ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಬುಧವಾರ (ಜ.17) ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ 3ನೇ ಹಾಗೂ ಅಂತಿಮ ಟಿ20 ಪಂದ್ಯ ನಡೆಯಲಿದೆ. ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ BMTCಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ನಮ್ಮ ಮೆಟ್ರೋ (Namma Metro) ಸಹ ಪ್ರಯಾಣದ ಸಮಯವನ್ನು ವಿಸ್ತರಿಸಿದೆ.
Advertisement
ಈಗಾಗಲೇ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸರಣಿ ಕೈವಶ ಮಾಡಿಕೊಂಡಿರುವ ಭಾರತ 3ನೇ ಪಂದ್ಯದಲ್ಲೂ ಗೆದ್ದು ತವರಿನಲ್ಲೇ ಕ್ಲೀನ್‌ಸ್ವೀಪ್ ಮಾಡುವ ಉತ್ಸಾಹದಲ್ಲಿದೆ. ಅದಕ್ಕಾಗಿ ನೆಟ್ಸ್‌ನಲ್ಲಿ ಸಮರಾಭ್ಯಾಸ ನಡೆಸಿದೆ. ಈ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಕ್ರಿಕೆಟ್ ಪಂದ್ಯ ವೀಕ್ಷಣೆ ಮಾಡುವ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಕ್ರೀಡಾಭಿಮಾನಿಗಳ ಅನುಕೂಲಕ್ಕಾಗಿ ಬಿಎಂಟಿಸಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಿಂದ ನಗರದ ಬೇರೆ ಬೇರೆ ಭಾಗಗಳಿಗೆ ಸಂಚರಿಸಲಿವೆ. ಜೊತೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಮೆಟ್ರೋ ಸಮಯ ಸಹ ವಿಸ್ತರಣೆ ಮಾಡಲಾಗಿದೆ. ಇದನ್ನೂ ಓದಿ: ಟೀಂ ಇಂಡಿಯಾ vs ಅಫ್ಘಾನಿಸ್ತಾನ ಮೂರನೇ ಟಿ20 – ಧೋನಿ ದಾಖಲೆ ಮುರಿತಾರಾ ರೋಹಿತ್?
Advertisement
Advertisement
ಧೋನಿ ದಾಖಲೆ ಮುರಿತಾರಾ ರೋಹಿತ್?
2019ರಿಂದ ಭಾರತದಲ್ಲಿ ಆಡಿದ ಟಿ20 ಸರಣಿಯಲ್ಲಿ ಒಂದರಲ್ಲೂ ಭಾರತ ಸರಣಿಯನ್ನು ಸೋತಿಲ್ಲ. ಆಡಿದ 15 ಸರಣಿಗಳಲ್ಲಿ 13 ಸರಣಿ ವಶಪಡಿಸಿಕೊಂಡಿದೆ. ಉಳಿದ ಎರಡು ಸರಣಿ ಡ್ರಾದಲ್ಲಿ ಅಂತ್ಯಗೊಂಡಿದೆ. ಇನ್ನೂ ಮೂರನೇ ಟಿ20ಯಲ್ಲಿ ಭಾರತ ಗೆದ್ದರೆ, ಟೀಮ್ ಇಂಡಿಯಾ ಪರ ನಾಯಕನಾಗಿ 41 ಟಿ20 ಪಂದ್ಯಗಳನ್ನು ಗೆದ್ದ ಧೋನಿಯವರ ದಾಖಲೆಯನ್ನು ರೋಹಿತ್ ಮುರಿಯಲಿದ್ದಾರೆ. ಇದನ್ನೂ ಓದಿ: ಕೂಚ್ ಬೆಹಾರ್ ಟ್ರೋಫಿ ಫೈನಲ್‍ನಲ್ಲಿ ಯುವಿ ದಾಖಲೆ ಮುರಿದ ಕರ್ನಾಟಕದ ಓಪನರ್ ಪ್ರಖರ್ ಚತುರ್ವೇದಿ
Advertisement
ಹೆಚ್ಚುವರಿ ಬಿಎಂಟಿಸಿ ಬಸ್ ಕಾರ್ಯಚರಣೆ ವಿವರ:
* ಮಾರ್ಗ ಸಂಖ್ಯೆ – SBS- 1K, ಎಂ ಚಿನ್ನಸ್ವಾಮಿ ಕ್ರೀಡಾಂಗಣದಿಂದ- ಕಾಡುಗೋಡಿ ಬಸ್ ನಿಲ್ದಾಣ
* ಮಾರ್ಗ ಹೆಚ್.ಎ.ಎಲ್ ರಸ್ತೆ ಮೂಲಕ
* ಮಾರ್ಗ ಸಂಖ್ಯೆ- SBS- 13K – ಚಿನ್ನಸ್ವಾಮಿಯಿಂದ- ಕಾಡುಗೋಡಿ ಬಸ್ ನಿಲ್ದಾಣ
* ಮಾರ್ಗ ಹೂಡಿ ರಸ್ತೆ
* ಬಸ್ ಸಂಖ್ಯೆ- G-2- ಚಿನ್ನಸ್ವಾಮಿಯಿಂದ- ಸಜ್ಜಾಪುರ
* ಮಾರ್ಗ – ಅಗರ, ಬೊಮ್ಮಸಂದ್ರ
* ಬಸ್ ಸಂಖ್ಯೆ G-3
ಚಿನ್ನಸ್ವಾಮಿ- ಎಲೆಕ್ಟ್ರಾನಿಕ್ ಸಿಟಿ
ಮಾರ್ಗ- ಹೊಸುರು ರಸ್ತೆ
* ಬಸ್ ಸಂಖ್ಯೆ G-3
* ಚಿನ್ನಸ್ವಾಮಿ- ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್
ಮಾರ್ಗ- ಜಯದೇವ ಆಸ್ಪತ್ರೆ
* ಬಸ್ ಸಂಖ್ಯೆ G-6
* ಚಿನ್ನಸ್ವಾಮಿ- ಕೆಂಗೇರಿ.ಕೆ.ಹೆಚ್.ಬಿ Quarter
* ಮಾರ್ಗ- ನಾಯಂಡನಹಳ್ಳಿ
* ಬಸ್ ಸಂಖ್ಯೆ G-7
* ಚಿನ್ನಸ್ವಾಮಿ- ಜನಪ್ರಿಯ ಟೌನ್ಷಿಪ್
* ಮಾರ್ಗ- ಮಾಗಡಿ ರಸ್ತೆ
* ಬಸ್ ಸಂಖ್ಯೆ G-8
ಚಿನ್ನಸ್ವಾಮಿ- ನೆಲಮಂಗಲ
ಮಾರ್ಗ- ಯಶವಂತಪುರ
* ಬಸ್ ಸಂಖ್ಯೆ G-9
ಚಿನ್ನಸ್ವಾಮಿ- ಯಲಹಂಕ 5 ನೇ ಹಂತ
ಮಾರ್ಗ- ಹೆಬ್ಬಾಳ
* ಬಸ್ ಸಂಖ್ಯೆ G-10
ಚಿನ್ನಸ್ವಾಮಿ- ಆರ್.ಕೆ.ಹೆಗಡೆ ನಗರ- ಯಲಹಂಕ
ಮಾರ್ಗ- ನಾಗವಾರ ಟ್ಯಾನರಿ ರಸ್ತೆ
* ಬಸ್ ಸಂಖ್ಯೆ G-11
ಚಿನ್ನಸ್ವಾಮಿ- ಬಾಗಲೂರು
ಮಾರ್ಗ- ಹೆಣ್ಣೂರು ರಸ್ತೆ
* ಬಸ್ ಸಂಖ್ಯೆ – kbs- 12 hk
ಚಿನ್ನಸ್ವಾಮಿ- ಹೊಸಕೋಟೆ
ಮಾರ್ಗ- ಟಿನ್ ಫ್ಯಾಕ್ಟರಿ