– 34 ರನ್‌ಗಳಿಗೆ 8 ವಿಕೆಟ್ ಪತನ
ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಮಹಿಳೆಯರು ಸ್ವಲ್ಪದರಲ್ಲೇ ಚಿನ್ನದ ಪದಕದಿಂದ ವಂಚಿತರಾಗಿದ್ದಾರೆ. ರೋಚಕ ಫೈನಲ್‌ನಲ್ಲಿ ಆಸ್ಟ್ರೇಲಿಯಾ 9 ರನ್‌ಗಳಿಂದ ಇಂಡಿಯಾವನ್ನು ಸೋಲಿಸಿ ಚೊಚ್ಚಲ ಪದಕವನ್ನು ಮುಡಿಗೇರಿಸಿಕೊಂಡಿದೆ. ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕ್ರಿಕೆಟ್ ಸೇರಿಸಲಾಗಿತ್ತು.
ಗೆಲ್ಲಲು 162 ರನ್‌ಗಳ ಗುರಿಯನ್ನು ಪಡೆದ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿದ್ದರೂ ನಾಯಕಿ ಹರ್ಮನ್‌ಪ್ರೀತ್ ಕೌರ್, ಜೆಮಿಮಾ ರಾಡಿಗ್ರಾಸ್ ಹೋರಾಟದಿಂದ ಗೆಲುವಿನ ಹಂತದವರೆಗೆ ತಲುಪಿತ್ತು. ಆದರೆ ಕೊನೆಯಲ್ಲಿ ವಿಕೆಟ್ ಕಳೆದುಕೊಳ್ಳುವುದರೊಂದಿಗೆ ಅಂತಿಮವಾಗಿ 19.3 ಓವರ್‌ಗಳಲ್ಲಿ 152 ರನ್‌ಗಳಿಗೆ ಆಲೌಟ್ ಆಯ್ತು.
Advertisement
Advertisement
ಚೇಸ್ ಮಾಡಿದ್ದ ಭಾರತ 22 ರನ್‌ಗಳಿಸುವಷ್ಟರಲ್ಲೇ ಆರಂಭಿಕ ಇಬ್ಬರು ಆಟಗಾರ್ತಿಯರಾದ ಸ್ಮೃತಿ ಮಂದನಾ ಮತ್ತು ಶಫಾಲಿ ವರ್ಮಾ ಅವರ ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಜೊತೆಯಾದ ಜೆಮಿಮಾ ಮತ್ತು ಕೌರ್ ನಿಧನವಾಗಿ ಆಡಿ ಇನ್ನಿಂಗ್ಸ್ ಕಟ್ಟತೊಡಗಿದರು. ಇವರಿಬ್ಬರು ಮೂರನೇ ವಿಕೆಟಿಗೆ 71 ಎಸೆತಗಳಲ್ಲಿ 96 ರನ್ ಜೊತೆಯಾಟವಾಡಿದಾಗ ಗೆಲುವಿನ ಆಸೆ ಚಿಗುರಿತ್ತು. ಆದರೆ ಇವರಿಬ್ಬರು ಔಟಾದ ಬೆನ್ನಲ್ಲೇ ಟೀಂ ಇಂಡಿಯಾದ ಪತನ ಆರಂಭವಾಯಿತು.
Advertisement
14.3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 118 ರನ್‌ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಭಾರತ ನಂತರ 34 ರನ್ ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿತ್ತು. ಮಧ್ಯಮ ಕ್ರಮಾಂಕ ಮತ್ತು ಬೌಲರ್‌ಗಳಿಂದ ಬ್ಯಾಟಿಂಗ್ ಪ್ರದರ್ಶನ ಬಾರದ ಕಾರಣ ಪಂದ್ಯವನ್ನು ಕೈಚೆಲ್ಲಿತು. ಇದನ್ನೂ ಓದಿ: CWG 2022: ನಿಖತ್ ಜರೀನ್‌ಗೆ ಒಲಿದ ಚಿನ್ನ – ಬಾಕ್ಸಿಂಗ್‌ನಲ್ಲಿ ಭಾರತಕ್ಕಿಂದು ಹ್ಯಾಟ್ರಿಕ್ ಗೋಲ್ಡ್
Advertisement
Celebrations are in order at the Edgbaston ????????
Congratulations to @AusWomenCricket and @WHITE_FERNS on winning the Gold and Bronze respectively. #B2022 #CWG2022 pic.twitter.com/A8b5PelTAj
— BCCI Women (@BCCIWomen) August 7, 2022
ಹರ್ಮನ್ ಪ್ರೀತ್ ಕೌರ್ 65 ರನ್(43 ಎಸೆತ, 7 ಬೌಂಡರಿ, 2 ಸಿಕ್ಸರ್), ಜೆಮಿಮಾ 33 ರನ್(33 ಎಸೆತ, 3 ಬೌಂಡರಿ) ದೀಪ್ತಿ ಶರ್ಮಾ 13 ರನ್ ಗಳಿಸಿ ಔಟಾದರು.
ಟಾಸ್ ಸೋತು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ಪರವಾಗಿ ಬೆಥ್ ಮೂನಿ 61 ರನ್(41 ಎಸೆತ, 8 ಬೌಂಡರಿ) ಮೆಗ್ ಲ್ಯಾನಿಂಗ್ 36 ರನ್(26 ಎಸೆತ, 5 ಬೌಂಡರಿ, 1 ಸಿಕ್ಸರ್), ಗಾರ್ಡ್‌ನರ್ 25 ರನ್(15 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದ ಪರಿಣಾಮ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತ್ತು.
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]