ನಕಲಿ ಬಾಂಬ್ ಸಿಕ್ಕ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿದ ಭದ್ರತಾ ತಪಾಸಣೆ

Public TV
2 Min Read
KWR BOMB

ಕಾರವಾರ: ಕುಮಟಾದ ರೈಲ್ವೇ ನಿಲ್ದಾಣದ ಸಮೀಪವೇ ನಕಲಿ ಬಾಂಬ್ ಪತ್ತೆಯಾದ ಬೆನ್ನಲ್ಲಿ ಇದೀಗ ಪೊಲೀಸ್ ಇಲಾಖೆ ಜನ ನಿಬಿಡ ಪ್ರದೇಶಗಳಲ್ಲಿ ಬಾಂಬ್ ಸ್ಕ್ವಾಡ್ ನಿಂದ ಪರಿಶೀಲನೆ ನಡೆಸುತ್ತಿದೆ. ಹಲವು ಭಾಗದಲ್ಲಿ ರಸ್ತೆಯಲ್ಲಿ ನಿಂತು ವಾಹನಗಳನ್ನು ಸಹ ತಪಾಸಣೆ ಮಾಡಲಾಗುತ್ತಿದೆ.

KWR BOMB 2

ಕಳೆದ ಎರಡು ದಿನದಿಂದ ಕೈಗಾ, ಕದ್ರಾ, ಕಾರವಾರದ ಕದಂಬ ನೌಕಾನೆಲೆ, ಕುಮಟಾದ ರೈಲ್ವೇ, ಬಸ್ ನಿಲ್ದಾಣ, ಮಹಾಬಲೇಶ್ವರ ದೇವಸ್ಥಾನ ಸೇರಿದಂತೆ ಭಟ್ಕಳದ ಹಲವು ಭಾಗದಲ್ಲಿ ತಪಾಸಣೆ ನಡೆಸಿದೆ. ಇದನ್ನೂ ಓದಿ: ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಿ ಭಾರತಕ್ಕೆ ಆಹ್ವಾನಿಸಿದ ಪ್ರಧಾನಿ ಮೋದಿ

KWR BOMB 1

ಶಿರಸಿಯಲ್ಲಿ ಬಾಂಬ್ ಸ್ಕ್ವಾಡ್ ನಿಂದ ತಪಾಸಣೆ

ಕರಾವಳಿ ಭಾಗದಲ್ಲಿ ಸೂಕ್ಷ್ಮ ಪ್ರದೇಶಗಳಿವೆ. ಶಿರಸಿ ಭಾಗದಲ್ಲೂ ಬಾಂಬ್ ಪತ್ತೆ ದಳ, ಶ್ವಾನದಳಗಳು ಇಂದು ಹಲವು ಪ್ರದೇಶಗಳಲ್ಲಿ ತಪಾಸಣೆ ನಡೆಸಿತು. ಶಿರಸಿಯ ಎಂ.ಎಂ ಆರ್ಟ್ಸ್, ಸೈನ್ಸ್ ಕಾಲೇಜು ಸೇರಿದಂತೆ ಪ್ರಮುಖ ಕಾಲೇಜಿನಲ್ಲಿ ತಪಾಸಣೆ ನಡೆಸಲಾಗಿದೆ. ಬಸ್ ನಿಲ್ದಾಣ ಹಾಗೂ ಜನ ನಿಬಿಡ ಪ್ರದೇಶದಲ್ಲೂ ಸಹ ತಪಾಸಣೆ ನಡೆಸಲಾಗಿದೆ. ಇದನ್ನೂ ಓದಿ: ತಂದೆ ಅಂತಿಮ ದರ್ಶನ ಪಡೆದ ಪುತ್ರಿ ಧೃತಿ

KWR BOMB 3

ತಪಾಸಣೆ ನಡೆಸಲು ಕಾರಣ ಏನು?

ಜಿಲ್ಲೆಯಲ್ಲಿ ಭಟ್ಕಳ ಉಗ್ರಗಾವಾದಿಗಳ ಹೆಸರು ತಗಲಿಕೊಂಡಿದೆ. ಜೊತೆಗೆ ಕೆಲವು ಸಂಘಟನೆಗಳು ದೇಶದ್ರೋಹ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ಈ ಸಂಬಂಧ ಈಗಾಗಲೇ ಕೆಲವು ಜನರನ್ನು ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಶಿರಸಿಯಲ್ಲೂ ಸಹ ಕೆಲವು ವ್ಯಕ್ತಿಗಳ ಹೆಸರಿನ ಸಿಮ್ ಗಳು ಉಗ್ರವಾದಿಗಳು ಬಳಸಿದ ಹಿನ್ನೆಲೆಯಲ್ಲಿ ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ. ಹೀಗಾಗಿ ಕುಮಟಾದಲ್ಲಿ ಸಿಕ್ಕ ನಕಲಿ ಬಾಂಬ್ ಹಲವು ಸಂಶಯಗಳನ್ನು ತಂದೊಡ್ಡಿದೆ. ಇದನ್ನೂ ಓದಿ: ದೀಪಾವಳಿಯಲ್ಲಿ ಹಸಿರು ಪಟಾಕಿ ಸಿಡಿಸಲು ಅವಕಾಶ- ಮಾರ್ಗಸೂಚಿ ಬಿಡುಗಡೆ

ಸದ್ಯ ಕುಮಟಾದಲ್ಲಿ ಸಿಕ್ಕ ಈ ಬಾಂಬ್ ನಕಲಿ ಎಂದಾಗಿದ್ದರೂ ಇದನ್ನು ಏಕೆ ತಯಾರಿಸಿದರು? ಇದರ ಉದ್ದೇಶ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ವಿಜ್ಞಾನ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಪೊಲೀಸರಿಗೆ ಸಂಶಯ ಮೂಡಿದೆ. ಇದರ ಜೊತೆಗೆ ಬೇರೆ ಯಾರಾದರೂ ಕುಚೇಷ್ಟೆಗೆ ಮಾಡಿರಬಹುದಾ ಎಂಬ ಅನುಮಾನ ಸಹ ಇದೆ. ಹೀಗಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಇದೀಗ ಪೊಲೀಸರು ಹೆಚ್ಚಿನ ತಪಾಸಣೆಯನ್ನು ಜಿಲ್ಲೆಯಾದ್ಯಂತ ಕೈಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *