– ನಂದಿನಿ ಹಾಲು & ಉತ್ಪನ್ನಕ್ಕೂ ಡಿಮ್ಯಾಂಡ್
ಹಾಸನ: ತಿರುಪತಿ ಲಡ್ಡು ವಿವಾದದ (Tirupati Laddu Row) ಬಳಿಕ ನಂದಿನಿ ತುಪ್ಪಕ್ಕೆ (Nandini Ghee) ಬೇಡಿಕೆ ಹೆಚ್ಚಿದೆ. ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆ ಪ್ರಸಾದಕ್ಕೂ ನಂದಿನಿ ತುಪ್ಪ ಬಳಕೆಗೆ ನಿರ್ಧರಿಸಲಾಗಿದೆ.
Advertisement
ಹಾಸನಾಂಬೆ ದೇವಾಲಯದ (Hasanamba Temple) ಗರ್ಭಗುಡಿ ಬಾಗಿಲು ತೆರೆಯಲು ತಿಂಗಳು ಮಾತ್ರ ಬಾಕಿ ಇದೆ. ಹಾಸನಾಂಬ ಮಹೋತ್ಸವದಲ್ಲಿ ಭಕ್ತರಿಗೆ ನೀಡುವ ಲಡ್ಡು ಪ್ರಸಾದವನ್ನು ನಂದಿನಿ ತುಪ್ಪದಿಂದಲೇ ತಯಾರಿಸಲು ನಿರ್ಧರಿಸಲಾಗಿದೆ. ಇದರ ಜವಾಬ್ದಾರಿಯನ್ನು ಬೆಂಗಳೂರಿನ ಇಸ್ಕಾನ್ ಸಂಸ್ಥೆಗೆ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ಕೆಲವೇ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಇದನ್ನೂ ಓದಿ: Badlapur Encounter | ಆರೋಪಿ ತಲೆಗೆ ಗುಂಡಿಟ್ಟಿದ್ದು ಏಕೆ? – ಪ್ರಕರಣ ಟೈಮ್‌ಲೈನ್ ಕೊಡುವಂತೆ ʻಹೈʼಸೂಚನೆ!
Advertisement
Advertisement
Advertisement
ರಾಜ್ಯದಲ್ಲಿ ನಂದಿನಿ ತುಪ್ಪ, ಹಾಲು ಹಾಗೂ ಹಾಲಿನ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಾಗಿದೆ. ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಹಾಲು ಒಕ್ಕೂಟದಲ್ಲೂ ಬೇಡಿಕೆ ಹೆಚ್ಚಿದೆ. ತಿರುಪತಿ ಲಡ್ಡು ವಿವಾದದ ನಂತರದಲ್ಲಿ ಹಾಲಿನ ಉತ್ಪನ್ನದ ಬೇಡಿಕೆ ಹೆಚ್ಚಳವಾಗಿದೆ. ಈಗಾಗಲೇ ಧಾರ್ಮಿಕ ಧತ್ತಿ ಇಲಾಖೆಯ ದೇವಸ್ಥಾನಗಳಲ್ಲೂ ನಂದಿನಿ ತುಪ್ಪ ಬಳಕೆಗೆ ಸರ್ಕಾರ ಆದೇಶಿಸಿದೆ. ಹೀಗಾಗಿ ಹೊಸದಾಗಿ ಡೀಲರ್ಸ್ಗಳು ಏಜೆನ್ಸಿಗಾಗಿ ಅರ್ಜಿ ಹಾಕುತ್ತಿದ್ದಾರೆ. ನಂದಿನಿ ಉತ್ಪನ್ನಗಳು ಮಾರಾಟಕ್ಕೆ ಸಾಲುತ್ತಿಲ್ಲ. ಇದನ್ನೂ ಓದಿ: ರಾಜ್ಯದಲ್ಲಿ ಭ್ರಷ್ಟಾಚಾರ ಆರೋಪ ಇಲ್ಲದ ಒಬ್ಬನೇ ಒಬ್ಬ ಬಿಜೆಪಿ ನಾಯಕನನ್ನು ತೋರಿಸಿದರೆ ಸನ್ಮಾನ: ಸಿಎಂ
ಒಟ್ಟಿನಲ್ಲಿ ತಿರುಪತಿ ಲಡ್ಡು ವಿವಾದ ಬಳಿಕ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಿದೆ. ಇದೇ ವಿಶ್ವಾಸ ಉಳಿಸಿಕೊಂಡು ಮುಂದೆ ಹೋಗಬೇಕಿರುವ ಸವಾಲು ಸಹ ಕೆಎಂಎಫ್ ಮುಂದಿದೆ. ಇದನ್ನೂ ಓದಿ: ಯುಪಿ ಬಳಿಕ ಹಿಮಾಚಲದಲ್ಲೂ ಆಹಾರ ಮಳಿಗೆಗಳ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ!