Bengaluru CityKarnatakaLatestLeading NewsMain PostNational

ಮತ್ತೆ ಶುರುವಾಯ್ತು ಕೊರೊನಾ ಭೀತಿ – ಮಹಾರಾಷ್ಟ್ರದಲ್ಲಿ ದಿಢೀರ್ ಸ್ಫೋಟ

Advertisements

ಮುಂಬೈ/ಬೆಂಗಳೂರು: ದೇಶದಲ್ಲಿ ಕೊರೋನಾ ಜೂನ್ ಹೊತ್ತಿಗೆ ಮತ್ತೆ ಕಾಡಲಿದೆ ಎನ್ನುವ ಲೆಕ್ಕಾಚಾರ, ಎಚ್ಚರಿಕೆಗಳ ಮಧ್ಯೆಯೇ ಮಹಾರಾಷ್ಟ್ರದಲ್ಲಿ ಅಪಾಯಕಾರಿ ವೈರಾಣು ಸ್ಫೋಟವಾಗಿದೆ. ಒಂದೂವರೆ ತಿಂಗಳ ಬಳಿಕ ದಿಢೀರ್ 7 ಪಟ್ಟು ಸೋಂಕಿತರ ಸಂಖ್ಯೆ ಏರಿಕೆ ಆಗಿದೆ.

626 ರಿಂದ 4,500ಕ್ಕೆ ಸಕ್ರಿಯ ಪ್ರಕರಣಗಳ ಸಂಖ್ಯೆ ದಿಢೀರ್ ಹೆಚ್ಚಾಗಿದೆ. ಮುಂಬೈ, ಪುಣೆಯಲ್ಲಿ ಶೇ.97ರಷ್ಟು ಸಕ್ರಿಯ ಪ್ರಕರಣಗಳಿವೆ. ಹೀಗಾಗಿ, ಎಚ್ಚೆತ್ತ ಸಿಎಂ ಉದ್ಧವ್ ಠಾಕ್ರೆ ತುರ್ತಾಗಿ ಕೊರೋನಾ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿ ಹೈಅಲರ್ಟ್ ಘೋಷಿಸಿದ್ದಾರೆ. ಇದನ್ನೂ ಓದಿ: ಮಂಗಳೂರಿನ ಮುಲ್ಕಿ ಬಳಿ 5 ಕೋಟಿಯ ರಕ್ತಚಂದನ ವಶ- ಆಂಧ್ರ ಲಾರಿಗೆ ತಮಿಳುನಾಡಿನ ಕಾರು ಎಸ್ಕಾರ್ಟ್

COVID

ಕೊರೋನಾ ಸ್ಥಿತಿಗತಿಗಳು, ವೈದ್ಯಕೀಯ ಸೇವೆಗಳ ಉಪಲಭ್ಯತೆ ಬಗ್ಗೆ ಚರ್ಚಿಸಿದ ಉದ್ಧವ್ ಠಾಕ್ರೆ, ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಾಗದಂತೆ, ಆಕ್ಸಿಜನ್ ಪೂರೈಕೆ, ಔಷಧಗಳ ದಾಸ್ತಾನು ಕಡಿಮೆಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದರು. ಜ್ವರ, ಶೀತ, ಕೆಮ್ಮು ಅಥವಾ ಎದೆನೋವು ಕಂಡು ಬಂದರೆ ಕೊರೋನಾ ಪರೀಕ್ಷೆ ಮಾಡಿಸಿ ಎಂದು ರಾಜ್ಯದ ಜನರಿಗೆ ಸಂದೇಶ ನೀಡಿದ್ದಾರೆ.

ಕರ್ನಾಟಕದಲ್ಲೂ ಕೊರೊನಾ ಏರಿಳಿಕೆ ಕಂಡಿದ್ದು, ಕಳೆದ 24 ಗಂಟೆಯಲ್ಲಿ 297 ಮಂದಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲೇ 276 ಮಂದಿಗೆ ಸೋಂಕು ಅಂಟಿದೆ. ಸದ್ಯ ಸಾವಾಗದೇ ಇರುವುದು ಸಮಾಧಾನಕರ ಸಂಗತಿ. ಇದನ್ನೂ ಓದಿ: ಆರೋಗ್ಯ ಸಚಿವ ಸುಧಾಕರ್‌ಗೆ ಕೊರೊನಾ ಪಾಸಿಟಿವ್

ಕರ್ನಾಟಕ ಆರೋಗ್ಯ ಸಚಿವ ಸುಧಾಕರ್‌ಗೆ ಇದೇ ಮೊದಲ ಬಾರಿ ಕೋವಿಡ್ ಪಾಸಿಟಿವ್ ಆಗಿದೆ. 3 ಅಲೆಗಳಲ್ಲಿ ಸೋಂಕಿನಿಂದ ಪಾರಾಗಿದ್ದ ನನಗೆ ಪಾಸಿಟಿವ್ ಆಗಿದೆ ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ. ಸದ್ಯ ಅವರು ಹೋಂ ಐಸೋಲೇಷನ್‌ನಲ್ಲಿದ್ದಾರೆ.

ಸೋನಿಯಾ ಗಾಂಧಿಗೂ ಕೊರೋನಾ ಪಾಸಿಟಿವ್ ಆಗಿದ್ದು, ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಧಾನಿ ಮೋದಿ ಟ್ವೀಟ್‌ನಲ್ಲಿ ಹಾರೈಸಿದ್ದಾರೆ. ಇದರ ನಡುವೆ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಕೆಸಿ ವೇಣುಗೋಪಾಲ್‌ಗೂ ಕೊರೋನಾ ಪಾಸಿಟಿವ್ ಆಗಿದೆ.

Leave a Reply

Your email address will not be published.

Back to top button