ಕೈರೋ: ಸಮುದ್ರದಲ್ಲಿ ಮಗುವಿಗೆ ಜನ್ಮ ನೀಡುವ ಸಲುವಾಗಿ ರಷ್ಯಾ ಮಹಿಳೆ ರೆಸಾರ್ಟ್ ಗೆ ಪ್ರಯಾಣಿಸಿ ನಂತರ ಈಜಿಪ್ಟಿನ ಸಮುದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಅಪರೂಪದ ಸಂಗತಿವೊಂದು ನಡೆದಿದೆ.
ಹದಿಯಾ ಹೋಸ್ನಿ ಸಮುದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ. ಉತ್ತರ ಶಹರ್ ಎಲ್-ಶೇಖ್ ನ ಡಹಾಬ್ ನಲ್ಲಿರುವ ತನ್ನ ಚಿಕ್ಕಪ್ಪನ ಅಪಾರ್ಟ್ ಮೆಂಟ್‍ನ ಬಾಲ್ಕನಿಯಿಂದ ಡೆಲಿವರಿ ಸಮಯದಲ್ಲಿನ ಫೋಟೋಗಳನ್ನು ತೆಗೆಯಲಾಗಿದೆ.
Advertisement
Advertisement
ಮಗುವಿಗೆ ಸಮುದ್ರದಲ್ಲಿ ಜನ್ಮ ನೀಡಬೇಕು ಎಂದು ಮೊದಲೇ ತಯಾರಿ ಮಾಡಿಕೊಂಡಿದ್ದೇವು, ಫೋಟೋಗಳಲ್ಲಿ ವೃದ್ಧರೊಬ್ಬರು ಮಗುವನ್ನು ಹಿಡಿದುಕೊಂಡಿರುವುದನ್ನು ನೀವು ನೋಡಬಹುದು. ಈ ವ್ಯಕ್ತಿ ನೀರಿನಲ್ಲಿ ಡೆಲಿವರಿ ಮಾಡಿಸುವುದರಲ್ಲಿ ಸ್ಪೆಷಲಿಸ್ಟ್ ಎಂದು ಹದಿಯಾ ಹೇಳಿದ್ದಾರೆ.
Advertisement
ಮಗುವಿಗೆ ಜನ್ಮ ನೀಡಿ ಕೆಲವೇ ನಿಮಿಷಗಳಲ್ಲಿ ಹದಿಯಾ ಕೂಡ ಸಮುದ್ರದಿಂದ ಹೊರಬಂದಿದ್ದಾರೆ. ಅವರು ಸಮುದ್ರದಿಂದ ಹೊರಬಂದಿದ್ದನ್ನು ನೋಡಿದ್ದರೆ, ಈಜಲು ಹೋಗಿ ಹಿಂತಿರುಗಿ ಬಂದ ಮಹಿಳೆಯಂತೆ ಆರಾಮಾಗಿ ಸಮುದ್ರದಿಂದ ಹೊರಬಂದಿರುವುದನ್ನು ಕಾಣಬಹುದು.
Advertisement
ಹದಿಯಾ ಮಗುವಿಗೆ ಜನ್ಮ ನೀಡಲು ಮೊದಲು ಸಮುದ್ರಕ್ಕೆ ಈಜಲು ಹೋದರು. ಅವರ ಹಿಂದೆಯೇ ಆಕೆಯ ಪತಿ ಹಾಗೂ ನೀರಿನಲ್ಲಿ ಡೆಲಿವರಿ ಮಾಡುವ ವೈದ್ಯರು ಹಿಂದೆ ಹೋಗಿ ಡೆಲಿವರಿ ಮಾಡಿಸಿದ್ದರು ಎಂದು ವರದಿಯಾಗಿದೆ.
ಮಗು ಜನಿಸಿದ ಮೇಲೆ ಶಿಶುವನ್ನು ಬೌಲ್‍ನಲ್ಲಿಟ್ಟರು. ನಂತರ ವೈದ್ಯರು ಹಾಗೂ ಪತಿ ಶಿಶುವನ್ನು ದಡಕ್ಕೆ ಕರೆದುಕೊಂಡು ಬಂದಿದ್ದಾರೆ. ಸ್ವಲ್ಪ ಸಮಯದ ನಂತರ ಹದಿಯಾ ಕೂಡ ತಮ್ಮ ಕುಟುಂಬದ ಜೊತೆ ಸೇರಿಕೊಂಡರು ಎಂದು ಪತ್ರಿಕೆವೊಂದು ವರದಿ ಮಾಡಿದೆ.
ಹದಿಯಾ ಈ ಫೋಟೋಗಳನ್ನು ಶನಿವಾರ ತಮ್ಮ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆ ಸಾಕಷ್ಟು ವೈರಲ್ ಆಗಿದೆ. 2,000ಕ್ಕೂ ಹೆಚ್ಚು ಶೇರ್ ಆಗಿ, ಕಮೆಂಟ್ಸ್ ಗಳು ಬಂದಿವೆ. ಡೆಲಿವರಿ ಆದ ಬಳಿಕ ತಾಯಿ ಮಗು ಕ್ಷೇಮವಾಗಿದ್ದಾರೆ ಎಂದು ವರದಿಯಾಗಿದೆ.