ಬೆಂಗಳೂರು: ಎರಡನೇ ಟೆಸ್ಟ್ ಪಂದ್ಯವನ್ನು ಭಾರತ 75 ರನ್‍ಗಳಿಂದ ಗೆದ್ದುಕೊಳ್ಳುವ ಮೂಲಕ ಭಾರತ 5 ಟೆಸ್ಟ್ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
ಗೆಲ್ಲಲು 188 ರನ್‍ಗಳ ಸುಲಭದ ಸವಾಲನ್ನು ಸ್ವೀಕರಿಸಿದ ಆಸ್ಟ್ರೇಲಿಯಾ ಆರಂಭದಿಂದ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಅಂತಿಮವಾಗಿ 35.4 ಓವರ್‍ಗಳಲ್ಲಿ 112 ರನ್‍ಗಳಿಗೆ ಆಲೌಟ್ ಆಯ್ತು. ಸ್ಪಿನ್ನರ್ ಆರ್ ಅಶ್ವಿನ್ 6 ವಿಕೆಟ್‍ಗಳನ್ನು ಪಡೆಯುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು.
Advertisement
ಒಂದು ಹಂತದಲ್ಲಿ 4 ವಿಕೆಟ್ ಕಳೆದುಕೊಂಡು 101 ರನ್‍ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಆಸ್ಟ್ರೇಲಿಯಾ 11 ರನ್ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡ ಕಾರಣ ಸೋಲನ್ನು ಅನುಭವಿಸಿದೆ.
Advertisement
213 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ನಾಲ್ಕನೇಯ ದಿನದಾಟವನ್ನು ಆರಂಭಿಸಿದ ಭಾರತ ಇಂದು 6 ವಿಕೆಟ್‍ಗಳ ಸಹಾಯದಿಂದ 61 ರನ್‍ಗಳಿಸಿ 97.1 ಓವರ್‍ಗಳಲ್ಲಿ 274 ರನ್‍ಗಳಿಗೆ ಆಲೌಟ್ ಆಯ್ತು.
Advertisement
ಸೋಮವಾರ 79 ರನ್‍ಗಳಿದ್ದ ಚೇತೇಶ್ವರ ಪೂಜಾರ ಇಂದು 92 ರನ್(211 ಎಸೆತ, 7 ಬೌಂಡರಿ), 40 ರನ್‍ಗಳಿಸಿದ್ದ ಅಜಿಕ್ಯಾ ರೆಹಾನೆ 52 ರನ್(134 ಎಸೆತ, 4 ಬೌಂಡರಿ) ಗಳಿಸಿ ಔಟಾದರು. ಬೌಲರ್‍ಗಳು ಬೇಗನೇ ವಿಕೆಟ್ ಒಪ್ಪಿಸಿದ್ದರಿಂದ ಭಾರತ 274 ರನ್‍ಗಳಿಗೆ ಆಲೌಟ್ ಆಯ್ತು.
Advertisement
ಆಸ್ಟ್ರೇಲಿಯಾದ ಪರವಾಗಿ ನಾಯಕ ಸ್ವೀವ್ ಸ್ಮಿತ್ 28 ರನ್, ಪೀಟರ್ ಹ್ಯಾಂಡ್ಸ್ ಕಾಂಬ್ 24 ರನ್‍ಗಳಿಸಿದರು. ಅಶ್ವಿನ್ 6 ವಿಕೆಟ್ ಪಡೆದರೆ ಉಮೇಶ್ ಯಾದವ್ 2 ವಿಕೆಟ್ ಪಡೆದರು. ಇಶಾಂತ್ ಶರ್ಮಾ ಮತ್ತು ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್ ನಲ್ಲಿ 91 ರನ್, ಎರಡನೇ ಇನ್ನಿಂಗ್ಸ್ ನಲ್ಲಿ 51 ರನ್ ಬಾರಿಸಿದ ಕೆಎಲ್ ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಪುಣೆಯಲ್ಲಿ ನಡೆದ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ 333 ರನ್‍ಗಳಿಂದ ಗೆದ್ದು ಕೊಂಡಿತ್ತು. ಮೂರನೇ ಟೆಸ್ಟ್ ಪಂದ್ಯ ರಾಂಚಿಯಲ್ಲಿ ಮಾರ್ಚ್ 16ರಿಂದ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್
ಭಾರತ 189& 274
ಆಸ್ಟ್ರೇಲಿಯಾ 276 & 112