ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಉತ್ತಮವಾಗಿ ಪೂರ್ವ ಮುಂಗಾರು ಸುರಿಯುತ್ತಿರುವ ಹಿನ್ನೆಲೆ ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣದ ತಾಲೂಕಿನ ಕೆಆರ್‌ಎಸ್ ಡ್ಯಾಂಗೆ (KRS Dam) ಒಳಹರಿವು ಹೆಚ್ಚಳವಾಗಿದೆ.
ಉತ್ತಮವಾಗಿ ಮಳೆ (Rain) ಆಗುತ್ತಿರುವ ಕಾರಣ ಇಂದು (ಶನಿವಾರ) ಡ್ಯಾಂಗೆ 3,365 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ನಿನ್ನೆ ಕೆಆರ್‌ಎಸ್ ಡ್ಯಾಂಗೆ 2,509 ಕ್ಯೂಸೆಕ್ ಒಳಹರಿವು ಇತ್ತು. 24 ಗಂಟೆಗಳಲ್ಲಿ ಸದ್ಯ 856 ಕ್ಯೂಸೆಕ್ ನೀರು ಹೆಚ್ಚಳವಾಗಿದೆ. ಇಷ್ಟು ದಿನಗಳ ಕಾಲ ಬೇಸಿಗೆಯ ದಿನಗಳಲ್ಲಿ ರೈತರು ಹಾಗೂ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು. ಇದೀಗ ಉತ್ತಮವಾಗಿ ಮಳೆಯಾಗುತ್ತಿದ್ದು, ಕೆಆರ್‌ಎಸ್ ಡ್ಯಾಂಗೆ ಒಳಹರಿವು ಹೆಚ್ಚಳ ಆಗುತ್ತಿರೋದು ರೈತರು ಹಾಗೂ ಜನರಲ್ಲಿ ಸಂತಸ ತಂದಿದೆ. ಇದನ್ನೂ ಓದಿ: ಇಂದು ಭಾರೀ ಮಳೆ ಸಾಧ್ಯತೆ- ಕೇರಳದ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಇನ್ನೂ 124.80 ಅಡಿಗಳ ಗರಿಷ್ಠ ಮಟ್ಟದ ಕೆಆರ್‌ಎಸ್ ಡ್ಯಾಂನಲ್ಲಿ ಈಗ 82.30 ಅಡಿ ನೀರು ಇದ್ದು, 49.452 ಟಿಎಂಸಿ ಗರಿಷ್ಠ ಸಾಂದ್ರತೆಯ ಡ್ಯಾಂನಲ್ಲಿ 11.837 ಟಿಎಂಸಿ ನೀರು ಶೇಖರಣೆಯಾಗಿದೆ. ಇನ್ನೂ ಕೆಆರ್‌ಎಸ್ ಡ್ಯಾಂಗೆ 3,365 ಕ್ಯೂಸೆಕ್ ಒಳಹರಿವು ಇದ್ದು, 528 ಕ್ಯೂಸೆಕ್ ಹೊರಹರಿವು ಇದೆ. ಇದನ್ನೂ ಓದಿ: ಇಂದು ಆರನೇ ಹಂತದ ಚುನಾವಣೆ- 58 ಕ್ಷೇತ್ರಗಳಿಗೆ ಮತದಾನ