ಮೊಹಾಲಿ: ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 4ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಆಸೀಸ್‍ಗೆ ಗೆಲ್ಲಲು 359 ರನ್ ಗುರಿ ನೀಡಿದೆ.
ಕಳೆದ ಮೂರು ಏಕದಿನ ಪಂದ್ಯಗಳಲ್ಲಿ ವಿಫಲವಾಗಿದ್ದ ಆರಂಭಿಕ ಶಿಖರ್ ಧವನ್ 115 ಎಸೆತಗಳಲ್ಲಿ 143 ರನ್ ಸಿಡಿಸಿ ವಿಶ್ವಕಪ್‍ಗೂ ಮುನ್ನ ಫಾರ್ಮ್ ಗೆ ಮರಳಿದ್ದಾರೆ. ಇತ್ತ ಮತ್ತೊಬ್ಬ ಆರಂಭಿಕ ರೋಹಿತ್ ಶರ್ಮಾ ಕೂಡ 92 ಎಸೆತಗಳಿಂದ 5 ಬೌಂಡರಿ 2 ಸಿಕ್ಸರ್ ಮೂಲಕ 95 ರನ್ ಗಳಿಸಿ ಮಿಂಚಿದರು. ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ 158 ರನ್ ಗಳಿಸಿತು.
Advertisement
After three single-figured scores in his last four ODIs, @SDhawan25 is back to his best with his 16th ODI hundred! ????#INDvAUS LIVE ➡️ https://t.co/X4QGtIjbn2 pic.twitter.com/V5H4lpLsdM
— ICC (@ICC) March 10, 2019
Advertisement
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಕೊಂಡ ಟೀಂ ಇಂಡಿಯಾಗೆ ಧವನ್ ಸ್ಫೋಟಕ ಆಟದ ಮೂಲಕ ಆರಂಭ ನೀಡಿದರು. ಇತ್ತ ರೋಹಿತ್ ಶರ್ಮಾ ರಕ್ಷಣಾತ್ಮಕ ಆಟವಾಡಿ ಧವನ್‍ಗೆ ಸಾಥ್ ನೀಡಿದ್ದರು. ಈ ಜೋಡಿ ಮೊದಲ ವಿಕೆಟ್‍ಗೆ 186 ಎಸೆತಗಳಲ್ಲಿ ಬರೋಬ್ಬರಿ 193 ರನ್ ಜೊತೆಯಾಟ ನೀಡಿದರು. ಈ ಮೂಲಕ ಮೊದಲ ವಿಕೆಟ್‍ಗೆ ಭಾರತದ ಅತಿ ಹೆಚ್ಚು ರನ್ ಗಳಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದರು. ಸಚಿನ್-ಸೌರವ್ ಗಂಗೂಲಿ ಜೋಡಿ 8,227 ಗಳಿಸಿದ್ದರು. ಸದ್ಯ ರೋಹಿತ್-ಧವನ್ ಜೋಡಿ 4,387 ರನ್ ಗಳಿಸಿದ್ದಾರೆ. ಅಲ್ಲದೇ ಇಷ್ಟೇ ರನ್ ಗಳಿಸಿದ್ದ ಸಚಿನ್-ಸೆಹ್ವಾಗ್ ಜೋಡಿಯನ್ನು ಹಿಂದಿಕ್ಕಿದ್ದಾರೆ. ವಿಶ್ವ ಕ್ರಿಕೆಟ್‍ನಲ್ಲಿ ರೋಹಿತ್-ಧವನ್ 7ನೇ ಜೊಡಿಯಾಗಿದೆ.
Advertisement
97 ಎಸೆತಗಳಲ್ಲಿ ಶತಕ ಪೂರೈಸಿದ ಧವನ್ ಏಕದಿನ ಕ್ರಿಕೆಟಿನಲ್ಲಿ 16ನೇ ಶತಕ ಪೂರ್ಣಗೊಳಿಸಿದರು. ಅಲ್ಲದೇ ಧವನ್ ಏಕದಿನ ಮಾದರಿಯಲ್ಲಿ ಸಿಡಿಸಿದ ಗರಿಷ್ಠ ಸ್ಕೋರ್ ಇದಾಗಿದೆ. ಈ ಹಿಂದೆ 137 ರನ್ ಧವನ್ ಅತ್ಯಧಿಕ ರನ್ ಆಗಿತ್ತು. 95 ರನ್ ಗಳಿಸಿದ್ದ ವೇಳೆ ಎಡವಿದ ರೋಹಿತ್ 40ನೇ ಅರ್ಧ ಶತಕ ಸಿಡಿಸಿ ನಿರ್ಗಮಿಸಿದರು.
Advertisement
ಕೊಹ್ಲಿ 7 ರನ್ ಗಳಿಸಿ ಔಟಾದರೆ, ಕೆಎಲ್ ರಾಹುಲ್ 31 ಎಸೆತಗಳಲ್ಲಿ 26 ರನ್ ಗಳಿಸಿದರು. ರಿಷಬ್ ಪಂತ್ 24 ಎಸೆತಗಳಲ್ಲಿ 36 ರನ್ ಗಳಿಸಿದರು. ವಿಜಯ್ ಶಂಕರ್ ಕೂಡ 11 ಎಸೆತಗಳಲ್ಲಿ 19 ರನ ಗಳಿಸಿದರು.
ಉಳಿದಂತೆ ಅಂತಿಮ 2 ಪಂದ್ಯಗಳಿಗೆ ವಿಶ್ರಾಂತಿ ಪಡೆದಿರುವ ಧೋನಿ ಅವರು ಆಡುವ 11ರಲ್ಲಿ ಬಳಗದಲ್ಲಿ ಇಲ್ಲದೇ 2005ರ ಬಳಿಕ ಮೊದಲ ಬಾರಿಗೆ ಟೀಂ ಇಂಡಿಯಾ, ಆಸ್ಟ್ರೇಲಿಯಾ ಪರ ಕಣಕ್ಕೆ ಇಳಿದಿತ್ತು.
ಮೊದಲ ವಿಕೆಟ್ 159 ರನ್ ಗಳಿಗೆ ಉರುಳಿದರೆ 165 ರನ್ ಗಳಿಗೆ ಟೀಂ ಇಂಡಿಯಾ 8 ವಿಕೆಟ್ ಕಳೆದುಕೊಂಡಿತ್ತು. ಆಸೀಸ್ ಪರ ಕಮ್ಮಿನ್ಸ್ 10 ಓವರ್ ಗಳಲ್ಲಿ 70 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ರಿಚಡ್ರ್ಸನ್ 3, ಜಂಪಾ 1 ವಿಕೆಟ್ ಪಡೆದರು.
ಭಾರತದ ರನ್ ಏರಿದ್ದು ಹೇಗೆ?
9.2 ಓವರ್ 50 ರನ್
17.2 ಓವರ್ 100 ರನ್
32 ಓವರ್ 200 ರನ್
43.5 ಓವರ್ 300 ರನ್
That moment when @Jaspritbumrah93 hits the last ball for a maximum ????????#INDvAUS pic.twitter.com/e6iOHorg8N
— BCCI (@BCCI) March 10, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv