ಧರ್ಮಶಾಲಾ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕನೆಯ ಹಾಗೂ ಕೊನೆಯ ಟೆಸ್ಟ್ ನ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿದೆ.
ಆಸ್ಟ್ರೇಲಿಯಾದ 300 ರನ್ ಗಳಿಗೆ ಜವಾಬು ನೀಡಲು ಆರಂಭಿಸಿದ ಭಾರತ 90 ಓವರ್‍ಗಳಲ್ಲಿ 248 ರನ್‍ಗಳಿಸಿದೆ. ಮುರಳಿ ವಿಜಯ್ ಇಂದು 21 ರನ್‍ಗಳಿಸಿ ಆರಂಭದಲ್ಲೇ ಔಟಾದರೂ, ಕೆಎಲ್ ರಾಹುಲ್ 60 ರನ್(124 ಎಸೆತ, 9 ಬೌಂಡರಿ, 1 ಸಿಕ್ಸರ್), ಚೇತೇಶ್ವರ ಪೂಜಾರ 57 ರನ್(151 ಎಸೆತ, 6 ಬೌಂಡರಿ) ನಾಯಕ ಅಜಿಂಕ್ಯಾ ರೆಹಾನೆ 46 ರನ್(104 ಎಸೆತ, 7 ಬೌಂಡರಿ, 1 ಸಿಕ್ಸರ್), ಆರ್ ಅಶ್ವಿನ್ 30 ರನ್( 49 ಎಸೆತ, 4 ಬೌಂಡರಿ) ಬಾರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
Advertisement
ಕ್ರೀಸ್‍ನಲ್ಲಿ ಈಗ ಕೀಪರ್ ವೃದ್ಧಿಮಾನ್ ಸಹಾ 10 ರನ್(43 ಎಸೆತ,1 ಬೌಂಡರಿ) ರವೀಂದ್ರ ಜಡೇಜಾ 16 ರನ್(23 ಎಸೆತ, 2 ಸಿಕ್ಸರ್) ಗಳಿಸಿ ಆಟವಾಡುತ್ತಿದ್ದು, ಸೋಮವಾರ ಬ್ಯಾಟಿಂಗ್ ಮುಂದುವರೆಸಲಿದ್ದಾರೆ.
Advertisement
ಸ್ಪಿನ್ನರ್ ನಥನ್ ಲಿಯಾನ್ 4 ವಿಕೆಟ್ ಕಿತ್ತರೆ, ಜೋಷ್ ಹ್ಯಾಜಲ್‍ವುಡ್, ಪ್ಯಾಟ್ ಕುಮ್ಮಿಸ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.
Advertisement
ಈ ಸೀರಿಸ್ ಟಾಪ್ ರನ್ ಸ್ಕೋರರ್?
ನಾಯಕ ಸ್ಮಿತ್ 7 ಇನ್ನಿಂಗ್ಸ್ ಗಳಿಂದ 482 ರನ್ ಗಳಿಸಿದ್ದರೆ, ಚೇತೇಶ್ವರ ಪೂಜಾರ 6 ಇನ್ನಿಂಗ್ಸ್ ಗಳಿಂದ 405 ರನ್ ಗಳಿಸಿದ್ದಾರೆ. 6 ಇನ್ನಿಂಗ್ಸ್ ಗಳಿಂದ 342 ರನ್‍ಗಳಿಸುವ ಮೂಲಕ ಕೆಎಲ್ ರಾಹುಲ್ ಮೂರನೇ ಸ್ವಾನದಲ್ಲಿದ್ದಾರೆ.
Advertisement
ವಿರಾಟ್ ಕೊಹ್ಲಿ 2011ರಿಂದ ಇಲ್ಲಿಯವರೆಗೆ ಸತತ 54 ಪಂದ್ಯಗಳನ್ನು ಆಡುತ್ತಾ ಬಂದಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಗಾಯದ ಸಮಸ್ಯೆಯಿಂದಾಗಿ ಈ ಟೆಸ್ಟ್ ಪಂದ್ಯದಿಂದ ಹೊರಗಡೆ ಉಳಿದಿದ್ದಾರೆ.