ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ 151 ರನ್‍ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.
Advertisement
ಭಾರತ ತಂಡ ನೀಡಿದ 272 ರನ್‍ಗಳ ಗುರಿ ಪಡೆದ ಇಂಗ್ಲೆಂಡ್ ತಂಡಕ್ಕೆ ಮೊಹಮ್ಮದ್ ಸಿರಾಜ್ ಮಾರಕವಾಗಿ ಎರಗಿದರು. 10 ಓವರ್ ಎಸೆದ ಸಿರಾಜ್ ಕೇವಲ 34 ರನ್ ನೀಡಿ ಪ್ರಮುಖ 4 ವಿಕೆಟ್ ಕಿತ್ತು ಭಾರತಕ್ಕೆ ಗೆಲುವು ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇಂಗ್ಲೆಂಡ್ ತಂಡ 272 ರನ್‍ಗಳ ಗುರಿಯನ್ನು ತಲುಪುವಲ್ಲಿ ಎಡವಿ ಕೇವಲ 120 ರನ್ ಗಳಿಗೆ ಆಲ್‍ಔಟ್ ಆಯಿತು. ಇದನ್ನೂ ಓದಿ: ಸಿರಾಜ್ ವಿಕೆಟ್ ಪಡೆದ ಬಳಿಕ ವಿಶೇಷ ಸಂಭ್ರಮಾಚರಣೆಯ ಕಹಾನಿ ರಿವೀಲ್
Advertisement
Advertisement
ಬುಮ್ರಾ, ಶಮಿ ಕಮಾಲ್
ಈ ಮೊದಲು ಆರು ವಿಕೆಟ್ ನಷ್ಟಕ್ಕೆ 181 ರನ್ ಗಳಿಂದ ಎರಡನೇ ಇನ್ನಿಂಗ್ಸ್ ಮುಂದುವರಿಸಿದ ಭಾರತ 8 ವಿಕೆಟ್ ಗೆ 298 ರನ್ ಕಲೆ ಹಾಕಿ ಡಿಕ್ಲೇರ್ ಮಾಡಿಕೊಂಡಿತು. 209 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಭರ್ಜರಿ ಜೊತೆಯಾಟದ ಮೂಲಕ ಇಂಗ್ಲೆಂಡ್‍ಗೆ ತೀರುಗೇಟು ನೀಡಿದರು.
Advertisement
WHAT. A. WIN! ???? ????
Brilliant from #TeamIndia as they beat England by 1⃣5⃣1⃣ runs at Lord's in the second #ENGvIND Test & take 1-0 lead in the series. ???? ????
Scorecard ???? https://t.co/KGM2YELLde pic.twitter.com/rTKZs3MC9f
— BCCI (@BCCI) August 16, 2021
ಶಮಿ ಅಜೇಯ 56ರನ್(70 ಎಸೆತ, 6 ಬೌಂಡರಿ, 1 ಸಿಕ್ಸ್) ಬಾರಿಸಿ ಅಜೇಯರಾಗಿ ಉಳಿದರು. ಇವರಿಗೆ ಉತ್ತಮ ಸಾಥ್ ನೀಡಿದ ಜಸ್ಪ್ರಿತ್ ಬುಮ್ರಾ ಅಜೇಯ 34 ರನ್ ಬಾರಿ ಇಂಗ್ಲೆಂಡ್ ತಂಡದ ಬೌಲರ್ ಗಳನ್ನು ಕಾಡಿತು.