ಬೆಂಗಳೂರು: ಅಕ್ಕಿ ಬೇಯಿಸಂಗಿಲ್ಲ, ಬೇಳೆ ಮಾತ್ರ ಚೆನ್ನಾಗಿ ಬೇಯಿಸಬಹುದು. ಅಂದರೆ ಯುಗಾದಿ ಹಬ್ಬಕ್ಕೆ ಜನರಿಗೆ ಬೇವು- ಬೆಲ್ಲದ ಹಾಗೆ ಕಹಿ ಸುದ್ದಿಯ ಜೊತೆ ಜೊತೆಗೆ ಸಿಹಿ ಸುದ್ದಿ ಕೂಡ ಸಿಕ್ಕಿದೆ.
ಅಕ್ಕಿ ದರ ಕೆ.ಜಿಗೆ ಬರೋಬ್ಬರಿ 5 ರೂ. ಏರಿಕೆ ಕಂಡಿದೆ. ರಾಜ್ಯದ ಅಕ್ಕಿಗೆ ಹೊರ ರಾಜ್ಯದಲ್ಲಿ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ಅಕ್ಕಿಯ ದರ ಏಕಾಏಕಿ ಏರಿಕೆ ಕಂಡಿದೆ. ಆದರೆ ಗಗನಕ್ಕೇರಿದ್ದ ಬೇಳೆ ದರ ಕೆಜಿಗೆ ಬರೋಬ್ಬರಿ 30 ರೂ .ನಷ್ಟು ಇಳಿಕೆ ಕಂಡಿದೆ. ಸದ್ಯಕ್ಕೆ ಅಕ್ಕಿ ದರ ಇಳಿಕೆಯಾಗುವ ಯಾವ ಸಾಧ್ಯತೆಯೂ ಇಲ್ಲ ಎನ್ನಲಾಗಿದೆ.
ಅಕ್ಕಿ ಹಿಂದಿನ ದರ ( ರೂ.) ಇಂದಿನ ದರ (ರೂ.)
ಸೋನಾ ರಾ ರೈಸ್ 54 58
ಸೋನಾ ಸ್ಟೀಮ್ 32 36
ಸೋನಾ ಕೋಲಂ 56 62
ಸ್ಟೀಮ್ ಕೋಲಂ 42 46
ಇಡ್ಲಿ ರೈಸ್ 28 32
ಕುಚ್ಚಲಕ್ಕಿ 35 38
ಬೇಳೆ ಹಿಂದಿನ ದರ (ರೂ.) ಇಂದಿನ ದರ (ರೂ.)
ತೊಗರಿ ಬೇಳೆ 100 70
ಕಡ್ಲೆಬೇಳೆ 90 60
ಉದ್ದಿನಬೇಳೆ 100 70
ಹೆಸರು ಕಾಳು 90 7 0