ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಳ

Public TV
1 Min Read
mys kabini

ಮೈಸೂರು: ಕೇರಳದ (Kerala) ವಯನಾಡು ಸೇರಿದಂತೆ ಕಬಿನಿ ಜಲಾನಯನ (Kabini Reservoir) ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, ಮೈಸೂರು (Mysuru) ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಒಳಹರಿವು ಮತ್ತಷ್ಟು ಹೆಚ್ಚಳವಾಗಿದೆ.

ಕಬಿನಿ ಜಲಾಶಯದ ಇಂದಿನ ಒಳಹರಿವಿನ ಪ್ರಮಾಣ 4,356 ಕ್ಯೂಸೆಕ್ ಇದ್ದು, ಇದು ಈ ವರ್ಷದ ಹೆಚ್ಚಿನ ಒಳಹರಿವಾಗಿದೆ. ಜಲಾಶಯದಿಂದ ಮೈಸೂರು, ಬೆಂಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಕುಡಿಯುವ ನೀರಿಗಾಗಿ 300 ಕ್ಯೂಸೆಕ್ ನೀರು ಹೊರ ಹರಿವು ಇದೆ. ಇದನ್ನೂ ಓದಿ: ಪಿಎಂ ಹುದ್ದೆಗೆ ರಾಜ್ಯದಿಂದ ಯಾರೂ ಅಭ್ಯರ್ಥಿ ಇಲ್ಲ ಎಂದಿಲ್ಲ: ಸಿಎಂ ಸ್ಪಷ್ಟನೆ

kabini dam

ಸಮುದ್ರ ಮಟ್ಟದಿಂದ 2,284 ಅಡಿ ಗರಿಷ್ಠ ಸಾಮರ್ಥ್ಯದ ಕಬಿನಿ ಜಲಾಶಯದಲ್ಲಿ ಇಂದು 2,258 ಅಡಿ ನೀರಿದೆ. ಇದನ್ನೂ ಓದಿ: ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ – ಡಿಸಿ, ಸಿಇಒಗಳಿಗೆ ಹೈ ಅಲರ್ಟ್ ಎಂದ ಸಿಎಂ ಸಿದ್ದರಾಮಯ್ಯ

ಕಬಿನಿ ಜಲಾಶಯದ ಒಳಹರಿವು ಹೆಚ್ಚಳ
ಜಲಾಶಯ ಗರಿಷ್ಠ ಮಟ್ಟ: 2,284 ಕ್ಯೂಸೆಕ್
ಇಂದಿನ ಮಟ್ಟ: 2,258 ಕ್ಯೂಸೆಕ್
ಒಳ ಹರಿವು: 4,356 ಕ್ಯೂಸೆಕ್
ಹೊರ ಹರಿವು: 300 ಕ್ಯೂಸೆಕ್

Share This Article