ಶಾರುಖ್ ಖಾನ್ ಮನೆಗೆ ಹೆಚ್ಚಿನ ಭದ್ರತೆ: ಮನೆ ಮುಂದೆ ಪ್ರತಿಭಟನೆ

Public TV
1 Min Read
Shah Rukh Khan 1

ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ (Shah Rukh Khan) ಮನೆಗೆ ಭಾರೀ ಭದ್ರತೆ ನೀಡಲಾಗಿದೆ. ಮುಂಬೈನಲ್ಲಿರುವ (Mumbai) ಮನ್ನತ್ ನಿವಾಸಕ್ಕೆ ಮುಂಬೈ ಪೊಲೀಸರು ಹೆಚ್ಚಿನ ಭದ್ರತೆ ನೀಡಲಾಗಿದ್ದು, ಮನೆ ಮುಂದೆ ಜನರು ಜಮಾಯಿಸಬಾರದು ಎಂದು ಸೂಚನೆ ನೀಡಲಾಗಿದೆ. ಮನೆ ಮುಂದೆ ಭಾರೀ ಪ್ರತಿಭಟನೆ (Protest) ವ್ಯಕ್ತವಾಗಿದ್ದರೆ, ಶಾರುಖ್ ತಮ್ಮ ಸಿನಿಮಾದ ಪ್ರಮೋಷನ್ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ.

shahrukh khan 2

ಶಾರುಖ್ ಖಾನ್ ಮನೆಗೆ ಭದ್ರತೆ ನೀಡಿದ್ದಕ್ಕೆ ಕಾರಣವೂ ಇದೆ. ಶಾರುಖ್ ಖಾನ್ ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಆನ್ ಲೈನ್ ಆಟಗಳ ಜಾಹೀರಾತುಗಳನ್ನು ಒಪ್ಪಿಕೊಂಡಿದ್ದಾರೆ. ಆ ಆಟಗಳನ್ನು ಆಡಿದ ಹಲವರ ಜೀವನವೇ ನಾಶವಾಗಿದೆ. ಇಂತಹ ಜಾಹೀರಾತುಗಳನ್ನು ಒಪ್ಪಿಕೊಳ್ಳಬಾರದು ಎನ್ನುವುದು ಅನ್ ಟಚ್ ಯೂತ್ ಫೆಡರೇಷನ್ ಆಗ್ರಹ. ಇವರೇ ಶಾರುಖ್ ಖಾನ್ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ಟ್ರೆಂಡಿಂಗ್ ಬಗ್ಗೆಯೇ ಹಾಡು ಮಾಡಿದ ‘ಸೂತ್ರಧಾರಿ’ ಚಂದನ್ ಶೆಟ್ಟಿ

shahrukh khan 2

ಅನ್ ಟಚ್ ಯೂತ್ ಫೆಡರೇಷನ್ ನ ಅಧ್ಯಕ್ಷ ಕೃಷ್ಣ ಚಂದ್ರ ಅಡಾಲ್ (Krishna Chandra Adal) ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಸಾಕಷ್ಟು ಜನರು ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿಯೇ ಶಾರುಖ್ ಮನೆಗೆ ಭದ್ರತೆ ನೀಡಲಾಗಿದೆ. ಹೋರಾಟಗಾರರ ಮನವೊಲಿಸುವ ಪ್ರಯತ್ನವನ್ನೂ ಮಾಡಲಾಗುತ್ತಿದೆ.

 

ಶಾರುಖ್ ನಟಿಸಿ, ನಿರ್ಮಾಣ ಮಾಡುತ್ತಿರುವ ಜವಾನ ಸಿನಿಮಾದ ಪ್ರಮೋಷನ್ ಭರ್ಜರಿಯಾಗಿ ನಡೆಯುತ್ತಿದೆ. ಶಾರುಖ್ ಮತ್ತು ಟೀಮ್ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಅತ್ತ ಶಾರುಖ್ ನಾನಾ ರಾಜ್ಯಗಳಿಗೆ ಭೇಟಿ ನೀಡಿ ಸಿನಿಮಾ ಪ್ರಚಾರ ಮಾಡುತ್ತಿದ್ದರೆ, ಇತ್ತ ಮನೆಯ ಮುಂದೆ ಪ್ರತಿಭಟನೆ ನಡೆಯುತ್ತಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article