ಬೆಂಗಳೂರು: ಕರ್ನಾಟಕ (Karnataka) ಮಾತ್ರವಲ್ಲ ದೇಶದ ಬಹುತೇಕ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮುಚ್ಚುವ ಸ್ಥಿತಿಗೆ ಬಂದು ನಿಂತಿವೆ. ನಷ್ಟದ ಮೇಲೆ ನಷ್ಟವಾಗುತ್ತ ಸಾಗುತ್ತಿದೆ. ಏರ್ ಇಂಡಿಯಾದಿಂದ (Air India) ಹಿಡಿದು ಬಿಎಂಟಿಸಿವರೆಗೂ (BMTC) ಇದೇ ಕತೆ. ಆದ್ರೆ ನಮ್ಮ ಮೆಟ್ರೋ (Namma Metro) ಮಾತ್ರ ಲಾಭದ ಹಳಿ ಏರಿದೆ.
Advertisement
ಬಿಎಂಟಿಸಿ (BMTC) ಬಹುತೇಕ ಬಾಗಿಲು ಮುಚ್ಚುವ ಸ್ಥಿತಿಗೆ ತಲುಪುತ್ತಿದೆ. ಕೆಎಸ್‍ಆರ್‌ಟಿಸಿ (KSRTC) ಆರ್ಥಿಕ ಸ್ಥಿತಿಯೂ ಹೆಚ್ಚೇನು ಸದೃಢವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮೆಟ್ರೋ ಮಾತ್ರ ಲಾಭದ ಟ್ರ್ಯಾಕ್‍ನಲ್ಲಿ ಓಡ್ತಿದೆ. ಬಿಎಂಆರ್‌ಸಿಎಲ್ (BMRCL) ಕೋವಿಡ್ (Covid-19) ಬಳಿಕ ಕಂಪ್ಲೀಟ್ ಲಾಭಕ್ಕೆ ತಿರುಗಿದ್ದು, ನಿತ್ಯ 1 ಕೋಟಿ 20 ಲಕ್ಷ ರೂ.ಗೂ ಹೆಚ್ಚಿನ ಗಳಿಕೆ ಮಾಡುತ್ತಿದೆ. ಇದರಲ್ಲಿ 1 ಕೋಟಿಯಷ್ಟು ನಿರ್ವಹಣಾ ವೆಚ್ಚ ಆಗ್ತಿದ್ರೆ ಉಳಿದ 20 ಲಕ್ಷ ರೂ. ಉಳಿತಾಯ ಖಾತೆ ಸೇರುತ್ತಿದೆ. ಇದನ್ನೂ ಓದಿ: ಚಂದ್ರಶೇಖರ್ ಗುರೂಜಿ ಹತ್ಯೆಗೆ ಟ್ವಿಸ್ಟ್ – ವಾಟ್ಸಾಪ್ ಚಾಟ್ ತೆರೆದಿಡ್ತು ಕೊಲೆ ರಹಸ್ಯ
Advertisement
Advertisement
ನಮ್ಮ ಮೆಟ್ರೋಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿದೆ. ಆದರೂ ಕಳೆದ ಕೆಲ ವರ್ಷಗಳಿಂದ ನಷ್ಟದ ಮೇಲೆ ನಷ್ಟ ಅನುಭವಿಸುತ್ತಿತ್ತು. ಅದ್ರಲ್ಲೂ ಕೋವಿಡ್ ಸಮಯದಲ್ಲಿ ಮೆಟ್ರೋ ಸಂಕಷ್ಟದ ಸುಳಿಗೆ ಸಿಲುಕಿತ್ತು. ನಾಲ್ಕೂವರೆ ಲಕ್ಷ ಇದ್ದ ಮೆಟ್ರೋ ಪ್ರಯಾಣಿಕರ ಸಂಖ್ಯೆ 1 ಲಕ್ಷಕ್ಕೂ ಕಡಿಮೆಗೆ ಇಳಿದಿತ್ತು. ಇನ್ನೇನು ಮೆಟ್ರೋ ಸಹ ನಷ್ಟದ ಸುಳಿಗೆ ಸಿಲುಕಿ ಹೋಗುತ್ತೆ ಅನ್ನೋವಾಗ್ಲೇ ಮತ್ತೆ ಮೇಲೆದ್ದು ನಿಂತಿದೆ. ಸದ್ಯ ಐಟಿ ಬಿಟಿ ಕಂಪ್ಲೀಟಾಗಿ ವರ್ಕ್ ಫ್ರಂ ಹೋಂ ಎಂಡ್ ಮಾಡಿಲ್ಲ. ಒಂದು ವೇಳೆ ಐಟಿ ಕ್ಷೇತ್ರ ಪೂರ್ತಿ ಆರಂಭವಾಗಿದ್ದೇ ಆದ್ರೆ ಮೆಟ್ರೋ ಇನ್ನಷ್ಟು ಲಾಭ ಗಳಿಸಲಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಕೆಲ್ಸ- ಸಿಎಂಗೆ ಧನ್ಯವಾದ ಹೇಳಿದ ಪ್ರವೀಣ್ ನೆಟ್ಟಾರು ಪತ್ನಿ
Advertisement
ಲಾಭದ ಹಳಿ:
ನಮ್ಮ ಮೆಟ್ರೋಗೆ ಪ್ರತಿ ದಿನ 1 ಕೋಟಿ 20 ಲಕ್ಷ ರೂ.ಗೂ ಹೆಚ್ಚು ಆದಾಯ ಬರುತ್ತಿದ್ದು, ಈ ಪೈಕಿ 1 ಕೋಟಿ ರೂ. ಪ್ರತಿ ದಿನ ಖರ್ಚಾಗುತ್ತಿದೆ. ಉಳಿದ 20 ಲಕ್ಷ ರೂ. ಅಧಿಕ ಮೊತ್ತ ನಮ್ಮ ಮೆಟ್ರೋಗೆ ಲಾಭವಾಗುತ್ತಿದೆ. ತಿಂಗಳಿಗೆ 36 ಕೋಟಿ ರೂ. ಆದಾಯ ಬರುತ್ತಿದ್ದು, 6 ಕೋಟಿ ಲಾಭವಾಗುತ್ತಿದೆ. ಪ್ರತಿ ನಿತ್ಯ ಸರಾಸರಿ 5 ಲಕ್ಷ ಜನರಿಂದ ಮೆಟ್ರೋ ಬಳಕೆಯಾಗುತ್ತಿದೆ.