ಮೆಲ್ಬರ್ನ್: ಕೊನೆಯ 30 ನಿಮಿಷದಲ್ಲಿ 11 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡು ಭಾರತ (Team India) ಈಗ ಸಂಕಷ್ಟಕ್ಕೆ ಸಿಲುಕಿದೆ.
ಮೂರನೇ ಟೆಸ್ಟ್ ಕ್ರಿಕೆಟಿನ (Test Cricket) ಎರಡನೇ ದಿನ ಆಸ್ಟ್ರೇಲಿಯಾವನ್ನು (Australia) 474 ರನ್‌ಗಳಿಗೆ ನಿಯಂತ್ರಿಸಿದ ಭಾರತ ಈಗ 5 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿದೆ.
Advertisement
Absolute cinema from Jaiswal 😱#AUSvIND pic.twitter.com/3O65h1zAUn
— cricket.com.au (@cricketcomau) December 27, 2024
Advertisement
ಆಸ್ಟ್ರೇಲಿಯಾವನ್ನು ಆಲೌಟ್ ಮಾಡಿ ತನ್ನ ಸರದಿ ಆರಂಭಿಸಿದ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. 8 ರನ್ ಗಳಿಸಿದ್ದಾಗ ರೋಹಿತ್ ಶರ್ಮಾ (Rohit Sharama) ಔಟಾದರೆ 51 ರನ್ ಗಳಿಸಿದ್ದಾಗ ರಾಹುಲ್ ಔಟಾದರು. ನಂತರ ಜೊತೆಯಾದ ಯಶಸ್ವಿ ಜೈಸ್ವಾಲ್ (Yashasvi Jaiswal) ಮತ್ತು ವಿರಾಟ್ ಕೊಹ್ಲಿ (Virat Kohli) ಮೂರನೇ ವಿಕೆಟಿಗೆ 102 ರನ್ ಜೊತೆಯಾಟವಾಡಿದರು. ತಂಡದ ಮೊತ್ತ 153 ಆಗಿದ್ದಾಗ ಜೈಸ್ವಾಲ್ ರನೌಟ್ ಆದರು. ಕೊಹ್ಲಿ ಮತ್ತು ಜೈಸ್ವಾಲ್ ಮಧ್ಯೆ ಸಂವಹನ ಕೊರತೆಯಿಂದ 82 ರನ್ ಗಳಿಸಿದ್ದ ಜೈಸ್ವಾಲ್ ವಿಕೆಟ್ ಒಪ್ಪಿಸಬೇಕಾಯಿತು. ಇದನ್ನೂ ಓದಿ: ಬೂಮ್ರಾ ಒಂದೇ ಓವರ್‌ನಲ್ಲಿ 18 ರನ್ ಚಚ್ಚಿದ 19ರ ಯುವಕ – ರೋಹಿತ್ ಪಡೆ ತಬ್ಬಿಬ್ಬು
Advertisement
A massive mix-up between Virat Kohli and Yashasvi Jaiswal sees Jaiswal run out for 82! #AUSvIND | #PlayOfTheDay | @nrmainsurance pic.twitter.com/a9G4uZwYIk
— cricket.com.au (@cricketcomau) December 27, 2024
Advertisement
ಜೈಸ್ವಾಲ್ ಔಟಾದ ಬೆನ್ನಲ್ಲೇ 36 ರನ್ ಗಳಿಸಿದ್ದ ಕೊಹ್ಲಿ ಕ್ಯಾಚ್ ನೀಡಿ ಹೊರನಡೆದರು. ನಂತರ ಬಂದ ಆಕಾಶ್ ದೀಪ್ ಶೂನ್ಯ ಸುತ್ತಿದರು. ಸದ್ಯ 6 ರನ್ ಹೊಡೆದಿರುವ ರಿಷಭ್ ಪಂತ್ ಮತ್ತು 4 ರನ್ ಹೊಡೆದಿರುವ ರವೀಂದ್ರ ಜಡೇಜಾ ಕ್ರೀಸ್‌ನಲ್ಲಿದ್ದಾರೆ. ಇದನ್ನೂ ಓದಿ: Ind vs Aus | ಯುವ ಆಟಗಾರನಿಗೆ ಡಿಕ್ಕಿ ಹೊಡೆದ ಕೊಹ್ಲಿಗೆ ದಂಡ
Jadeja sends Starc packing with the third ball after lunch. #AUSvIND pic.twitter.com/ZXVYJQCx1b
— cricket.com.au (@cricketcomau) December 27, 2024
ಮೊದಲ ದಿನ 6 ವಿಕೆಟ್ ನಷ್ಟಕ್ಕೆ 311 ರನ್‌ಗಳಿಸಿದ್ದ ಆಸ್ಟ್ರೇಲಿಯಾ ಇಂದು 163 ಸೇರಿಸಿ 474 ರನ್‌ಗಳಿಗೆ ಆಲೌಟ್ ಆಯ್ತು. ಸ್ಟೀವ್ ಸ್ಮಿತ್ 140 ರನ್‌ಗಳಿಸಿ ಔಟಾದರೆ ನಾಯಕ ಪ್ಯಾಟ್ ಕಮ್ಮಿನ್ಸ್ 49 ರನ್ ಹೊಡೆದು ಔಟಾದರು. ಇತರೇ ರೂಪದಲ್ಲಿ ಭಾರತ 27 ರನ್ (ಲೆಗ್ ಬೈ 11, ನೋಬಾಲ್ 6, ವೈಡ್ 10) ಕೊಟ್ಟಿದೆ.