಂದ್ಯ ಮಳೆಯಾಟಕ್ಕೆ ಬಲಿ – ಭಾರತಕ್ಕೆ ನಿರಾಸೆ
ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ ಆರಂಭದಲ್ಲೇ ಸ್ಫೋಟಕ ಪ್ರದರ್ಶನ ನೀಡಿದರು. ಇತ್ತ ಹೆಡ್ ಔಟಾಗುತ್ತಿದ್ದಂತೆ ಮೊದಲ 14 ಎಸೆತಗಳಲ್ಲಿ 14 ರನ್ ಗಳಿಸಿದ್ದ ಮಾರ್ಷ್ ಮುಂದಿನ 12 ಎಸೆತಗಳಲ್ಲಿ ಬರೋಬ್ಬರಿ 32 ರನ್ ಚಚ್ಚಿದರು. ಇದು ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರಿತು. ಆಸೀಸ್ ಪರ ಮಿಚೆಲ್ ಮಾರ್ಷ್ 26 ಎಸೆತಗಳಲ್ಲಿ 46 ರನ್ (4 ಸಿಕ್ಸ್, 2 ಬೌಂಡರಿ) ಹಾಗೂ ಟ್ರಾವಿಸ್ ಹೆಡ್ 15 ಎಸೆತಗಳಲ್ಲಿ 28 ರನ್‌ಗಳಿಸಿ (3 ಬೌಂಡರಿ, 1 ಸಿಕ್ಸ್) ಆರಂಭದಲ್ಲೇ 51 ರನ್‌ಗಳ ಜೊತೆಯಾಟ ಆಡಿದರು. ಇನ್ನುಳಿದಂತೆ ಜೋಶ್ ಇಂಗ್ಲಿಸ್ 20, ಮಿಚೆಲ್ ಓವನ್ 14, ಟಿಮ್ ಡೇವಿಡ್ 1, ಮಾರ್ಕಸ್ ಸ್ಟೊಯಿನಿಸ್ 6 ರನ್‌ಗಳಿಸಿದರು.
ಭಾರತ ಪರ ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್ ಹಾಗೂ ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದುಕೊಂಡರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಭಾರತ ಆರಂಭದಲ್ಲೇ ಅಗ್ರ ಬ್ಯಾಟರ್‌ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಮಧ್ಯಮ ಕ್ರಮಾಂಕದಲ್ಲಿ ಹರ್ಷಿತ್ ರಾಣಾ ಹಾಗೂ ಅಭಿಷೇಕ್ ಶರ್ಮಾರ ಅರ್ಧಶತಕ ಜೊತೆಯಾಟ ತಂಡದ ಮೊತ್ತ 100ರ ಗಡಿ ದಾಟಿಸುವಲ್ಲಿ ಯಶಸ್ವಿಯಾಯಿತು. ಅಭಿಷೇಕ್ ಶರ್ಮಾ 37 ಎಸೆತಗಳಲ್ಲಿ 68 ರನ್, ಹರ್ಷಿತ್ ರಾಣಾ 33 ಎಸೆತಗಳಲ್ಲಿ 38 ರನ್‌ಗಳಿಸಿದ್ರೆ, ಶುಭ್‌ಮನ್ ಗಿಲ್ 5 ರನ್, ಶಿವಂ ದುಬೆ 4 ರನ್, ಅಕ್ಷರ್ ಪಟೇಲ್ 7 ರನ್, ಸಂಜು ಸ್ಯಾಮ್ಸನ್ 2 ರನ್, ಸೂರ್ಯಕುಮಾರ್ 1 ರನ್ ಗಳಿಸಿದರು.
ಆಸ್ಟ್ರೇಲಿಯಾ ಪರ ಜೋಶ್ ಹೇಜಲ್ವುಡ್ 3 ವಿಕೆಟ್ ಪಡೆದರೆ, ಕ್ಸೇವಿಯರ್ ಬಾರ್ಟ್ಲೆಟ್ ಹಾಗೂ ನಾಥನ್ ಎಲ್ಲಿಸ್ ತಲಾ 2 ವಿಕೆಟ್ ಹಾಗೂ ಮಾರ್ಕಸ್ ಸ್ಟೊಯಿನಿಸ್ 1 ವಿಕೆಟ್ ಪಡೆದುಕೊಂಡರು.ಇದನ್ನೂ ಓದಿ: ಆಸೀಸ್ ವಿರುದ್ಧ 2 ಸಿಕ್ಸರ್ ಸಿಡಿಸಿ ವಿಶೇಷ ದಾಖಲೆ ಬರೆದ ಸೂರ್ಯ

