ಬಳ್ಳಾರಿ: ದೇವರಿಗೂ ಬಿಸಿಲಿನ ತಾಪ ತಟ್ಟುತ್ತಾ ಅಂದ್ರೆ ನಂಬ್ತೀರಾ? ನಂಬಲೇಬೇಕು. ಯಾಕಂದ್ರೆ ಬಿಸಿಲಿನ ಧಗೆಯಿಂದ ರಕ್ಷಿಸಲು ಹಂಪಿ ವಿರುಪಾಕ್ಷೇಶ್ವರ ದೇವರಿಗೆ ಇದೀಗ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಬೇಸಿಗೆ ಕಾಲದಲ್ಲಿ ಬೆಳ್ಳಿ ಕವಚ ಹೊರತಗೆದು ಶೀತ ಕುಂಭದ ವ್ಯವಸ್ಥೆ ಮಾಡುವ ಮೂಲಕ ತಂಪಾದ ವಾತಾವರಣ ಕಲ್ಪಿಸಲಾಗಿದೆ.
Advertisement
ಬೇಸಿಗೆಯ ವೈಶಾಖ ಶುದ್ಧ ಪಂಚಮಿಯಿಂದ-ಜೇಷ್ಠ ಶುದ್ಧ ಪಂಚಮಿವರೆಗೆ ವಿರೂಪಾಕ್ಷೇಶ್ವರ ಶಿರದ ಮೇಲೆ ಶೀತ ಕುಂಭದ ವ್ಯವಸ್ಥೆ ಮಾಡುವ ಮೂಲಕ ದೇವರಿಗೆ 24 ಗಂಟೆಗಳ ಕಾಲ ತಂಪಾದ ನೀರು ನೆತ್ತಿಯ ಮೇಲೆ ಬಿಳುವಂತೆ ವ್ಯವಸ್ಥೆ ಕಲ್ಪಿಸುತ್ತಿರುವುದು ವಿಶೇಷವಾಗಿದೆ.
Advertisement
Advertisement
ಜಿಲ್ಲೆಯಲ್ಲಿ ಅತಿ ಹೆಚ್ಚು ಬಿಸಿಲಿನ ತಾಪಮಾನವಿರುತ್ತೆ. ಹೀಗಾಗಿ ಅತಿ ಉಷ್ಣಾಂಶದಿಂದ ಹಂಪಿ ವಿರೂಪಾಕ್ಷೇಶ್ವರ ಮೂರನೇ ಕಣ್ಣು ತೆರದು ಭಸ್ಮ ಮಾಡಬಾರದೆಂದು ಶಿವನಿಗೆ ತಂಪಾದ ನೀರಿನ ವ್ಯವಸ್ಥೆ ಮಾಡಲಾಗುತ್ತೆ. ಅಲ್ಲದೇ ದೇವರಿಗೆ ಪ್ರತಿ ನಿತ್ಯ ಹಾಕುವ ಬೆಳ್ಳಿ ಮುಖವಾಡದ ಕವಚವನ್ನು ಸಹ ಬೇಸಿಗೆಯಲ್ಲಿ ವಿರೂಪಾಕೇಶ್ವರನಿಗೆ ಧರಿಸುವುದಿಲ್ಲ. ಹೀಗಾಗಿ ಶಿವನಿಗೆ ಉಷ್ಣವಾಗದಂತೆ ಅನಾದಿ ಕಾಲದಿಂದಲೂ ದೇವರಿಗೆ ಕುಂಭದ ನೀರಿನ ಧಾರೆ ನಿರಂತರವಾಗಿ ಇರುವಂತೆ ಮಾಡಲಾಗುತ್ತದೆ ಎಂದು ಮುಖ್ಯ ಅರ್ಚಕ ಶ್ರೀನಾಥ್ ಶರ್ಮಾ ಹೇಳುತ್ತಾರೆ.