ಅಹಮದಾಬಾದ್: ಅಜೇಯರಾಗಿ ಈ ಬಾರಿ ವಿಶ್ವಕಪ್ ಫೈನಲ್ ತಲುಪಿರೋ ಭಾರತ ತಂಡಕ್ಕೆ, ಕಪ್ ಗೆಲ್ಲೋಕೆ ಇನ್ನೊಂದು ಹೆಜ್ಜೆ ಮಾತ್ರ ಬಾಕಿ ಇರೋದು. ಕಳೆದ 13 ವರ್ಷಗಳಿಂದ ಕಪ್ ಬರ ಎದುರಿಸಿದ್ದ ಮೆನ್ ಇನ್ ಬ್ಲ್ಯೂ, (Men In Blue) ಈ ಬಾರಿ ಆ ಆಸೆಗೆ ಜೀವ ತುಂಬುವ ತವಕದಲ್ಲಿದೆ.
2011 ಏಪ್ರಿಲ್ 2 ಧೋನಿ (Mahendra Singh Dhoni)) ಸಿಡಿಸಿದ್ದ ಆ ಸಿಕ್ಸರ್, 28 ವರ್ಷಗಳ ಕಪ್ ಬರವನ್ನ ನೀಗಿಸಿ ಇತಿಹಾಸವನ್ನ ನಿರ್ಮಿಸಿತ್ತು. ಆ ಸಂಭ್ರಮಕ್ಕೆ ನೋಡ ನೋಡುತ್ತಿದ್ದಂತೆ 12 ವರ್ಷಗಳು ಕಳೆದು ಹೋಗಿದೆ. ಆದರೆ 2011 ರ ಬಳಿಕ ಯಾಕೋ ಏನು ಭಾರತ ತಂಡ ಎಷ್ಟೇ ಉತ್ತಮ ಪ್ರದರ್ಶನ ನೀಡಿದ್ರು ಕಪ್ ಗೆಲ್ಲೋ ಆಸೆ ಮರಿಚೀಕೆ ಹಾಗೇ ಉಳಿದಿತ್ತು. ಆದರೆ ಈಗ ಕಪ್ ಕನಸನ್ನ ಮತ್ತೆ ನನಸು ಮಾಡೋ ಸಂದರ್ಭ ಒದಗಿ ಬಂದಿದ್ದು, ಆ ಒಂದು ಸಂಭ್ರಮದ ಕ್ಷಣಕ್ಕಾಗಿ ಇಡೀ ದೇಶವೇ ಶುಭ ಹಾರೈಕೆಯೊಂದಿಗೆ ತುದಿಗಾಲಲ್ಲಿ ಕಾದು ನಿಂತಿದೆ.
Advertisement
Advertisement
12 ವರ್ಷಗಳ ಬಳಿಕ ಮತ್ತೆ ಟೀ ಇಂಡಿಯಾಗೆ (Team India) ವರ್ಲ್ಡ್ ಚಾಂಪಿಯನ್ (WorldCup 2023) ಆಗೋ ಅವಕಾಶ ಒದಗಿಬಂದಿದೆ. ವಿಶ್ವಕಪ್ ಆರಂಭಿಕ ಪಂದ್ಯದಿಂದಲೂ ಪ್ರಾಬಲ್ಯ ಸಾಧಿಸಿರೋ ಟೀಂ ಇಂಡಿಯಾ ಫೈನಲ್‍ನಲ್ಲಿ ಇಂದು ಬಲಿಷ್ಠ ತಂಡವನ್ನ ಎದುರಿಸುತ್ತಿದೆ. ಈಗಾಗಲೇ ವಿಶ್ವ ಕ್ರಿಕೆಟ್‍ನಲ್ಲಿ ಮಹಾದಾಖಲೆ ಮೂಲಕ 5 ಬಾರಿ ಚಾಂಪಿಯನ್ ಆಗಿರುವ ಏಕೈಕ ತಂಡ ಅಂದ್ರೆ ಅದು ಆಸ್ಟ್ರೇಲಿಯಾ (Australia) ಮಾತ್ರ. ಈಗ ಸದ್ಯ ಆ ಐದು ಬಾರಿ ಚಾಂಪಿಯನ್ ತಂಡವನ್ನ ಮೆಟ್ಟಿ ನಿಲ್ಲಬೇಕಾದ ಸವಾಲು ಎರಡು ಬಾರಿಯ ಚಾಂಪಿಯನ್ ಭಾರತ ತಂಡಕ್ಕೆ ಎದುರಾಗಿದೆ. ಈ ಸವಾಲನ್ನ ಸದ್ಯ ಮೆನ್ ಇನ್ ಬ್ಲ್ಯೂ ಹೊಡೆದುರಿಳಿಸಿದ್ರೆ ಮೂರನೇ ಬಾರಿಗೆ ಕೋಟಿ ಕೋಟಿ ಭಾರತೀಯರ ಕನಸು ನನಸಾಗಲಿದೆ. ಇದನ್ನೂ ಓದಿ: ಅಂಪೈರ್‌ಗಳ ಆಯ್ಕೆ ಟೀಂ ಇಂಡಿಯಾ ಅಭಿಮಾನಿಗಳ ನಿದ್ದೆಗೆಡಿಸಿದ್ದೇಕೆ? – ಯಾರು ಘಟಾನುಘಟಿಗಳು?
Advertisement
Advertisement
ಇಂದಿನ ಪಂದ್ಯ ಗೆದ್ದರೆ ಭಾರತ ಮತ್ತೊಂದು ಐತಿಹಾಸಿಕ ದಾಖಲೆಗೆ ಪಾತ್ರ ಆಗಲಿದೆ. ಆಸ್ಟ್ರೇಲಿಯಾ ಹೊರತು ಪಡಿಸಿದರೆ ಉಳಿದ ಯಾವ ದೇಶಗಳು 3 ಅಥವಾ 3ಕ್ಕಿಂತ ಹೆಚ್ಚು ಬಾರಿ ವಿಶ್ವಚಾಂಪಿಯನ್ ಆಗಿಲ್ಲ. ವೆಸ್ಟ್ ಇಂಡೀಸ್, ಮತ್ತು ಭಾರತ ತಂಡ ಎರಡು ಬಾರಿ ಮಾತ್ರ ಕಪ್ ಗೆದ್ದಿದ್ರೆ, ಉಳಿದಂತೆ ಇಂಗ್ಲೆಂಡ್ (England), ಪಾಕಿಸ್ತಾನ (Pakistan), ಶ್ರೀಲಂಕಾ (Srilanka), ತಂಡಗಳು ತಲಾ ಒಂದು ಬಾರಿ ಮಾತ್ರ ಗೆದ್ದಿರೋದು. ಸದ್ಯ ಈ ಬಾರಿ ಭಾರತ ಫೈನಲ್ ಪಂದ್ಯ ಗೆದ್ದರೆ ಅತೀ ಹೆಚ್ಚು ವಿಶ್ವಕಪ್ ಗೆದ್ದ ತಂಡಗಳ ಪೈಕಿ ಎರಡನೇ ಸ್ಥಾನಕ್ಕೆ ತಲುಪಲಿದೆ. ಜೊತೆಗೆ ಮೂರನೇ ಬಾರಿಗೆ ಕಪ್ ಗೆಲ್ಲುವ ಎರಡನೇ ತಂಡ ಅನ್ನೋ ಖ್ಯಾತಿಗೂ ಕೂಡ ಒಳಗಾಗಲಿದೆ.
ಒಟ್ಟಾರೆ ಇಡೀ ದೇಶವೇ ಭಾರತದ ಫೈನಲ್ ಪಂದ್ಯ ಜಯಕ್ಕಾಗಿ ಕಾದು ನಿಂತಿದೆ. ಇಂದಿನ ಪಂದ್ಯದಲ್ಲೂ ಮೆನ್ ಇನ್ ಬ್ಲ್ಯೂ ಅಜೇಯ ಓಟ ಮುಂದುವರಿಸುವ ಮೂಲಕ ಮತ್ತೊಮ್ಮೆ ವಿಶ್ವ ಕ್ರಿಕೆಟ್‍ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಲಿ ಅಂತಾ ಶುಭ ಕೋರೋಣ. ಆಲ್ ದಿ ಬೆಸ್ಟ್ ಟೀಂ ಇಂಡಿಯಾ.