ನಾಗ್ಪುರ: ರವೀಂದ್ರ ಜಡೇಜಾ, ಅಶ್ವಿನ್ ಬೌಲಿಂಗ್ ದಾಳಿಗೆ ಪಲ್ಟಿ ಹೊಡೆದ ಆಸ್ಟ್ರೇಲಿಯಾ (Australia) 177 ರನ್‌ಗಳಿಗೆ ಆಲೌಟ್ ಆಗಿದೆ.
ತನ್ನ ಸರದಿ ಆರಂಭಿಸಿದ ಭಾರತ (Team India) ದಿನದ ಅಂತ್ಯಕ್ಕೆ 24 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿದ್ದು 100 ರನ್ ಹಿನ್ನಡೆಯಲ್ಲಿದೆ.
Advertisement
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಆರಂಭದಲ್ಲೇ 2 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ಆದರೆ ಸ್ಮಿತ್ ಮತ್ತು ಲಾಬುಶೇನ್ ಮೂರನೇ ವಿಕೆಟಿಗೆ 82 ರನ್ ಜೊತೆಯಾಟವಾಡಿ ಸ್ವಲ್ಪ ಚೇತರಿಕೆ ನೀಡಿದರು. ಈ ಮಧ್ಯೆ ಸ್ಪಿತ್ ಔಟಾಗಿದ್ದೇ ತಡ ಆಸ್ಟ್ರೇಲಿಯಾದ ಪತನ ಆರಂಭವಾಯಿತು.
Advertisement
Advertisement
93 ರನ್ ಒಳಗಡೆ ಕೊನೆಯ 8 ವಿಕೆಟ್‌ಗಳು ಪತನಗೊಂಡ ಪರಿಣಾಮ ಆಸ್ಟ್ರೇಲಿಯಾ ಅಂತಿಮವಾಗಿ 63.5 ಓವರ್‌ಗಳಲ್ಲಿ 177 ರನ್‌ಗಳಿಗೆ ಆಲೌಟ್ ಆಯ್ತು. ಲಾಬುಶೇನ್ 49 ರನ್, ಸ್ಮಿತ್ 37 ರನ್, ಪೀಟರ್ ಹ್ಯಾಡ್ಸ್‌ಕೋಂಬ್ 31 ರನ್, ಅಲೆಕ್ಸ್ ಕ್ಯಾರಿ 36 ರನ್ ಹೊಡೆದು ಔಟ್ ಆದರು. ಇದನ್ನೂ ಓದಿ: ಹೊಲದಲ್ಲಿ ಟ್ರ್ಯಾಕ್ಟರ್ ಓಡಿಸಿದ ಧೋನಿ
Advertisement
ಮರಳಿ ತಂಡ ಸೇರಿದ ಜಡೇಜಾ (Ravindra Jadeja) 47 ರನ್ ನೀಡಿ 5 ವಿಕೆಟ್ ಕಿತ್ತರೆ, ಅಶ್ವಿನ್ (Ashwin) 42 ರನ್ ನೀಡಿ 3 ವಿಕೆಟ್ ಪಡೆದರು. ಶಮಿ, ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದರು.
ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ (Rohith Sharma) ಏಕದಿನ ಪಂದ್ಯದಂತೆ ಬ್ಯಾಟ್ ಬೀಸಿದ್ದಾರೆ. ರಾಹುಲ್ 20 ರನ್‌ಗಳಿಸಿ ಔಟಾಗಿದ್ದಾರೆ. ಮೊದಲ ದಿನದ ಅಂತ್ಯಕ್ಕೆ ಭಾರತ 24 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿದೆ. ರೋಹಿತ್ ಶರ್ಮಾ 56 ರನ್(69 ಎಸೆತ, 9 ಬೌಂಡರಿ, 1 ಸಿಕ್ಸರ್), ಅಶ್ವಿನ್ 0 ರನ್ ಗಳಿಸಿದ್ದು ಶುಕ್ರವಾರ ಬ್ಯಾಟಿಂಗ್ ಮುಂದುವರಿಸಲಿದ್ದಾರೆ.
ಅಶ್ವಿನ್ ಈ ಪಂದ್ಯದಲ್ಲಿ ಅಲೆಕ್ಸ್ ಕ್ಯಾರಿ ಅವರನ್ನು ಔಟ್ ಮಾಡುವ ಮೂಲಕ 450 ವಿಕೆಟ್ ಕಿತ್ತ ಸಾಧನೆ ಮಾಡಿದರು. ಸದ್ಯ ಅಶ್ವಿನ್ 89 ಪಂದ್ಯಗಳಿಂದ 452 ವಿಕೆಟ್ ಪಡೆದಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k